ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್. ಋಗ್ವೇದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
20ಕ್ಕೂ ಹೆಚ್ಚು ದೇಶ-ವಿದೇಶಗಳ ಭಾಷೆಗಳಲ್ಲಿ 48,000ಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಕೋಟ್ಯಾಂತರ ಕಲಾರಸಿಕರ ಹೃದಯದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದ “ಸಂಗೀತದ ತಾಯಿ” ಎಸ್. ಜಾನಕಿ ಅವರು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

Also read: Shimoga | ಮೊಬೈಲ್ ಬಳಕೆ, ಅಸಭ್ಯ ಹಾಡುಗಳಿಗೆ ಬ್ರೇಕ್: ಬಸ್ ಚಾಲಕರಿಗೆ ಎಚ್ಚರಿಕೆ
ಅರಮನೆಗಳ ನಗರವೆಂದೇ ಖ್ಯಾತಿ ಪಡೆದ ಸಾಂಸ್ಕೃತಿಕ ನಾಡಿನಲ್ಲಿ ಅವರು ಸ್ವರ್ಗಸ್ಥರಾಗಿರುವುದು ಅಪಾರ ನಷ್ಟವಾಗಿದೆ. ಲಕ್ಷಾಂತರ ಗಾಯಕರಿಗೆ ಆದರ್ಶವಾಗಿದ್ದ ಅವರು ಸರಳತೆ ಹಾಗೂ ಮೇರು ವ್ಯಕ್ತಿತ್ವದ ನಾದ ದೇವತೆಯಾಗಿದ್ದರು.
ಭಾಷೆ, ಗಡಿ, ಧರ್ಮದ ಎಲ್ಲ ಬಂಧನಗಳನ್ನು ಮೀರಿ ತಮ್ಮ ಅಮೃತಮಯ ಧ್ವನಿಯಿಂದ ಜಗತ್ತಿನಾದ್ಯಂತ ಜನರಿಗೆ ನೆಮ್ಮದಿ ನೀಡಿದ ಜಾನಕಿ ಅವರು ತಮ್ಮ ಗಾಯನದ ಮೂಲಕ ಸದಾಕಾಲ ಅಮರರಾಗಿಯೇ ಉಳಿಯಲಿದ್ದಾರೆ ಎಂದು ಋಗ್ವೇದಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









