ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ನೆಹರೂ ಕ್ರೀಡಾಂಗಣದಲ್ಲಿ ಸ್ಟೈಲ್ ಡ್ಯಾನ್ಸ್ ಗ್ರೂಪ್ (Style Dance Group) ಆಯೋಜಿಸಿದ್ದ ವಿಶ್ವದಾಖಲೆಯ ನೃತ್ಯ ಪ್ರದರ್ಶನ (Dance Performance) ಅದ್ಧೂರಿಯಾಗಿ ನಡೆಯಿತು.
ಸಂಸ್ಥೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ನಿರಂತರವಾಗಿ 2 ಗಂಟೆ 8 ಸೆಕೆಂಡ್‌ಗಳ ಕಾಲ ನೃತ್ಯ ಪ್ರದರ್ಶಿಸುವ ಮೂಲಕ ನೋಬಲ್ ಬುಕ್ ಆಫ್ ರೆಕಾರ್ಡ್ಸ್ (Noble Book of Record) ದಾಖಲೆ ನಿರ್ಮಿಸಿದ್ದಾರೆ.
ಈ ವಿಶ್ವದಾಖಲೆ ಪ್ರಯತ್ನಕ್ಕಾಗಿ ಹಲವು ದಿನಗಳಿಂದ ವಿದ್ಯಾರ್ಥಿಗಳು ಕಠಿಣ ಅಭ್ಯಾಸ ನಡೆಸಿದ್ದರು ಎಂದು ಸಂಸ್ಥೆಯ ಎನ್. ಶಶಿಕುಮಾರ್ ತಿಳಿಸಿದ್ದಾರೆ.
Also read: ಆಟವಾಡುತ್ತಾ ರಸ್ತೆಗೆ ಬಂದ ಬಾಲಕ | ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವು
ವಿವಿಧ ಶೈಲಿಯ ನೃತ್ಯಗಳನ್ನು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಕ್ರೀಡಾಂಗಣದಲ್ಲಿ ಪೋಷಕರು, ನೃತ್ಯಾಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಂಡವನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಧನಂಜಯ ಸರ್ಜಿ, ಉಪಾಧ್ಯಕ್ಷ ಈ ವಿಶ್ವಾಸ್ , ಕಾರ್ಯದರ್ಶಿ ಸಿಂಪ್ಲೆಕ್ಸ್ ರಮೇಶ್ , ಯುವ ನಾಯಕರಾದ ಶರತ್ ಮರಿಯಪ್ಪ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಉಮೇಶ್ , ಕ್ರೀಡಾ ಇಲಾಖೆ ನಿರ್ದೇಶಕ ರೇಖ್ಯಾ ನಾಯಕ್, ನೊಬಲ್ ವರ್ಡ್ ರೆಕಾರ್ಡ್ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಎಸ್ ಕೃಷ್ಣಮೂರ್ತಿ , ಮತ್ತು ನೃತ್ಯ ಸಂಸ್ಥೆಯ ಮುಖ್ಯಸ್ಥರಾದ ಶಶಿಕುಮಾರ್ , ನೃತ್ಯ ಸ೦ಸ್ಥೆಯ ವ್ಯವಸ್ಥಾಪಕರಾದ ವಿನಯ್ , ನೃತ್ಯ ನಿದೇ೯ಶಕರಾದ ಸೃಜನ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








