ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಐಟಿಐ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ 19 ವರ್ಷದ ಯುವಕನೊಬ್ಬ ಭೀಕರ ರಸ್ತೆ ಅಪಘಾತದಲ್ಲಿ (Accident) ಮೃತಪಟ್ಟಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನ ಕುಮುದ್ವತಿ ನದಿ ಸೇತುವೆ ಸಮೀಪ ನಡೆದಿದೆ.
ಮೃತ ಯುವಕನನ್ನು ಸಾಗರ ತಾಲೂಕಿನ ಗೌತಮಪುರ ಗ್ರಾಮದ ನಿವಾಸಿ ಮಂಜುನಾಥ್ ಅವರ ಪುತ್ರ ಮಿಲನ್ (19) ಎಂದು ಗುರುತಿಸಲಾಗಿದೆ.
Also Read>> ಶಂಕರರು ಸೈನ್ಯ, ಸಂಪತ್ತುಗಳಿಲ್ಲದೇ ಧರ್ಮ ಸಂರಕ್ಷಿಸಿದರು | ರಾಮಚಂದ್ರಾಪುರ ಶ್ರೀ
Accident : ಪರೀಕ್ಷೆ ಮುಗಿಸಿ ವಾಪಸಾಗುವ ವೇಳೆ ಅಪಘಾತ
ಮಿಲನ್ ಶಿರಾಳಕೊಪ್ಪದಲ್ಲಿ ನಡೆದ ಐಟಿಐ ಪರೀಕ್ಷೆಗೆ ಹಾಜರಾಗಿದ್ದನು. ಪರೀಕ್ಷೆ ಮುಗಿದ ಬಳಿಕ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಗೌತಮಪುರ ಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಶಿಕಾರಿಪುರ ಮಾರ್ಗದ ಕುಮುದ್ವತಿ ಸೇತುವೆ ಸಮೀಪ ಈ ದುರ್ಘಟನೆ ಸಂಭವಿಸಿದೆ.
ಮಿಲನ್ ಚಲಾಯಿಸುತ್ತಿದ್ದ ಬೈಕ್‌ಗೆ ಶಿಕಾರಿಪುರ ಕಡೆಯಿಂದ ಅತಿವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಿಲನ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲು
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಿಕಾರಿಪುರ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಈ ದುರ್ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದೆ.
ITI Student Killed in Road Accident While Returning Home After Examination
Shivamogga: A 19-year-old ITI student was killed in a tragic road accident near the Kumudvathi River Bridge in Shikaripura taluk of Shivamogga district while returning home after completing his examination.
The deceased has been identified as Milan (19), son of Manjunath, a resident of Gautamapura village in Sagar taluk.
Accident After Examination
According to police and local sources, Milan had travelled to Shiralakoppa to appear for his ITI examination. After completing the exam, he was returning to his native village, Gautamapura, on his motorcycle along with his friends, who were riding separate bikes.
When Milan reached the Kumudvathi Bridge near Shikaripura, a speeding canter truck coming from the opposite direction allegedly collided with his motorcycle.
The impact of the collision was severe, and Milan sustained fatal injuries. He died on the spot before he could receive medical assistance.
Police Register Case
On receiving information about the accident, Shikaripura Town Police rushed to the scene and conducted an inspection. The body was shifted for post-mortem examination.
A case has been registered at the Shikaripura Town Police Station, and further investigation is underway.
The untimely death of the young student has left his family, friends, and villagers in deep shock and mourning.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










