ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ನೈರುತ್ಯ ರೈಲ್ವೆಯ ಮೈಸೂರು ವಿಭಾಗದ (Yedakumari) ಯಡಕುಮಾರಿ – ಶ್ರಿವಾಗಿಲು ರೈಲು ನಿಲ್ದಾಣಗಳ ಮಧ್ಯೆ ಇಂದು ಸಂಜೆ ಭೂಕುಸಿತ (Landslip) ಸಂಭವಿಸಿದ ಪರಿಣಾಮ ಕಾರವಾರ (Karwar) ಹಾಗೂ ಬೆಂಗಳೂರು (Bengaluru ) ನಡುವಿನ ರೈಲಿನ ಮಾರ್ಗ ಬದಲಾವಣೆ ಮಾಡಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು ರಾತ್ರಿ ಸುಮಾರು 08:45 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಅದರ ಪರಿಣಾಮವಾಗಿ ಹಲವು ರೈಲುಗಳ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ತಿಳಿಸಿದೆ.
(Karwar) ಕಾರವಾರ–ಬೆಂಗಳೂರು ರೈಲು ಮಾರ್ಗ ಬದಲಾವಣೆ
ಈ ಹಿನ್ನೆಲೆಯಲ್ಲಿ, ಕೆಳಕಂಡ ರೈಲಿನ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಿಸಲಾಗಿದೆ:
ರೈಲು ಸಂಖ್ಯೆ 16596 ಕಾರವಾರ – ಕೆಎಸ್‌ಆರ್ ಬೆಂಗಳೂರು (01.08.2026 ರಂದು ಪ್ರಯಾಣ ಆರಂಭಿಸಿದ ರೈಲು)
ಈ ರೈಲು ಮಂಗಳೂರು ಜಂಕ್ಷನ್, ಶೋರಣೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಈರೋಡ್ ಜಂಕ್ಷನ್, ಜೋಲಾರ್ಪೇಟೈ ಮಾರ್ಗವಾಗಿ ಕೆಎಸ್‌ಆರ್ ಬೆಂಗಳೂರು ತಲುಪಲಿದೆ.
ಪ್ರಸ್ತುತ ಹಳಿ ದುರಸ್ತಿ ಕಾಮಗಾರಿಗಳು ನಡೆಯುತ್ತಿದ್ದು, ದಕ್ಷಿಣ ಪಶ್ಚಿಮ ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ನಿಗಾದಲ್ಲಿ ಇಟ್ಟುಕೊಂಡು ಪ್ರಯಾಣಿಕರ ಸುರಕ್ಷತೆ ಹಾಗೂ ಸೇವೆಯ ಸುಗಮತೆಗೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ರೈಲು ಸಂಚಾರದಲ್ಲಿ ಇನ್ನಷ್ಟು ಬದಲಾವಣೆಗಳಿದ್ದಲ್ಲಿ ನಂತರ ತಿಳಿಸಲಾಗುವುದು ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.

- ರೈಲು ಸಂಖ್ಯೆ 16586 ಮುರ್ಡೇಶ್ವರ – ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್
ಈ ರೈಲು 01.08.2026ರಂದು ಮುರ್ಡೇಶ್ವರದಿಂದ ಪ್ರಯಾಣ ಆರಂಭಿಸಿ ರಾತ್ರಿ 08:50ಕ್ಕೆ ಶ್ರಿವಾಗಿಲು ತಲುಪಿದೆ. - ರೈಲು ಸಂಖ್ಯೆ 16512 ಕೋಜಿಕೋಡ್ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್
01.08.2026ರಂದು ಕೊಜಿಕೊಡ್ನಿಂದ ಹೊರಟ ಈ ರೈಲು ರಾತ್ರಿ 09:56ಕ್ಕೆ ಶ್ರಿವಾಗಿಲು ತಲುಪಿದೆ. - ರೈಲು ಸಂಖ್ಯೆ 16595 ಕೆಎಸ್‌ಆರ್ ಬೆಂಗಳೂರು – ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್
ಈ ರೈಲು ಹಾಸನ ರೈಲನ್ನೂ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

Landslip : ಪುನಶ್ಚೇತನ ಕಾರ್ಯಾಚರಣೆ ಆರಂಭ
ಭೂಕುಸಿತ ಸ್ಥಳದಲ್ಲಿ ಪುನಶ್ಚೇತನ ಕಾರ್ಯಾಚರಣೆ ತ್ವರಿತವಾಗಿ ಆರಂಭಿಸಲಾಗಿದೆ. ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣದಿಂದ ರಾತ್ರಿ 10:03ಕ್ಕೆ ರಿಲೀಫ್ ಮೆಟೀರಿಯಲ್ ರೈಲು ಹೊರಟು 10:40ಕ್ಕೆ ಶ್ರಿವಾಗಿಲು ತಲುಪಿದ್ದು, ಈಗ ಭೂಕುಸಿತ ಸ್ಥಳಕ್ಕೆ ತೆರಳಿ ಪುನರ್ ಸ್ಥಾಪನಾ ಕಾರ್ಯಗಳಿಗೆ ನೆರವಾಗುತ್ತಿದೆ.
Also Read>> ಟಾಟಾ ಮುಂಬೈ ಮ್ಯಾರಥಾನ್ 2027 ನೋಂದಣಿ ಆರಂಭ; ಜ.17ರಂದು ಓಟಕ್ಕೆ ಚಾಲನೆ
ರೈಲ್ವೆ ಸಿಬ್ಬಂದಿ ಹಾಗೂ ತಾಂತ್ರಿಕ ತಂಡಗಳು ಸ್ಥಳದಲ್ಲೇ ತಂಗಿದ್ದು, ಭೂಕುಸಿತ ಮಣ್ಣು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿವೆ.
ಪ್ರಯಾಣಿಕರ ಸೌಲಭ್ಯಕ್ಕಾಗಿ ಕ್ರಮಗಳು
ಪ್ರಯಾಣಿಕರ ಅನುಕೂಲಕ್ಕಾಗಿ ಹಾಸನ, ಸುಬ್ರಹ್ಮಣ್ಯ ರಸ್ತೆ, ಶ್ರಿವಾಗಿಲು ಹಾಗೂ ಬಂಟವಾಳ ರೈಲು ನಿಲ್ದಾಣಗಳಲ್ಲಿ ಆಹಾರ (ಕೇಟರಿಂಗ್) ವ್ಯವಸ್ಥೆ ಮಾಡಲಾಗಿದೆ.
ಸುರಕ್ಷತೆಗೆ ಪ್ರಾಮುಖ್ಯತೆ
ದಕ್ಷಿಣ ಪಶ್ಚಿಮ ರೈಲ್ವೆಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತು ಸೇವೆಗಳ ಪುನರ್ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ರೈಲು ಸಂಚಾರದಲ್ಲಿ ಯಾವುದೇ ಬದಲಾವಣೆಗಳಿದ್ದರೆ ನಂತರ ತಿಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







