No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Saturday, October 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಭೋಜನವೆಂಬುದು ಯಜ್ಞ, ಸರಿಯಾಗಿ ಮಾಡಿದ ಊಟಕ್ಕೆ ಅಗ್ನಿಹೋತ್ರದ ಫಲ: ರಾಘವೇಶ್ವರ ಶ್ರೀ

kalpa News by kalpa News
August 8, 2026
in ಉತ್ತರ ಕನ್ನಡ
0
Agnihothra-meal-consumed-properly-Raghaveshwara Shri
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಪ್ರತಿಯೊಬ್ಬ ಮನುಷ್ಯನಿಗೂ ಇಷ್ಟು ಬಾರಿ ಉಸಿರಾಟ ಎಂದು ವಿಧಿ ಮೊದಲೇ ನಿಗದಿಸಿದಂತೆ, ಪ್ರತಿಯೊಬ್ಬ ಮನುಷ್ಯನಿಗೂ ಅವನ ಜೀವಿತಾವಧಿಯಲ್ಲಿ ಇಷ್ಟು ಆಹಾರ (Food) ಸ್ವೀಕರಿಸಬಹುದು ಎಂದು ವಿಧಿ ಬರೆದಿರುತ್ತದೆ. ದೀರ್ಘ ಉಸಿರಾಟದ ಮೂಲಕ ಹೆಚ್ಚು ಕಾಲ ಜೀವಿಸಬಹುದು. ಹಾಗೆಯೇ ಅಗತ್ಯಕ್ಕಿಂತ ಹೆಚ್ಚೆಚ್ಚೆ ಆಹಾರ ಸ್ವೀಕರಿಸಿದಂತೆ ಅವನು ಮೃತ್ಯುವಿಗೆ ಹೆಚ್ಚೆಚ್ಚೆ ಹತ್ತಿರವಾಗುತ್ತಾ ಸಾಗುತ್ತಾನೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

ಗೋಕರ್ಣದ (Gokarna) ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ’ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು.

ಅನ್ನವೇ ಮೃತ್ಯು ಹಾಗೂ ಅನ್ನವೇ ಜೀವನಕ್ಕೆ ಕಾರಣ ಎಂದು ಭಾರತೀಯ ಶಾಸ್ತ್ರಗಳು ಹೇಳಿವೆ. ಆಹಾರವನ್ನು ಸರಿಯಾಗಿ ಬಳಸಿದಾಗ ಅದು ಜೀವಕ್ಕೆ ಪೂರಕ ಮತ್ತು ವ್ಯತಿರಿಕ್ತವಾಗಿ ಬಳಸಿದಾಗ ಅದೇ ಸಾವಿಗೆ ಕಾರಣವಾಗುತ್ತದೆ. ಬೋಧಾಯನರು ಧರ್ಮಸೂತ್ರಗಳಲ್ಲಿ ಭೋಜನವನ್ನು ಯಜ್ಞ ಎಂದಿದ್ದು, ಶಂಕರಾಚಾರ್ಯರು ತಮ್ಮ ಪ್ರಪಂಚಸಾರ ತಂತ್ರದಲ್ಲಿ ಇದೇ ಅಭಿಪ್ರಾಯವನ್ನು ಹೇಳಿದ್ದಾರೆ. ಆಯುರ್ವೇದ ತಜ್ಞರಾದ ಚರಕ – ಸುಶೃತರೂ ಕೂಡ ಭೋಜನವನ್ನು ಯಜ್ಞ ಎಂದು ಕರೆದಿದ್ದು, ಉಪನಿಷತ್ತುಗಳೂ ಕೂಡ ಭೋಜನವನ್ನು ಯಜ್ಞ ಎಂದಿವೆ ಎಂದು ತಿಳಿಸಿದರು.PES Shivamogga

ನಮ್ಮೊಳಗಿರುವ ಜಠರಾಗ್ನಿಯೇ ಅಗ್ನಿಯಾಗಿದ್ದು, ನಾವು ಮಾಡುವ ಊಟವೇ ಇದಕ್ಕೆ ಅರ್ಪಿಸುವ ಹವಿಸ್ಸಾಗಿದೆ. ನಮಗೇ ಎಂದು ಕೊಳ್ಳದೇ ನಮ್ಮೊಳಗಿರುವ ಪರಮಾತ್ಮನಿಗೆ ಎಂದು ಊಟವನ್ನು ವಿಧಿವತ್ತಾಗಿ ಸೇವಿಸಿದಾಗ ಅದು ನಿಜವಾಗಿ ಯಜ್ಞವೇ ಆಗುತ್ತದೆ. ಸರಿಯಾದ ಕ್ರಮ ಹಾಗೂ ಹೊತ್ತಿನಲ್ಲಿ ಮಾಡುವ ಭೋಜನವು ಅಗ್ನಿಹೋತ್ರವೇ (Agnihothra) ಆಗುತ್ತದೆ. ಈ ಕುರಿತಾಗಿ ಪ್ರಾಣಾಗ್ನಿಹೋತ್ರೋಪನಿಷತ್ ಎಂಬ ಉಪನಿಷತ್ತೇ ಇದ್ದು, ಇದು ಆಹಾರದ ವಿಧಿ – ನಿಷೇಧಗಳನ್ನು ಹಾಗೂ ಅದರಂತೆ ನಡೆದುಕೊಂಡಾಗ ಆಗುವ ವಿವಿಧ ಲಾಭಗಳನ್ನು ತಿಳಿಸುತ್ತದೆ ಎಂದು ವಿವರಿಸಿದರು.

Also read>> ಶಿಕಾರಿಪುರ : ಕುಮದ್ವತಿ ಸೆಂಟ್ರಲ್ ಸ್ಕೂಲ್’ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಉಪನ್ಯಾಸ

ಭೋಜನವನ್ನು ಸ್ವೀಕರಿಸುವಾಗ ಭಾವವೇ ಪ್ರಧಾನವಾಗಿದ್ದು, ಜೊತೆಗೆ ಯಾವ ಕಾಲದಲ್ಲಿ, ಯಾವ ಸ್ಥಳದಲ್ಲಿ, ಯಾವ ಪ್ರಮಾಣದಲ್ಲಿ ಹಾಗೂ ಯಾವುದನ್ನು ಊಟಮಾಡಬೇಕು ಎಂದು ಸರಿಯಾಗಿ ತಿಳಿದು ಆಹಾರವನ್ನು ಸ್ವೀಕರಿಸಿದಾಗ ಅದು  ಯಜ್ಞಕ್ಕಿಂತ ಕಡಿಮೆಯಲ್ಲ ಎಂದು ಶ್ರೀಗಳು ನಿರೂಪಿಸಿದರು.

Agnihothra : ಊಟವನ್ನು ಹೇಗೆ ಮಾಡಬೇಕು?

ನಮಗಾಗಿ ಎಂದು ಆಹಾರವನ್ನು ತಯಾರಿಸಬಾರದು. ಅತಿಥಿಗಳು, ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಹಾಗೂ ಕಷ್ಟದಲ್ಲಿ ಇರುವವರಿಗೆ ಆಹಾರವನ್ನು ನೀಡಬೇಕು. ಆನಂತರವಷ್ಟೇ ನಾವು ಆಹಾರವನ್ನು ಸ್ವೀಕರಿಸಬೇಕು. ಹೀಗೆ ಮಾಡದೇ, ನಾವೇ ಮೊದಲು ಊಟ ಮಾಡಿದರೆ ಅದು ಪಾಪವಾಗಿ ತಾಪದಿಂದ ನಮ್ಮನ್ನೇ ಸುಡುತ್ತದೆ ಎಂದು ಹೇಳಲಾಗಿದೆ. ಇದು ಪ್ರಾಚೀನ ಭಾರತದ ಶಾಸ್ತ್ರಕಾರರ ಹೃದಯ ವೈಶಾಲ್ಯವನ್ನು ತೋರಿಸುತ್ತದೆ ಎಂದರು.

ಪ್ರಾಣಾಂತಕವಾಗಬಹುದಾದ ಕುಲಾಂತರಿ ಗೋಧಿ

ಗೋಧೂಮ ಎಂದು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಗೋಧಿ ಇಂದು ತನ್ನ ಮೂಲಸ್ವರೂಪವನ್ನೇ ಕಳೆದುಕೊಂಡಿದೆ. ಇಂದು ಸಿಗುವ ಗೋಧಿ ಸಂಪೂರ್ಣ ರೂಪಾಂತರಗೊಂಡಿದೆ. ಕೃಷಿತೋಟದಲ್ಲಿ ಕ್ರಿಮಿಗಳಿಂದ ರಕ್ಷಿಸಲು ಗೋಧಿಯನ್ನು ರೂಪಾಂತರ ಮಾಡಲಾಗಿದ್ದು, ಇಂದು ಸಿಗುವ ಗೋಧಿಯನ್ನು ಮನುಷ್ಯನು ತಿನ್ನಲು ಯೋಗ್ಯವೇ? ಎಂದು ಪ್ರಶ್ನಿಸುವಂತಾಗಿದೆ. ಕೆಟ್ಟ ಗೋಧಿಯನ್ನು ಮತ್ತಷ್ಟು ಕೆಡಿಸಿರುವ ವಸ್ತುವೇ ಮೈದಾ. ಅದು ಮನುಷ್ಯನ ಜೀರ್ಣಾಂಗದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಆಧುನಿಕ ವಿಜ್ಞಾನ ಹೇಳುತ್ತಿದೆ. ಜೀರ್ಣಕ್ಕೆ ಕಷ್ಟವಾಗುವ ಆಹಾರವನ್ನು ತಿನ್ನಬಾರದು ಎಂದು ಅಭಿಪ್ರಾಯಪಟ್ಟರು.

CMR ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ. ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀಗಳಿಂದ ಆಶೀರ್ವಾದ ಪಡೆದರು. ಚಂದ್ರಶೇಖರ ದಂಟಿನಮನೆ ಮತ್ತು ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ನೆರವೇರಿಸಿದರು.

ಭಂಡಾರಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನೆರವೇರಿತು. ಭಂಡಾರಿ ಸಮಾಜದ ಅಧ್ಯಕ್ಷ ಶಿವು ಭಂಡಾರಿ, ಸುಬ್ರಾಯ ಭಂಡಾರಿ ಮನುವಳ್ಳಿ, ಹರಿಹರ ಭಂಡಾರಿ ಕಡತೋಕ ಸೇರಿದಂತೆ ಭಂಡಾರಿ ಸಮಾಜದ ನೂರಾರು ಗುರುಬಂಧುಗಳು ಪಾದುಕಾ ಪೂಜೆಯಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಜಿ.ವಿ ಹೆಗಡೆ, ಸತೀಶ ಭಟ್ಟ  ಧಾರೇಶ್ವರ, ದಿನ ಪ್ರಧಾನರಾದ ಪಾದೇಕಲ್ಲು ವಿಷ್ಣು ಭಟ್ ದಂಪತಿಗಳು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      Kumadvathi College ShikariuraKalpa News Advertising DisclaimerKalahamsa Infotech private limited

Tags: GokarnaKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaRaghaveshwara shriShri Ramachandrapura MuttUttara Kannadaಗೋಕರ್ಣ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿಕಾರಿಪುರ : ಕುಮದ್ವತಿ ಸೆಂಟ್ರಲ್ ಸ್ಕೂಲ್’ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಉಪನ್ಯಾಸ

Next Post

ನೈರುತ್ಯ ರೈಲ್ವೆ ಮಹಾಪ್ರಬಂಧಕ ಅನಂತ್‌ರಿಂದ ಮೈಸೂರು ರೈಲ್ವೆ ವಿಭಾಗದ ಸಮಗ್ರ ಪರಿಶೀಲನೆ

kalpa News

kalpa News

Next Post
South Western Railway (SWR) GM P Ananth Mysore Division Inspection

ನೈರುತ್ಯ ರೈಲ್ವೆ ಮಹಾಪ್ರಬಂಧಕ ಅನಂತ್‌ರಿಂದ ಮೈಸೂರು ರೈಲ್ವೆ ವಿಭಾಗದ ಸಮಗ್ರ ಪರಿಶೀಲನೆ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL