No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Sunday, October 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವೇಗ ಮತ್ತು ಪ್ರಗತಿಯ ಹೆಜ್ಜೆ | 2014ರ ನಂತರದಲ್ಲಿ ಭಾರತದ ಮೂಲಸೌಕರ್ಯ ಕ್ರಾಂತಿ

ಕಳೆದ 12 ವರ್ಷದಲ್ಲಿ ದೇಶದಲ್ಲಿ ಏನೆಲ್ಲಾ ಬೇರುಮಟ್ಟದ ಅಭಿವೃದ್ಧಿಯಾಗಿದೆ?

kalpa News by kalpa News
August 11, 2026
in Special Articles
0
India Infrastructure Development Growth After 2014
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಕಲ್ಪ ನ್ಯೂಸ್ ಫೋಕಸ್  |

ಭಾರತವು 2014 ನಂತರ ಮೂಲಸೌಕರ್ಯ ಅಭಿವೃದ್ಧಿಯಲ್ಲಿ (India Infrastructure Development)ಅಪೂರ್ವ ವೇಗ ಸಾಧಿಸಿದ್ದು, ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯ ದಿಕ್ಕನ್ನೇ ಬದಲಿಸಿದೆ. ರಸ್ತೆ, ರೈಲು, ವಿಮಾನಯಾನ, ಶಕ್ತಿ, ಆರೋಗ್ಯ, ಜಲಸಂಪನ್ಮೂಲ ಮತ್ತು ಸ್ಟಾರ್ಟಪ್ ಪರಿಸರ ಸೇರಿದಂತೆ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಕಳೆದ ಒಂದು ದಶಕದಲ್ಲಿ ಭಾರೀ ವಿಸ್ತರಣೆ ನಡೆದಿದೆ. ಅಂಕಿ-ಅಂಶಗಳ ಮೂಲಕ ನೋಡಿದರೆ, ಇಂದಿನ ಭಾರತದ ಮೂಲಸೌಕರ್ಯದ ಬಹುಪಾಲು 2014 ನಂತರ ನಿರ್ಮಿತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

2014ರ ನಂತರ ಭಾರತದ ಮೂಲಸೌಕರ್ಯ ಕ್ರಾಂತಿ

ಹೌದು… ಭಾರತವು 2014 ನಂತರ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅಪೂರ್ವ ವೇಗ ಸಾಧಿಸಿದ್ದು, ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯ ದಿಕ್ಕನ್ನೇ ಬದಲಿಸಿದೆ. ಮಾತ್ರವಲ್ಲದೇ, ವಿಶ್ವದರ್ಜೆ ಎನ್ನುವ ಗುಣಮಟ್ಟವನ್ನು ತಲುಪಿ ವರ್ಷಗಳೇ ಕಳೆದಿವೆ.

ಪ್ರಮುಖವಾಗಿ, ರಸ್ತೆ, ರೈಲು, ವಿಮಾನಯಾನ, ಶಕ್ತಿ, ಆರೋಗ್ಯ, ಜಲಸಂಪನ್ಮೂಲ ಮತ್ತು ಸ್ಟಾರ್ಟಪ್ ಪರಿಸರ ಸೇರಿದಂತೆ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಕಳೆದ ಒಂದು ದಶಕದಲ್ಲಿ ಭಾರೀ ವಿಸ್ತರಣೆ ನಡೆದಿದೆ. ಅಂಕಿ-ಅಂಶಗಳ ಮೂಲಕ ನೋಡಿದರೆ, ಇಂದಿನ ಭಾರತದ ಮೂಲಸೌಕರ್ಯದ ಬಹುಪಾಲು 2014 ನಂತರ ನಿರ್ಮಿತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ದೇಶದ ಆರ್ಥಿಕ ಶಕ್ತಿ, ಉದ್ಯೋಗ ಸೃಷ್ಟಿ ಹಾಗೂ ಜೀವನಮಟ್ಟದ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದೆ. ಹಲವು ದಶಕಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದ ಯೋಜನೆಗಳು ಕಳೆದ ದಶಕದಲ್ಲಿ ವೇಗ ಪಡೆದು, ದೇಶವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ರಾಷ್ಟ್ರವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.

ಅಧಿಕೃತ ಲಭ್ಯವಿರುವ ಅಂಕಿ ಅಂಶಗಳ ಆಧಾರದಲ್ಲಿ ಭಾರದ ದೇಶ 2014ರಿಂದೀಚೆಗೆ ಏನೆಲ್ಲೇ ಅಭಿವೃದ್ಧಿ ಮೈಲುಗಲ್ಲುಗಳನ್ನು ಸೃಷ್ಠಿಸಿದೆ, ಪ್ರಮುಖವಾಗಿ ಮೂಲಸೌಕರ್ಯ ವಿಚಾರದಲ್ಲಿ ಏನೆಲ್ಲಾ ಕ್ರಾಂತಿ ಮಾಡಿದೆ ಎಂಬ ಅಂಶಗಳನ್ನು ನೋಡೋಣ…

ರೈಲು ಮತ್ತು ಸಾರಿಗೆ ಕ್ಷೇತ್ರದ ಕ್ರಾಂತಿ

2014ಕ್ಕೂ ಮೊದಲು ಕೇವಲ ಆದೇಶದಲ್ಲಿ ಮಾತ್ರ ಉಳಿದಿದ್ದ ಸರಕು ಸಾಗಣೆ ವ್ಯವಸ್ಥೆಯನ್ನು ವೇಗಗೊಳಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್’ನಂತಹ ಅದ್ಬುತ ಯೋಜನೆಯೊಂದು 2014ರ ನಂತರ ವೇಗ ಪಡೆದುಕೊಂಡು ಶೂನ್ಯದಿಂದ 2,843 ಕಿಮೀ ಜಾಲಕ್ಕೆ ವಿಸ್ತರಣೆಯಾಗಿದೆ.

ಮೆಟ್ರೋ ರೈಲು ಜಾಲವು 250 ಕಿಮೀಯಿಂದ 1,250 ಕಿಮೀ ವರೆಗೆ ವಿಸ್ತರಿಸಿದ್ದು, 75% ಮೆಟ್ರೋ ಮೂಲಸೌಕರ್ಯ ಹೊಸದಾಗಿದೆ.

https://kalpa.news/wp-content/uploads/2026/08/WhatsApp-Video-2026-08-09-at-12.57.11-PM.mp4

ರೈಲ್ವೆ ವಿದ್ಯುದೀಕರಣ ವಿಚಾರದಲ್ಲಿ ಮಾತ್ರ ವಿಶ್ವವೇ ನಿಬ್ಬೆರಗಾಗುವಂತೆ 21,800 ಕಿಮೀ ಇಂದ 69,800 ಕಿಮೀಗೆ ಏರಿಕೆಯಾಗಿ, ಇತಿಹಾಸದಲ್ಲೇ 69% ಕೆಲಸ ಕಳೆದ 12 ವರ್ಷಗಳಲ್ಲಿ ಪೂರ್ಣಗೊಂಡಿದೆ.

ರಸ್ತೆ ಹಾಗೂ ಹೆದ್ದಾರಿ ಸಂಪರ್ಕದ ಮೈಲಿಗಲ್ಲು

2014ರಲ್ಲಿ ನಾಲ್ಕು ಲೇನ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ರಾಷ್ಟ್ರೀಯ ಹೆದ್ದಾರಿಗಳ ಉದ್ದ 18,371 ಕಿಮೀ ಇತ್ತು. ನಂತರದ ಅವಧಿಯಲ್ಲಿ 45,516 ಕಿ.ಮೀ. ಸೇರ್ಪಡೆಯಾಗಿದ್ದು, ಈ ವಿಭಾಗದ ಒಟ್ಟು ಜಾಲ ಗಣನೀಯವಾಗಿ ವಿಸ್ತರಿಸಿದೆ.

ಎಕ್ಸ್’ಪ್ರೆಸ್ ವೇ ಜಾಲವೆಂಬ ಅದ್ಬುತ ಸೃಷ್ಠಿ

2014ರಲ್ಲಿ ದೇಶದಲ್ಲಿ ಸೀಮಿತ ರಾಜ್ಯಗಳಲ್ಲಿ ಮಾತ್ರ ಸುಮಾರು 1,000 ಕಿಮೀ ಎಕ್ಸ್’ಪ್ರೆಸ್ ವೇ ಸಂಪರ್ಕವಿತ್ತು. ನಂತರದ ಅವಧಿಯಲ್ಲಿ ಸುಮಾರು 6,700 ಕಿಮೀ ಹೊಸ ಎಕ್ಸ್’ಪ್ರೆಸ್ ವೇ ಸೇರ್ಪಡೆಯಾಗಿದ್ದು, ಒಟ್ಟು ಜಾಲ ಸುಮಾರು 7,700 ಕಿಮೀಗೆ ತಲುಪಿದೆ. ಇದು ಹಾಲಿ ಜಾಲದ ಶೇ. 85ರಷ್ಟು 2014ರ ನಂತರ ನಿರ್ಮಾಣಗೊಂಡಿರುವುದು ಎನ್ನುವುದು ಗಮನಿಸಬೇಕಾದ ಅಂಶ.

ಬಂದರು, ಒಳನಾಡು ಜಲಸಾರಿಗೆ : ಸರಕು ಸಾಗಾಣೆ ಹೆಚ್ಚಳ

2014ರ ನಂತರ ಒಳನಾಡು ಜಲಮಾರ್ಗದ ಮೂಲಕ ಸಾಗಾಟದ ಸಾಮರ್ಥ್ಯ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.

ಬಂದರು ಸಾಮರ್ಥ್ಯವು 800 ಎಂಎಂಟಿಯಿಂದ 2,760 ಎಂಎಂಟಿಗೆ ಏರಿಕೆಯಾಗಿದ್ದರೆ, ಒಳನಾಡು ಜಲಸಾರಿಗೆ ಕಾರ್ಗೋ 29 ಎಂಎಂಟಿಯಿಂದ 218 ಎಂಎಂಟಿಗೆ ವೃದ್ಧಿಯಾಗಿದೆ.

ನದಿ ಆಧಾರಿತ ಸರಕು ಸಾಗಣೆ ಸಾಮರ್ಥ್ಯದ ಸುಮಾರು ಶೇ.87ರಷ್ಟು ಭಾಗ 2014ರ ನಂತರ ಅಭಿವೃದ್ಧಿಯಾಗಿದ್ದರೆ, ರಾಷ್ಟ್ರೀಯ ಜಲಮಾರ್ಗಗಳ ಸಂಖ್ಯೆ 5ರಿಂದ 32ಕ್ಕೆ ಏರಿಕೆಯಾಗಿ, ಕಡಿಮೆ ವೆಚ್ಚದ ಸಾಗಣೆಗೆ ಉತ್ತೇಜನ ನೀಡಲಾಗಿದೆ.

ಸ್ಟಾರ್ಟ್ ಅಪ್ ಕ್ಷೇತ್ರದ ಐತಿಹಾಸಿಕ ಬೆಳವಣಿಗೆ

ದಾಖಲೆಗಳನ್ನು ನೋಡಿವುದಾದರೆ, 2014ರಲ್ಲಿ ಭಾರತದಲ್ಲಿ ಸುಮಾರು 500 ಮಾನ್ಯತೆ ಪಡೆದ ಸ್ಟಾರ್ಟ್ ಅಪ್’ಗಳಿದ್ದವು. ಇದೀಗ ಈ ಸಂಖ್ಯೆ ಸುಮಾರು 2.30 ಲಕ್ಷಕ್ಕೆ ಏರಿಕೆಯಾಗಿದೆ. 2014ರ ನಂತರ ಪ್ರಸ್ತುತ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯ ಸುಮಾರು ಶೇ.99.8ರಷ್ಟು ವಿಸ್ತರಣೆಯಾಗಿದೆ.
ಅಲ್ಲದೇ ಪ್ರಮುಖವಾಗಿ, ರಕ್ಷಣಾ ರಫ್ತು 700 ಕೋಟಿಯಿಂದ 38,424 ಕೋಟಿಗೆ ಏರಿಕೆಯಾಗಿರುವುದು ದೇಶದ ಆತ್ಮನಿರ್ಭರತೆಗೆ ಸಾಕ್ಷಿಯಾಗಿದೆ.

ವಿಮಾನದಷ್ಟೇ ವೇಗ ಪಡೆದ ನಿಲ್ದಾಣಗಳ ಸಂಖ್ಯೆ

ದೇಶದಲ್ಲಿ 2014ರ ವೇಳೆಯಲ್ಲಿ 74 ವಿಮಾನ ನಿಲ್ದಾಣಗಳಿದ್ದವು. ನಂತರದಲ್ಲಿ ಇದರ ಸಂಖ್ಯೆ 164ಕ್ಕೆ ಏರಿಕೆಯಾಗಿದ್ದು, ಈ ಮೂಲಕ ಆಗಸ ಮಾರ್ಗದ ಸಂಪರ್ಕ ಜನರಿಗೆ ಮತ್ತಷ್ಟು ಸನಿಹವಾಗಿಸುವುದು ಮಾತ್ರವಲ್ಲ ಎಲ್ಲ ವರ್ಗದ ಜನರೂ ವಿಮಾನ ಪ್ರಯಾಣ ಮಾಡುವಂತಹ ಅವಕಾಶವನ್ನು ಒದಗಿಸಿದೆ.

Also Read>> ಅರಸಾಳು ರೈಲ್ವೆ ನಿಲ್ದಾಣಕ್ಕೆ ಡಿಆರ್‌ಎಂ ದಿಢೀರ್ ಭೇಟಿ | ‘ಮಾಲ್ಗುಡಿ ಚಾಯ್’ ಸವಿದ ಮುದಿತ್ ಮಿತ್ತಲ್

ವಿದ್ಯುತ್ ಉತ್ಪಾದನೆ, ಸೌರ ಶಕ್ತಿ ಹಾಗೂ ಪ್ರಸರಣ ಜಾಲದ ವಿಸ್ತರಣೆ

ದೇಶದ ಒಟ್ಟು ವಿದ್ಯುತ್ ಸಾಮರ್ಥ್ಯವು 2014ರಲ್ಲಿ 249 ಗಿಗಾ ವ್ಯಾಟ್ ಮಟ್ಟದಲ್ಲಿತ್ತು. ಆದರೆ, ನಂತರದ ಅವಧಿಯಲ್ಲಿ ಇನ್ನೂ 540 ಗಿಗಾ ವ್ಯಾಟ್ ಸಾಮರ್ಥ್ಯ ಸೇರ್ಪಡೆಯಾಗಿದೆ. ಪ್ರಸ್ತುತ ಒಟ್ಟು ವಿದ್ಯುತ್ ಸಾಮರ್ಥ್ಯದ ಸುಮಾರು ಶೇ.54ರಷ್ಟು ಭಾಗ 2014ರ ನಂತರ ಸ್ಥಾಪನೆಯಾಗಿದೆ ಎಂದು ತಿಳಿದುಬಂದಿದೆ.

ಇನ್ನು, ರಾಷ್ಟ್ರೀಯ ವಿದ್ಯುತ್ ಪ್ರಸರಣ ಜಾಲವು 2014ರಲ್ಲಿ ಸುಮಾರು 2.9 ಲಕ್ಷ ಕಿಮೀ ಇತ್ತು. ನಂತರದ ಅವಧಿಯಲ್ಲಿ ಇನ್ನೂ ಸುಮಾರು 5.0 ಲಕ್ಷ ಸರ್ಕ್ಯೂಟ್ ಕಿಮೀ ಜಾಲ ಸೇರ್ಪಡೆಯಾಗಿದೆ.

ಅದೇ ರೀತಿ, ಭಾರತದ ಸೌರಶಕ್ತಿ ಸಾಮರ್ಥ್ಯ 2014ರಲ್ಲಿ ಕೇವಲ 2.6 ಗಿಗಾವ್ಯಾಟ್ ಮಟ್ಟದಲ್ಲಿತ್ತು. ನಂತರದ ಅವಧಿಯಲ್ಲಿ ಇದಕ್ಕೆ 162 ಗಿಗಾ ವ್ಯಾಟ್ ಸಾಮರ್ಥ್ಯ ಸೇರ್ಪಡೆಯಾಗಿದೆ. ಒಟ್ಟಾರೆ ಸೌರ ಮೂಲಸೌಕರ್ಯದ ಸುಮಾರು ಶೇ.98ರಷ್ಟು ಭಾಗ 2014ರ ನಂತರ ನಿರ್ಮಾಣಗೊಂಡಿದೆ ಎಂದು ನೀಡಿರುವ ಅಂಕಿ-ಅಂಶಗಳು ತಿಳಿಸುತ್ತವೆ.

ಪೈಪ್ಡ್ ನ್ಯಾಚುರಲ್ ಗ್ಯಾಸ್ ಸಂಪರ್ಕ 1.6 ಕೋಟಿಗೆ

ಪೈಪ್ಡ್ ನ್ಯಾಚುರಲ್ ಗ್ಯಾಸ್ ಸಂಪರ್ಕಗಳು 2014ರಲ್ಲಿ ಸುಮಾರು 25 ಲಕ್ಷದಷ್ಟಿದ್ದವು. ಇದೀಗ ಈ ಸಂಖ್ಯೆ 1.6 ಕೋಟಿಗೆ ಏರಿಕೆಯಾಗಿದೆ.

ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಳ

2014ರ ನಂತರ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲೂ ಗಮನಾರ್ಹ ವಿಸ್ತರಣೆ ಕಂಡುಬಂದಿದೆ. ಅಂದು ಒಟ್ಟು ಸಾಮರ್ಥ್ಯ ಸುಮಾರು 54 ಗಿಗಾ ವ್ಯಾಟ್ ಇದ್ದರೆ, ಇದೀಗ ಅದು 248 ಕ್ಕೆ ಏರಿಕೆಯಾಗಿದೆ.PES Shivamogga

ಅನಿಲ ಪೈಪ್ ಲೈನ್ ಜಾಲದ ದಾಖಲೆ

ದೇಶದ ಗ್ಯಾಸ್ ಪೈಪ್ ಲೈನ್ ಜಾಲವು 2014ರಲ್ಲಿ ಸುಮಾರು 15,000 ಕಿಮೀ ಇತ್ತು. ನಂತರದ ಅವಧಿಯಲ್ಲಿ ಮತ್ತಷ್ಟು 26,000 ಕಿಮೀ ಜಾಲ ಸೇರ್ಪಡೆಯಾಗಿದೆ. ಪ್ರಸ್ತುತ ಜಾಲದ ಸುಮಾರು ಶೇ.42ರಷ್ಟು ಭಾಗ ಕಳೆದ 12 ವರ್ಷಗಳಲ್ಲಿ ನಿರ್ಮಾಣಗೊಂಡಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ.

ಉಕ್ಕು ಹಾಗೂ ಕಲ್ಲಿದ್ದಲು ಉತ್ಪಾದನಾ ಸಾಮರ್ಥ್ಯದಲ್ಲೂ ಏರಿಕೆ

2014ರಲ್ಲಿ ದೇಶದ ಕಚ್ಚಾ ಉಕ್ಕು ಉತ್ಪಾದನಾ ಸಾಮರ್ಥ್ಯ ಸುಮಾರು 109 ಮೆಟ್ರಿಕ್ ಟನ್ ಇತ್ತು. ಆದರೆ ನಂತರದ ಅವಧಿಯಲ್ಲಿ 222 ಮೆಟ್ರಿಕ್ ಟನ್ ಸಾಮರ್ಥ್ಯ ಸೇರ್ಪಡೆಯಾಗಿದೆ. ಪ್ರಸ್ತುತ ಸಾಮರ್ಥ್ಯದ ಸುಮಾರು ಶೇ.51ರಷ್ಟು ಭಾಗ 2014ರ ನಂತರ ನಿರ್ಮಾಣಗೊಂಡಿದೆ.

ಇನ್ನು, ಕಲ್ಲಿದ್ದಲು ಉತ್ಪಾದನೆಯು 2014ರಲ್ಲಿ ಸುಮಾರು 565 ಮೆಟ್ರಿಕ್ ಟನ್ ಇತ್ತು. ನಂತರದ ಅವಧಿಯಲ್ಲಿ ಹೆಚ್ಚಳಗೊಂಡು ಸುಮಾರು 1,000 ಮೆಟ್ರಿಕ್ ಟನ್ ಮಟ್ಟಕ್ಕೆ ತಲುಪಿದೆ. ಪ್ರಸ್ತುತ ಉತ್ಪಾದನಾ ಪ್ರಮಾಣದ ಸುಮಾರು ಶೇ.44ರಷ್ಟು ವಿಸ್ತರಣೆ 2014ರ ನಂತರ ನಡೆದಿದೆ.

ರಕ್ಷಣಾ ರಫ್ತಿನಲ್ಲಿ ಗಣನೀಯ ಬೆಳವಣಿಗೆ

2014ರಲ್ಲಿ ಭಾರತದ ರಕ್ಷಣಾ ಉತ್ಪನ್ನಗಳ ರಫ್ತು ಸುಮಾರು 700 ಕೋಟಿ ಮಟ್ಟದಲ್ಲಿತ್ತು. ನಂತರ ಅದು 38,424 ಕೋಟಿಗೆ ಏರಿಕೆಯಾಗಿದೆ. ಪ್ರಸ್ತುತ ರಕ್ಷಣಾ ರಫ್ತು ಸಾಮರ್ಥ್ಯದ ಸುಮಾರು ಶೇ.98ರಷ್ಟು ಭಾಗ ಕಳೆದ 12 ವರ್ಷಗಳಲ್ಲಿ ರೂಪುಗೊಂಡಿದೆ ಎಂದು ಅಂಕಿ-ಅಂಶಗಳು ಸೂಚಿಸುತ್ತವೆ.

ಗ್ರಾಮೀಣ ಅಭಿವೃದ್ಧಿ ಮತ್ತು ನೀರಿನ ಸೌಲಭ್ಯ

ಜಲ್ ಜೀವನ್ ಮಿಷನ್ ಮೂಲಕ 17% ಮನೆಗಳಿಗೆ ಮಾತ್ರ ಇದ್ದ ಟ್ಯಾಪ್ ನೀರಿನ ಸೌಲಭ್ಯ ಈಗ ಶೇ.80ರಷ್ಟು ಮನೆಗಳಿಗೆ ತಲುಪಿದೆ.
ಇದರಲ್ಲೂ ಶೇ.79ರಷ್ಟು ಮೂಲಸೌಕರ್ಯ 2014ರ ನಂತರ ನಿರ್ಮಾಣವಾಗಿದೆ.

ಏಮ್ಸ್ , ಮೆಡಿಕಲ್ ಕಾಲೇಜು ಹಾಗೂ ಸೀಟುಗಳ ಹೆಚ್ಚಳ

2014ಕ್ಕೂ ಮುನ್ನ ದೇಶದಲ್ಲಿ ಕೇವಲ 8 ಮಾತ್ರವಿದ್ದ ಏಮ್ಸ್ ಸಂಸ್ಥೆಗಳ ಸಂಖ್ಯೆ ಪ್ರಸ್ತುತ 23ಕ್ಕೆ ಏರಿಕೆಯಾಗಿದೆ. ಇದು 2014ರ ನಂತರದಲ್ಲಿ ಸ್ಥಾಪನೆಯಾದ ಶೇ.65ರಷ್ಟು ಹೆಚ್ಚಳ ಸಾಧನೆಯಾಗಿದೆ.

ಅದೇ ರೀತಿ, ವೈದ್ಯಕೀಯ ಶಿಕ್ಷಣದ ಸೀಟುಗಳ ಸಂಸ್ಥೆಯಲ್ಲೂ ಸಹ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

2014ರಲ್ಲಿ 51,348ರಷ್ಟಿದ್ದ ಸೀಟುಗಳ ಸಂಖ್ಯೆ ನಂತರದ ಅವಧಿಯಲ್ಲಿ ಇನ್ನೂ 1.39 ಲಕ್ಷ ಸೀಟುಗಳಿಗೆ ಏರಿಕೆಯಾಗಿದೆ.

ಇನ್ನು, 2014ರಲ್ಲಿ ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು. ನಂತರದ ಅವಧಿಯಲ್ಲಿ ಇನ್ನೂ 844 ಕಾಲೇಜುಗಳು ಸೇರ್ಪಡೆಯಾಗಿವೆ.

India Infrastructure Development : ಸಾಮರ್ಥ್ಯ ಹೆಚ್ಚಳ

ಒಟ್ಟಾರೆಯಾಗಿ, 2014ರ ನಂತರದ ಅವಧಿಯಲ್ಲಿ ಭಾರತದ ಮೂಲಸೌಕರ್ಯ ಅಭಿವೃದ್ಧಿಯ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಮಾಣದ ವಿಸ್ತರಣೆ ಕಂಡುಬಂದಿರುವುದನ್ನು ಈ ಅಂಕಿ-ಅಂಶಗಳು ತೋರಿಸುತ್ತವೆ.

ರೈಲ್ವೆ ಮತ್ತು ರಸ್ತೆ ಸಂಪರ್ಕದಿಂದ ಹಿಡಿದು ಬಂದರು, ವಿಮಾನಯಾನ, ಜಲಮಾರ್ಗ, ಇಂಧನ, ವಿದ್ಯುತ್, ನವೀಕರಿಸಬಹುದಾದ ಇಂಧನ, ಅನಿಲ ಸಂಪರ್ಕ, ಕುಡಿಯುವ ನೀರು ಹಾಗೂ ವೈದ್ಯಕೀಯ ಶಿಕ್ಷಣದವರೆಗೆ ಹಲವು ಕ್ಷೇತ್ರಗಳಲ್ಲಿ ಸಾಮರ್ಥ್ಯ ಹೆಚ್ಚಳವಾಗಿದೆ.

ವಿಶೇಷವಾಗಿ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್, ಸೌರಶಕ್ತಿ, ಸ್ಟಾರ್ಟ್ ಅಪ್’ಗಳು, ರಕ್ಷಣಾ ರಫ್ತು, ಒಳನಾಡು ಜಲಮಾರ್ಗಗಳು ಮತ್ತು ಎಕ್ಸ್’ಪ್ರೆಸ್ ವೇಗಳಂತಹ ಕ್ಷೇತ್ರಗಳಲ್ಲಿ 2014ರ ನಂತರದ ವಿಸ್ತರಣೆ ಪ್ರಮಾಣ ಗಮನಾರ್ಹವಾಗಿದೆ. ಈ ಬೆಳವಣಿಗೆಗಳು ಭಾರತದ ಸಾರಿಗೆ, ಇಂಧನ, ಕೈಗಾರಿಕೆ, ಆರೋಗ್ಯ ಮತ್ತು ಉದ್ಯಮಶೀಲತಾ ವ್ಯವಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಈ ಎಲ್ಲಾ ಅಭಿವೃದ್ಧಿಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರಮುಖ ಆರ್ಥಿಕ ಶಕ್ತಿಯಾಗಿ ರೂಪಿಸುತ್ತಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news    Kumadvathi College Shikariura

Kalpa News Advertising DisclaimerKalahamsa Infotech private limited

Tags: IndiaIndia Infrastructure DevelopmentInfrastructureಆರ್ಥಿಕ ಶಕ್ತಿಭಾರತಮೂಲಸೌಕರ್ಯ ಅಭಿವೃದ್ಧಿರಸ್ತೆ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

Shivamogga | ಮೆಗ್ಗಾನ್ ಆಸ್ಪತ್ರೆಯ ಗುತ್ತಿಗೆ ಸ್ವಚ್ಛತಾ ಕಾರ್ಮಿಕರಿಗೆ ಪರಿಷ್ಕೃತ ವೇತನ ಜಾರಿಗೆ ಮನವಿ

Next Post

‘ವಿವೇಕ ವಿದ್ಯಾನಿಧಿ’ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ: ಶಾಸಕ ಚನ್ನಬಸಪ್ಪ

kalpa News

kalpa News

Next Post
'Viveka Vidyanidhi'- financial incentive students

‘ವಿವೇಕ ವಿದ್ಯಾನಿಧಿ’ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ: ಶಾಸಕ ಚನ್ನಬಸಪ್ಪ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL