ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ತುಮಕೂರು |
ಮಲ್ಲಸಂದ್ರ ಮತ್ತು ಗುಬ್ಬಿ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 48 (LC-48)ರಲ್ಲಿ ಆರ್ಸಿಸಿ ಬಾಕ್ಸ್ಗಳನ್ನು ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಸೇರಿದಂತೆ 19 ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು (Indian Railway) ಭಾರತೀಯ ರೈಲ್ವೆಯ ನೈಋತ್ಯ ರೈಲ್ವೆ (SWR) ಮಾಹಿತಿ ನೀಡಿದೆ.
ತಾತ್ಕಾಲಿಕ ಗರ್ಡರ್ಗಳನ್ನು ಅಳವಡಿಸುವ ಹಾಗೂ ತೆರವುಗೊಳಿಸುವ ಹಿನ್ನೆಲೆಯಲ್ಲಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗುತ್ತಿದೆ. ಇದರ ಪರಿಣಾಮವಾಗಿ ಆಗಸ್ಟ್ 19, 22, 23, 25 ಹಾಗೂ 26ರಂದು ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ನೈಋತ್ಯ ರೈಲ್ವೆ ಪ್ರಕಟಿಸಿರುವ ಮಾಹಿತಿಯಂತೆ, ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದ್ದು, ಕೆಲವು ರೈಲುಗಳನ್ನು ಭಾಗಶಃ ರದ್ದು, ಮಾರ್ಗ ಬದಲಾವಣೆ, ಸಮಯ ಮರುನಿಗದಿ ಹಾಗೂ ಮಾರ್ಗಮಧ್ಯೆ ನಿಯಂತ್ರಣಕ್ಕೆ ಒಳಪಡಿಸಲಾಗುತ್ತದೆ.
ರೈಲುಗಳ ಸಂಚಾರ ಸಂಪೂರ್ಣ ರದ್ದು
ಆಗಸ್ಟ್ 19 ಮತ್ತು 26ರಂದು ಕೆಳಗಿನ ರೈಲುಗಳ ಸಂಚಾರ ರದ್ದಾಗಲಿದೆ:
- ಚಿಕ್ಕಮಗಳೂರು–ಯಶವಂತಪುರ ಎಕ್ಸ್ಪ್ರೆಸ್ (16239)
- ಯಶವಂತಪುರ–ಚಿಕ್ಕಮಗಳೂರು ಎಕ್ಸ್ಪ್ರೆಸ್ (16240)
- ಕೆಎಸ್ಆರ್ ಬೆಂಗಳೂರು–ಮೈಸೂರು ಒಡೆಯರ್ ಎಕ್ಸ್ಪ್ರೆಸ್ (12614)
- ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು (66567)
- ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು (66572)
ಇದೇ ವೇಳೆ ಆಗಸ್ಟ್ 19, 22 ಮತ್ತು 26ರಂದು ಯಲಹಂಕ–ಅರಸೀಕೆರೆ ಮೆಮು (66505) ಹಾಗೂ ಅರಸೀಕೆರೆ–ಯಲಹಂಕ ಮೆಮು (66506) ರೈಲುಗಳ ಸಂಚಾರವೂ ರದ್ದಾಗಲಿದೆ.
ಕೆಲವು ರೈಲುಗಳ ಸಂಚಾರ ಭಾಗಶಃ ರದ್ದು
ರೈಲು ಸಂಖ್ಯೆ 20652 ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ಆಗಸ್ಟ್ 19, 22, 23 ಮತ್ತು 26ರಂದು ಅರಸೀಕೆರೆ–ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಅರಸೀಕೆರೆಯಲ್ಲಿಯೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.
ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು–ಧಾರವಾಡ ಸಿದ್ಧಗಂಗಾ ಎಕ್ಸ್ಪ್ರೆಸ್ ಕೂಡ ಇದೇ ದಿನಗಳಲ್ಲಿ ಕೆಎಸ್ಆರ್ ಬೆಂಗಳೂರು–ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದೆ. ರೈಲು ಕೆಎಸ್ಆರ್ ಬೆಂಗಳೂರಿನ ಬದಲಿಗೆ ಅರಸೀಕೆರೆಯಿಂದಲೇ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
ರೈಲು ಸಂಖ್ಯೆ 12726 ಧಾರವಾಡ–ಕೆಎಸ್ಆರ್ ಬೆಂಗಳೂರು ಸಿದ್ಧಗಂಗಾ ಎಕ್ಸ್ಪ್ರೆಸ್ ಆಗಸ್ಟ್ 19 ಮತ್ತು 26ರಂದು ಅರಸೀಕೆರೆ–ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಅರಸೀಕೆರೆಯಲ್ಲಿಯೇ ಪ್ರಯಾಣ ಮುಕ್ತಾಯಗೊಳ್ಳಲಿದೆ.
ಮೂರು ಪ್ರಮುಖ ರೈಲುಗಳ ಮಾರ್ಗ ಬದಲಾವಣೆ
ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್ಪ್ರೆಸ್ ಆಗಸ್ಟ್ 18 ಮತ್ತು 25ರಂದು ಅರಸೀಕೆರೆ–ಹಾಸನ–ನೆಲಮಂಗಲ–ಯಶವಂತಪುರ ಮಾರ್ಗದಲ್ಲಿ ಸಂಚರಿಸಲಿದೆ. ಈ ವೇಳೆ ತಿಪಟೂರು ಹಾಗೂ ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 20676 ಮೈಸೂರು–ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ಆಗಸ್ಟ್ 19 ಮತ್ತು 26ರಂದು ಮೈಸೂರು–ಹೊಳೆನರಸೀಪುರ–ಹಾಸನ–ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಪಾಂಡವಪುರದಿಂದ ತಿಪಟೂರು ನಡುವಿನ ಯಾವುದೇ ನಿಲ್ದಾಣದಲ್ಲಿ ಈ ರೈಲಿಗೆ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 20689 ಯಶವಂತಪುರ–ಶಿವಮೊಗ್ಗ ಟೌನ್ ಇಂಟರ್ಸಿಟಿ ಎಕ್ಸ್ಪ್ರೆಸ್ ಆಗಸ್ಟ್ 19, 22, 23 ಮತ್ತು 26ರಂದು ಚಿಕ್ಕಬಾಣಾವರ–ನೆಲಮಂಗಲ–ಹಾಸನ–ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ.
Also Read>> ಕುವೆಂಪು ಎಕ್ಸ್’ಪ್ರೆಸ್ ಸೇರಿ ಶಿವಮೊಗ್ಗದ 3 ರೈಲು ಸಂಚಾರದಲ್ಲಿ ವ್ಯತ್ಯಯ : ಇಲ್ಲಿದೆ ಡೀಟೇಲ್ಸ್
ಹಲವು ರೈಲುಗಳ ಸಮಯ ಮರುನಿಗದಿ
ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ದೂರದ ರೈಲುಗಳ ನಿರ್ಗಮನ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ.
- ರೈಲು ಸಂಖ್ಯೆ 19667 ಉದಯಪುರ ಸಿಟಿ–ಮೈಸೂರು ಎಕ್ಸ್ಪ್ರೆಸ್: ಆಗಸ್ಟ್ 17 ಮತ್ತು 24ರಂದು ಉದಯಪುರ ಸಿಟಿಯಿಂದ 200 ನಿಮಿಷ ತಡವಾಗಿ ಹೊರಡಲಿದೆ.
- ರೈಲು ಸಂಖ್ಯೆ 22497 ಶ್ರೀ ಗಂಗಾನಗರ–ತಿರುಚ್ಚಿರಾಪಳ್ಳಿ ಎಕ್ಸ್ಪ್ರೆಸ್: ಆಗಸ್ಟ್ 17 ಮತ್ತು 24ರಂದು ಶ್ರೀ ಗಂಗಾನಗರದಿಂದ 150 ನಿಮಿಷ ತಡವಾಗಿ ಹೊರಡಲಿದೆ.
- ರೈಲು ಸಂಖ್ಯೆ 17316 ವೇಳಂಕಣ್ಣಿ–ವಾಸ್ಕೋ ಡ ಗಾಮ ಎಕ್ಸ್ಪ್ರೆಸ್: ಆಗಸ್ಟ್ 18 ಮತ್ತು 25ರಂದು ವೇಳಂಕಣ್ಣಿಯಿಂದ 60 ನಿಮಿಷ ತಡವಾಗಿ ಹೊರಡಲಿದೆ.
- ರೈಲು ಸಂಖ್ಯೆ 12777 ಎಸ್ಎಸ್ಎಸ್ ಹುಬ್ಬಳ್ಳಿ–ತಿರುವನಂತಪುರಂ ನಾರ್ತ್ ಎಕ್ಸ್ಪ್ರೆಸ್: ಆಗಸ್ಟ್ 19 ಮತ್ತು 26ರಂದು ಎಸ್ಎಸ್ಎಸ್ ಹುಬ್ಬಳ್ಳಿಯಿಂದ 90 ನಿಮಿಷ ತಡವಾಗಿ ಹೊರಡಲಿದೆ.
ಎರಡು ರೈಲುಗಳು ಮಾರ್ಗಮಧ್ಯೆ ನಿಯಂತ್ರಣಕ್ಕೆ
ರೈಲು ಸಂಖ್ಯೆ 12649 ಯಶವಂತಪುರ–ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ಆಗಸ್ಟ್ 19 ಮತ್ತು 26ರಂದು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.
ಅದೇ ರೀತಿ, ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್ಪ್ರೆಸ್ ಆಗಸ್ಟ್ 21 ಮತ್ತು 22ರಂದು ಮಾರ್ಗಮಧ್ಯೆ 20 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.
ಪ್ರಯಾಣಿಕರಿಗೆ ಸೂಚನೆ
ಮಲ್ಲಸಂದ್ರ–ಗುಬ್ಬಿ ನಡುವಿನ LC-48ರಲ್ಲಿ ನಡೆಯುತ್ತಿರುವ ಕಾಮಗಾರಿಯ ಹಿನ್ನೆಲೆಯಲ್ಲಿ ರೈಲು ಸಂಚಾರದಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ನಿಗದಿತ ದಿನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ರೈಲುಗಳ ಪರಿಷ್ಕೃತ ವೇಳಾಪಟ್ಟಿ, ಮಾರ್ಗ ಹಾಗೂ ನಿಲುಗಡೆಗಳ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದುಕೊಂಡು ಪ್ರಯಾಣ ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಸೂಚಿಸಿದೆ.
SWR 19 Trains Service Changes including Wodeyar Express
Bengaluru/Tumakuru: Several train services will be cancelled, partially cancelled, diverted, rescheduled or regulated due to engineering works at Level Crossing Gate No. 48 (LC-48) between Mallasandra and Gubbi.
The work involves the installation and removal of temporary girders for placing RCC boxes, requiring line blocks and power blocks. In view of the work, changes have been made to the operation of several trains on August 18, 19, 21, 22, 23, 24, 25 and 26.
Trains Cancelled Completely
The following trains will remain cancelled on August 19 and 26:
- Train No. 16239 Chikkamagaluru–Yeshwantpur Express
- Train No. 16240 Yeshwantpur–Chikkamagaluru Express
- Train No. 12614 KSR Bengaluru–Mysuru Wodeyar Express
- Train No. 66567 KSR Bengaluru–Tumakuru MEMU
- Train No. 66572 Tumakuru–KSR Bengaluru MEMU
Meanwhile, the following MEMU services will be cancelled on August 19, 22 and 26:
- Train No. 66505 Yelahanka–Arsikere MEMU
- Train No. 66506 Arsikere–Yelahanka MEMU
Partial Cancellation of Train Services
Train No. 20652 Talaguppa–KSR Bengaluru Express will be partially cancelled between Arsikere and KSR Bengaluru on August 19, 22, 23 and 26. The train will terminate its journey at Arsikere.
Train No. 12725 KSR Bengaluru–Dharwad Siddaganga Express will also be partially cancelled between KSR Bengaluru and Arsikere on August 19, 22, 23 and 26. The train will originate from Arsikere instead of KSR Bengaluru at its scheduled departure time.
Train No. 12726 Dharwad–KSR Bengaluru Siddaganga Express will be partially cancelled between Arsikere and KSR Bengaluru on August 19 and 26 and will terminate at Arsikere.
Route Diversion for Three Trains
Train No. 17310 Vasco Da Gama–Yeshwantpur Express departing on August 18 and 25 will run via Arsikere–Hassan–Nelamangala–Yeshwantpur. The train will not halt at Tiptur and Tumakuru.
Train No. 20676 Mysuru–Belagavi Vishwamanava Express, scheduled to depart on August 19 and 26, will operate via Mysuru–Hole Narsipur–Hassan–Arsikere. The train will have no scheduled stops at stations between Pandavapura and Tiptur.
Train No. 20689 Yeshwantpur–Shivamogga Town Intercity Express departing on August 19, 22, 23 and 26 will operate via Chikkabanavara–Nelamangala–Hassan–Arsikere. It will not halt at Tumakuru and Tiptur.
Trains Rescheduled
The departure timings of several long-distance trains have also been revised:
- Train No. 19667 Udaipur City–Mysuru Express: On August 17 and 24, the train will depart from Udaipur City 200 minutes late.
- Train No. 22497 Shri Ganganagar–Tiruchchirappalli Express: On August 17 and 24, the train will depart from Shri Ganganagar 150 minutes late.
- Train No. 17316 Velankanni–Vasco Da Gama Express: On August 18 and 25, the train will depart from Velankanni 60 minutes late.
- Train No. 12777 SSS Hubballi–Thiruvananthapuram North Express: On August 19 and 26, the train will depart from SSS Hubballi 90 minutes late.
Trains to be Regulated En Route
Train No. 12649 Yeshwantpur–Hazrat Nizamuddin Sampark Kranti Express will be regulated for 15 minutes en route on August 19 and 26.
Similarly, Train No. 17310 Vasco Da Gama–Yeshwantpur Express will be regulated for 20 minutes en route on August 21 and 22.
Passengers Advised to Check Revised Timings
The changes have been introduced to facilitate the engineering work at LC-48 between Mallasandra and Gubbi. Passengers travelling on the affected dates are advised to check the revised schedules, routes and stoppages in advance and plan their journey accordingly.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



