ಕಲ್ಪ ಮೀಡಿಯಾ ಹೌಸ್ | ಮೈಸೂರು |
ವಿಶ್ವವಿಖ್ಯಾತ Mysuru Dasara 2026 ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿ ಜಂಬೂಸವಾರಿ ಬಳಿಕ ಸಾರ್ವಜನಿಕರ ಕಣ್ಮನ ಸೆಳೆಯಲು ಅಕ್ಟೋಬರ್ 11ರಿಂದ 21ರವರೆಗೆ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
ಈ ವರ್ಷದ ಪ್ರದರ್ಶನವನ್ನು ‘ಪ್ರಜಾಪ್ರಭುತ್ವದ ಹಬ್ಬ’ ಎಂಬ ವಿಶೇಷ ಥೀಮ್ನಲ್ಲಿ ಆಯೋಜಿಸಲಾಗುತ್ತಿದೆ. ಕುಪ್ಪಣ್ಣ ಪಾರ್ಕ್ನ (ನಿಸಾದ್ ಬಾಗ್) ಗಾಜಿನ ಮನೆ ಹಾಗೂ ಲಿಂಗಾಂಬುಧಿ ಸಂಶೋಧನದಲ್ಲಿ ಏಕಕಾಲದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ.
Mysuru Dasara : 42 ಅಡಿ ಅಗಲದ ವಿಧಾನಸೌಧದ ಪ್ರತಿಕೃತಿ
ಈ ಬಾರಿಯ ಪ್ರಮುಖ ಆಕರ್ಷಣೆಯಾಗಿ ಕುಪ್ಪಣ್ಣ ಪಾರ್ಕ್ನ ಗಾಜಿನ ಮನೆಯೊಳಗೆ 42 ಅಡಿ ಅಗಲದ ವಿಧಾನಸೌಧದ ಬೃಹತ್ ಪ್ರತಿಕೃತಿ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಭಾರತದ ಸಂವಿಧಾನದ ಪುಸ್ತಕದ ಮಾದರಿ ಹಾಗೂ ಮತದಾನ ಜಾಗೃತಿ ಮೂಡಿಸುವ ಹೂವಿನ ಕಲಾಕೃತಿಗಳನ್ನೂ ಪ್ರದರ್ಶಿಸಲಾಗುತ್ತಿದೆ.
ಪ್ರದರ್ಶನದ ಸೌಂದರ್ಯ ಹೆಚ್ಚಿಸಲು ಪುಣೆ, ಊಟಿ ಮತ್ತು ಕೋಲ್ಕತ್ತಾದಿಂದ ವಿವಿಧ ಜಾತಿಯ ಹಾಗೂ ಬಣ್ಣಬಣ್ಣದ ಹೂ ಗಿಡಗಳನ್ನು ತರಿಸಲಾಗುತ್ತಿದೆ. ವೈವಿಧ್ಯಮಯ ಹೂವುಗಳಿಂದ ರೂಪುಗೊಳ್ಳುವ ಕಲಾಕೃತಿಗಳು ದಸರಾ ಮಹೋತ್ಸವದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲಿವೆ.
Also read>> ರಾಜ್ಯದಲ್ಲಿ ಉಪ್ಪಿನ ಸೇವನೆ ಕಡಿತಕ್ಕೆ ಸರ್ಕಾರ ಮಹತ್ವದ ಹೆಜ್ಜೆ! ಕಾರಣವೇನು?
ಹೂವುಗಳು ತಾಜಾವಾಗಿರಲು ವಿಶೇಷ ವ್ಯವಸ್ಥೆ
ಗಾಜಿನ ಮನೆಯೊಳಗಿನ ಹೂವುಗಳು ಬಿಸಿಲಿನ ತಾಪದಿಂದ ಬೇಗನೆ ಬಾಡದಂತೆ ತೋಟಗಾರಿಕೆ ಇಲಾಖೆ ವಿಶೇಷ ಸ್ಪ್ರಿಂಕ್ಲರ್ ಹಾಗೂ ಫಾಗರ್ ತಂತ್ರಜ್ಞಾನ ವ್ಯವಸ್ಥೆ ಮಾಡುತ್ತಿದೆ. ಇದರಿಂದ ಪ್ರದರ್ಶನದ ಅವಧಿಯಲ್ಲಿ ಹೂವುಗಳನ್ನು ತಾಜಾವಾಗಿ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ.
ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನವು ಮೈಸೂರು ದಸರಾಕ್ಕೆ ಆಗಮಿಸುವ ಪ್ರವಾಸಿಗರಿಗೆ ಮತ್ತೊಂದು ಪ್ರಮುಖ ಆಕರ್ಷಣೆಯಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










