No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
  • Advertise With Us
  • Grievances
  • About Us
  • Contact Us
Wednesday, September 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಯಂತ್ರಗಳಿಂದ ತುಪ್ಪದ ಸಮಗ್ರ ಶಕ್ತಿ ಅರಿಯಲು ಸಾಧ್ಯವಿಲ್ಲ: ರಾಘವೇಶ್ವರ ಶ್ರೀ

kalpa News by kalpa News
September 23, 2026
in ಉತ್ತರ ಕನ್ನಡ
0
ghee potency- can't grasped through machines: Raghaveshwara Sri
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಯಂತ್ರಗಳಿಂದ ತುಪ್ಪವನ್ನು (Ghee) ವಿಶ್ಲೇಷಿಸಿದರೆ ಅದರ ಸಮಗ್ರ ಶಕ್ತಿ ಗೋಚರವಾಗುವುದಿಲ್ಲ. ತುಪ್ಪ ಕೇವಲ ಭೌತಿಕ ಗುಣಗಳಿರುವ ದ್ರವ್ಯವಲ್ಲ. ಅದರಲ್ಲಿ ಕಣ್ಣು-ಮನಸ್ಸಿಗೆ ಮೀರಿದ ದೈವಿಕ ಶಕ್ತಿಯಿದ್ದು, ತುಪ್ಪದ ದಿವ್ಯ ಗುಣಗಳನ್ನು ಅನುಭವದಿಂದ ಕಂಡುಕೊಳ್ಳಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 22.09.2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ತುಪ್ಪದ ಮಹತ್ವದ ಕುರಿತಾಗಿ ಶ್ರೀಗಳು, ಪ್ರವಚನ ಅನುಗ್ರಹಿಸಿದರು.dk shivakumar led karnataka government 100 days celebration

ಸ್ಮೃತಿ ಮತ್ತು ಬುದ್ಧಿಯನ್ನು ಉದ್ದೀಪನಗೊಳಿಸುವ ಚೈತನ್ಯ ನೈಜ ದೇಶಿ ಗೋವಿನ ತುಪ್ಪಕ್ಕಿದ್ದು, ತುಪ್ಪವು ಜೀವಿಯ ಸಾರವಾದ ಓಜಸ್ಸನ್ನು ಹೆಚ್ಚಿಸುತ್ತದೆ. ಸ್ವರವನ್ನು ಮಧುರವಾಗಿಸುವ ಜೊತೆಗೆ ದೇಹಕ್ಕೆ ಬಣ್ಣವನ್ನು ಕೊಡುವ ಸಾಮರ್ಥ್ಯ ತುಪ್ಪಕ್ಕಿದೆ. ತುಪ್ಪ ಸಂತತಿಗೆ ಪೂರಕ, ವಯಸ್ಥಾಪಕ, ಕಣ್ಣಿನ ದೃಷ್ಟಿ ಹೆಚ್ಚಳಕ್ಕೆ ಸಹಕಾರಿ ಮಾತ್ರವಲ್ಲ ಮೋಕ್ಷ ಸಾಧಕನಿಗೆ ತುಪ್ಪ ಅತ್ಯುಪಯುಕ್ತವಾದ ಆಹಾರವೂ ಹೌದು. ತುಪ್ಪದ ಗುಣಗಳನ್ನು ಹೇಳುತ್ತಾ ಹೋದರೆ ಅದು ತುಪ್ಪದ ಸಹಸ್ರನಾಮವೇ ಆಗುತ್ತದೆ ಎಂದು ತುಪ್ಪದ ಗುಣಗಳನ್ನು ವಿವರಿಸಿದರು.

Also read>> ಬರ ಸಮಸ್ಯೆಗೆ ಸಮಗ್ರ ಮತ್ತು ಶಾಶ್ವತ ಪರಿಹಾರ ರೂಪಿಸಿ: ಡಾ. ಧನಂಜಯ ಸರ್ಜಿ

Ghee : Detoxification ಮಾಡುವ ಅಪೂರ್ವ ಶಕ್ತಿ ತುಪ್ಪಕ್ಕಿದೆ

ನಗರಗಳಲ್ಲಿ ಇಂದು ನಿರ್ವಿಶೀಕರಣ ಅಥವಾ ದೇಹ ಶುದ್ಧೀಕರಣ (detoxification)ಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದ್ದು, ತುಪ್ಪವು ಇದಕ್ಕೆ ಅತ್ತ್ಯುತ್ತಮವಾದ ಪದಾರ್ಥವಾಗಿದ್ದು, ವಾತ,ಪಿತ್ತ,ಉನ್ಮಾದ,ಅಪಸ್ಮಾರ ಸೇರಿದಂತೆ ನೂರಾರು ರೋಗಗಳಲ್ಲಿ ತುಪ್ಪವು ಪರಮೌಷಧವಾಗಿ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಬಲ ಇರುವವರು ಒರಟಾಗಿರುತ್ತಾರೆ. ಕೋಮಲವಾಗಿರುವವರು ಬಲಹೀನರಾಗಿರುತ್ತಾರೆ. ಆದರೆ ತುಪ್ಪವನ್ನು ಸೇವಿಸಿದರೆ ದೇಹಕ್ಕೆ ಬಲದ ಜೊತೆಗೆ ಮೃದುತ್ವವೂ ಬರುತ್ತದೆ. ಇದು ತುಪ್ಪದ ವೈಶಿಷ್ಟ್ಯವಾಗಿದ್ದು, ತುಪ್ಪ ಹೊಸದಾದರೂ, ಹಳೆಯದಾದರೂ ಎರಡೂ ಕೂಡ ದೇಹಕ್ಕೆ ಹಿತ ಎಂದು ಆಯುರ್ವೇದ ಗ್ರಂಥಗಳನ್ನು ಆಧಾರಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬೇರೆ ಬೇರೆ ಪ್ರಾಣಿಗಳ ಹಾಲಿನಿಂದಲೂ ತುಪ್ಪವನ್ನು ಮಾಡಬಹುದಾದರೂ, ದೇಶಿ ಗೋವಿನ ತುಪ್ಪಕ್ಕೆ ಯಾವುದೂ ಸಾಟಿಯಲ್ಲ. ಸುಶ್ರುತರು ಗೋವು,ಆನೆ, ಕುರಿ ಸೇರಿದಂತೆ ಅನೇಕ ತುಪ್ಪಗಳನ್ನು ವಿಶ್ಲೇಷಿಸಿದ್ದು, ಎಲ್ಲವುಗಳಲ್ಲಿಯೂ ಗೋವಿನ ತುಪ್ಪ ಸರ್ವಶ್ರೇಷ್ಠ ಎಂದು ಹೇಳಿದ್ದಾರೆ. ಜಗತ್ತಿನಲ್ಲಿ ಕಣ್ಣಿಗೆ ಒಳ್ಳೆಯದು ಎಂದು ಹೇಳಲಾದ ಸಮಸ್ತ ವಸ್ತುಗಳಲ್ಲಿ ಗೋವಿನ ತುಪ್ಪವೇ ಅತ್ಯಂತ ಶ್ರೇಷ್ಠ ಎಂಬುದು ಆಯುರ್ವೇದದ ಅಭಿಮತ ಎಂದರು.Christ King

ನಾವು ಬೇರೆಯವರ ಮನೆಯಲ್ಲಿ ಊಟವನ್ನು ಮಾಡಬಾರದು. ಏಕೆಂದರೆ ಅನ್ನವನ್ನು ಅವರು ಸಂಪಾದಿಸಿರುವ ರೀತಿ, ಅದನ್ನು ತಯಾರಿಸಿರುವ ಕ್ರಮ ನಮಗೆ ತಿಳಿದಿರುವುದಿಲ್ಲ. ಆದರೆ ಪರಾನ್ನವನ್ನು ಊಟ ಮಾಡುವ ಸಂದರ್ಭ ಬಂದಾಗ, ಊಟಕ್ಕೆ ಅಭಿಗಾರವಾಗಿ ತುಪ್ಪವನ್ನು ಹಾಕಿಕೊಂಡು ಊಟಮಾಡಿದರೆ, ಯಾವುದೇ ದೋಷ ಹಾಗೂ ಅಶುಚಿಗಳಿದ್ದರೂ ಅದನ್ನು ನಿವಾರಿಸುತ್ತದೆ. ಅದು ತುಪ್ಪದ ಶಕ್ತಿ ಎಂಬ ಶ್ರೀರಂಗ ಮಹಾಗುರುಗಳ ಮಾತುಗಳನ್ನು ಶ್ರೀಗಳು ಉಲ್ಲೇಖಿಸಿದರು.

ಕುಮಟಾ ಮಾಜಿ ಶಾಸಕಿ ಶಾರದಾ ಶೆಟ್ಟಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಕೃಷ್ಣಯಜುರ್ವೇದ ಘನಪಾರಾಯಣದಲ್ಲಿ ಭಾಗವಹಿಸಿದ ಶ್ರೀಗಳು, ಪಾರಾಯಣದಲ್ಲಿ ನಿರತರಾದ ವೇದ ವಿದ್ವಾಂಸರನ್ನು ಆಶೀರ್ವದಿಸಿದರು. ಯಕ್ಷಗಾನ ಕಲಾವಿದ ತೋಟಿಮನೆ ಗಣಪತಿ ಹೆಗಡೆ, ದಿನಪ್ರಧಾನರಾಗಿ ಮಂಜುನಾಥ ಹೆಗಡೆ ಮಗೇಗಾರು ದಂಪತಿಗಳು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.newsPES ShivamoggaKalpa News Advertising DisclaimerKalahamsa Infotech private limited

Tags: GokarnaRaghaveshwara shriRamachandrapura muttಅನ್ನಬ್ರಹ್ಮ ಚಾತುರ್ಮಾಸ್ಯಗೋಕರ್ಣಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೊಲೆ ಯತ್ನ ಆರೋಪ | ಭದ್ರಾವತಿ ಶಾಸಕ ಸಂಗಮೇಶ್ವರ್ ಸೇರಿ ಎಲ್ಲರೂ ಪ್ರಕರಣದಿಂದ ಮುಕ್ತ

Next Post

800ಕ್ಕೂ ಅಧಿಕ ಸರ್ಕಾರಿ ನೌಕರರ ಸೇವಾ ರಕ್ಷಣೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮನವಿ

kalpa News

kalpa News

Next Post
bidar-shailendra-beldale-cm-protection-800-govt-employees

800ಕ್ಕೂ ಅಧಿಕ ಸರ್ಕಾರಿ ನೌಕರರ ಸೇವಾ ರಕ್ಷಣೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮನವಿ

No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL