ಬೆಂಗಳೂರು: ನಿನ್ನೆ ನಿಧನರಾದ ಹಿರಿಯ ನಟ ಅಂಬರೀಶ್ ಅವರ ಅಂತಿಮ ದರ್ಶನವನ್ನು ಸೂಪರ್ ಸ್ಟಾರ್ ರಜನಿಕಾಂತ್ ಇಂದು ಪಡೆದುಕೊಂಡರು.
ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ ರಜನಿ, ಗೆಳೆಯನ ಪಾರ್ಥಿವ ಶರೀರವನ್ನು ಕಂಡು ಭಾವುಕರಾಗಿ ಕಣ್ಣೀರಿಟ್ಟರು. ಹಲವು ನಿಮಿಷಗಳ ಕಾಲ ಅಂಬರೀಶ್ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದ ರಜನಿ ಮುಖದಲ್ಲಿ ದುಃಖ ಮಡುಗಟ್ಟಿತ್ತು.

ಅಂಬರೀಶ್ ಪತ್ನಿ ಸುಮಲತಾ ಹಾಗೂ ಪುತ್ರ ಅಭಿಶೇಕ್ ಅವರೊಂದಿಗೆ ಮಾತನಾಡಿದ ರಜನಿ, ಸಂತ್ವಾನ ಹೇಳಿದ್ದಾರೆ.
ಇನ್ನು, ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ಟ್ವೀಟ್ ಮಾಡಿದ್ದ ರಜನಿಕಾಂತ್, ಅದ್ಭುತ ವ್ಯಕ್ತಿ, ಆಪ್ತ ಸ್ನೇಹಿತ, ನಿನ್ನನ್ನು ನಾನು ಕಳೆದುಕೊಂಡೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
From Coast to Glory: Naija Hegde’s Inspiring Rise to Success
Kalpa Media House | Special Article by Satish Shetty Cherkady | Certain achievements do not merely bring happiness; they move...
Read moreDetails
















