ಬೆಂಗಳೂರು: ರಾಜ್ಯದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಸರಣಿಯನ್ನು ಮುಂದುವರೆಸಿರುವ ರಾಜ್ಯ ಸರ್ಕಾರ, ಖಡಕ್ ಅಧಿಕಾರಿ ಅಣ್ಣಾಮಲೈ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಅತ್ಯಂತ ಪ್ರಮುಖವಾಗಿ ಖಡಕ್ ಅಧಿಕಾರಿಗಳನ್ನೇ ಬೆಂಗಳೂರಿಗೆ ವರ್ಗಾವಣೆ ಮಾಡಿರುವುದು ತೀವ್ರ ಆಶ್ಚರ್ಯವನ್ನು ಹುಟ್ಟುಹಾಕಿದೆ.
ಚಿಕ್ಕಮಗಳೂರು ಜಿಲ್ಲಾ ಎಸ್‌ಪಿಯಾಗಿದ್ದ ಕೆ. ಅಣ್ಣಾಮಲೈ ಅವರನ್ನ್ನು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದ್ದು, ಬೆಂಗಳೂರು ವಿಭಾಗದ ಹೆಚ್ಚುವರಿ ಸಂಚಾರ ಆಯುಕ್ತರಾಗಿ ಹರಿಶೇಖರನ್, ಕೆಎಸ್‌ಆರ್ ಪಿ 1ನೆಯ ಬೆಟಾಲಿಯನ್ ಕಮಾಂಡೆಂಟ್ಗೆ ಅಜಯ್ ಹಿಲೋರಿ ಹಾಗೂ ಚಿಕ್ಕಮಗಳೂರು ಎಸ್ ಪಿಯಾಗಿ ಹರೀಶ್ ಪಾಂಡೆ ಅವರನ್ನು, ರಾಹುಲ್ ಕುಮಾರ್ ಅವರನ್ನು ಬೆಂಗಳೂರು ಪೂರ್ವ ವಿಭಾಗ ಡಿಸಿಪಿ ಆಗಿ ವರ್ಗಾವಣೆ ಮಾಡಲಾಗಿದೆ.
ಸಿಂಗಂ ಖ್ಯಾತಿಯ ಕೆ. ಅಣ್ಣಾಮಲೈ, ಹರಿಶೇಖರನ್, ಅಜಯ್ ಹಿಲೋರಿ, ರಾಹುಲ್ ಕುಮಾರ್ ಮತ್ತು ಹರೀಶ್ ಪಾಂಡೆ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದ್ದು, ಈ ಹಿಂದೆ ಅಲೋಕ್ ಕುಮಾರ್ ಮತ್ತು ಗಿರೀಶ್ ಅವರಂತಹ ಖಡಕ್ ಪೊಲೀಸ್ ಅಧಿಕಾರಿಗಳನ್ನು ಸಿಸಿಬಿಗೆ ಹಾಕಿ, ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದ ರಾಜ್ಯ ಸರ್ಕಾರ ಇದೀಗ ಸಿಲಿಕಾನ್ ಸಿಟಿ ಭೂಮಾಫಿಯ ದಂಧೆಗೆ ಶಾಕ್ ನೀಡವು ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
Discussion about this post