No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
  • Advertise With Us
  • Grievances
  • About Us
  • Contact Us
Sunday, September 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಮಂಗನ ಕಾಯಿಲೆಗೆ ಕಾರಣರಾದ ಭ್ರಷ್ಟರು ಇವರುಗಳೇ!

kalpa News by kalpa News
February 3, 2019
in ಶಿವಮೊಗ್ಗ
0
ಮಂಗನ ಕಾಯಿಲೆಗೆ ಕಾರಣರಾದ ಭ್ರಷ್ಟರು ಇವರುಗಳೇ!
Share on FacebookShare on TwitterShare on WhatsApp

ದಿನ ಬೆಳಗಾದರೆ ಕರ್ನಾಟಕ ರಾಜ್ಯದಾದ್ಯಂತ ದಿನಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಒಂದೇ ಸುದ್ದಿ. ಪಶ್ಚಿಮ ಘಟ್ಟ ಶ್ರೇಣಿ, ಸಹ್ಯಾದ್ರಿ ಶ್ರೇಣಿಯ ಕಾಡಿನಂಚಿನಲ್ಲಿ ವಾಸಿಸುತ್ತಿರುವ ಜನರಿಗೆ ಮಂಗನ ಕಾಯಿಲೆ ಬಿಸಿ ಹಾಗೂ ಹಲವಾರು ಜನರ ಸಾವು, ಅನೇಕರು ಅಸ್ಪತ್ರೆಗೆ ದಾಖಲು, ಲಸಿಕೆ ಹಾಕುವ ಕಾರ್ಯಕ್ರಮ ಪ್ರಾರಂಭ.

ಸಾಗರ ತಾಲೂಕಿನಿಂದ ಆರಂಭವಾದ ಮಂಗನಕಾಯಿಲೆ ವ್ಯಾಧಿ, ಸೊರಬ, ತೀರ್ಥಹಳ್ಳಿ, ಭದ್ರಾವತಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ದೂರದ ಊರಾದ ಕೋಲಾರಗಳಲ್ಲಿ ಪ್ರತಿನಿತ್ಯ ಮಂಗಗಳ ಶವಗಳು ಪತ್ತೆಯಾಗುತ್ತಿವೆ. ವ್ಯಾಧಿಯ ಪ್ರಮಾಣ ದಿನೇ ದಿನೇ ಏರುಮುಖವಾಗುತ್ತಿದೆ. ಸಾವಿನ ಸುದ್ದಿಯೂ ದಿನನಿತ್ಯದ ಸುದ್ದಿಯಾಗಿದೆ. ಮಂಗನ ಕಾಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ನಿಷ್ಕಿçಯವಾಗಿದೆ.

ಈ ಕಾಯಿಲೆ ಕಾಣಿಸಿಕೊಂಡ ಎಲ್ಲ ಗ್ರಾಮಗಳು ಕಾಡಿನ ಅಂಚಿನಲ್ಲಿಯೇ ಇವೆ. ಅವರಿಗೆ ಹಲವು ಸವಾಲುಗಳು, ರೈತ ಮತ್ತು ವನ್ಯಪ್ರಾಣಿಗಳ ಸಂಘರ್ಷಗಳು, ಮೂಲಭೂತ ಸೌಕರ್ಯದಿಂದ ವಂಚಿತರಾದವರು ಇಲ್ಲಿ ಬದುಕನ್ನು ಸವೆಸುತ್ತಿದ್ದಾರೆ. ಸರ್ಕಾರ ಬಗರ್‌ಹುಕುಂ ಸಾಗುವಳಿ ಕಾನೂನು, ಅಕ್ರಮ ಸಕ್ರಮ, 94-ಸಿ, ಕೆರೆ ಕುಂಟೆಗಳ ಅತಿಕ್ರಮಣ, ಭೂ ಕಬಳಿಕೆ, ಒತ್ತುವರಿಗಾಗಿ ಕಾಡಿಗೆ, ಹುಲ್ಲಿನ ಗುಡ್ಡಗಳಿಗೆ ಬೆಂಕಿ ಹಚ್ಚುವ ಮೂಲಕ ಕಾಡು – ಹುಲ್ಲುಗಾವಲುಗಳು ನಾಶಹೊಂದಿ ಆ ಜಾಗದಲ್ಲಿ ಲಂಟಾನ, ಕಾಂಗ್ರೆಸ್ ಕಳೆಗಳೇ ಮೊದಲಾದ ಉಣುಗಿಗೆ ಅನುಕೂಲವಾದ ಪೊದೆಗಳು ಬೆಳೆದು ನಿಲ್ಲುವಂತಾಗಿದೆ. ಪೊದೆಗಳ ನಡುವೆ ಬೆಳೆದ ಉಣುಗುಗಳು ಜನ ಜಾನುವಾರುಗಳ ಸಂಪರ್ಕಕ್ಕೆ ಬಂದು ನಾಡಿಗೆ ಲಗ್ಗೆ ಇಟ್ಟಿವೆ.

ತಲತಲಾಂತರದಿಂದ ನ್ಯಾಯಯುತವಾಗಿ ರೈತ ಕುಟುಂಬಗಳು ಬಗರ್‌ಹುಕುಂ ಮಾಡಿ ಸಾಗುವಳಿ ಮಾಡುತ್ತಿರುವವರಿಗೆ ಇಂದಿಗೂ ಹಕ್ಕುಪತ್ರಗಳು ದೊರೆಯದೇ ಅತಂತ್ರವಾಗಿವೆ. ರಾಜಕಾರಣಿಗಳು ಓಟಿನ ದುರಾಸೆಗಾಗಿ ಹಾಗೂ ಹಣ ಸಂಪಾದನೆಗಾಗಿ ಬೇಕಾಬಿಟ್ಟಿ ಅತಿಕ್ರಮಣದ ಮೂಲಕ, ಕಾಡಿಗೆ ಬೆಂಕಿ ಹಚ್ಚಿಸಿ ಕಾಡು ಮುಕ್ತವನ್ನಾಗಿಸಿ ಸದರಿ ಜಾಗಗಳನ್ನು ತಾವು ಮತ್ತು ತಮ್ಮವರಿಗೆ ಮಂಜೂರು ಮಾಡಿಸಿಕೊಡುತ್ತಿದ್ದಾರೆ.

ಮಾಜಿ ಕಂದಾಯ ಮಂತ್ರಿಗಳು ಸೇರಿದಂತೆ ಅನೇಕ ರಾಜಕಾರಣಿಗಳು ನೀಡಿ ನೀರು, ಮರಳು, ಸರ್ಕಾರದ ಜಾಗಗಳು, ಮನುಷ್ಯರಿಗೇ ಹೊರತು ಪ್ರಾಣಿಗಳಿಗಲ್ಲ ಎಂದು ಹೇಳಿ ಇದಕ್ಕೆ ಮನಸೋಇಚ್ಛೆ ಕುಮ್ಮಕ್ಕು ನೀಡುತ್ತಿರುವುದು ವಿಷಾದನೀಯ. ಇದಕ್ಕೆ ಭ್ರಷ್ಟ ಅಧಿಕಾರಿಗಳೂ ಕಾನೂನು ಸಮ್ಮತವಲ್ಲದಿದ್ದರೂ ಹಕ್ಕುಪತ್ರ ದೊರೆಯುವಂತೆ ಮಾಡಲು ಸಹಕರಿಸುತ್ತಿದ್ದಾರೆ. ಹೀಗೆ ನಾಶವಾದ ಕಾಡಿನ ಮಂಗಗಳೂ ಸೇರಿದಂತೆ ಇತರೆ ವನ್ಯ ಮೃಗಗಳು ನಾಡಿಗೆ ಬರುತ್ತಿರುವುದು, ಇಲ್ಲೂ ಆಹಾರ ನೀರು ದೊರೆಯದೇ ಸನಿಹದಲ್ಲಿಯೇ ಸಾಯುತ್ತಿರುವುದು ಮಂಗನ ಕಾಲೆ ಹರಡಲು ಕಾರಣವಾಗಿದೆ.

ಈಗಲಾದರೂ ಜನರು ಇಂತಹ ದುರಾಸೆಯನ್ನು ಬಿಟ್ಟು ತಮ್ಮ ಕೈಯಲ್ಲೇ ಇರುವ ಕಾಡು, ನದಿ, ಗುಡ್ಡ, ಬೆಟ್ಟಗಳ ಸಂರಕ್ಷಣೆಯ ಮೂಲಕ ಪ್ರಾಣಿ ಸಂಕುಲಕ್ಕೆ ಅವುಗಳನ್ನು ಬಿಟ್ಟುಕೊಟ್ಟಲ್ಲಿ ಮಾತ್ರ ಈ ದುರಂತಕ್ಕೊಂದು ಅಂತ್ಯ ಕಾಣಬಹುದೇನೋ. ಇಲ್ಲವಾದಲ್ಲಿ ಕೇರಳ – ಕೊಡಗಿನಲ್ಲಿ ಹೇಳಿದಂತೆ ಪ್ರಕೃತಿಯೇ ನಮಗೆ ಮುಟ್ಟಿ ನೋಡಿಕೊಳ್ಳುವಂತೆ ಪಾಠ ಹೇಳುತ್ತದೆ.

ಇನ್ನಾದರೂ ಯೋಚಿಸಿ, ಇದು ನಮಗೆ ಎಚ್ಚರಿಕೆಯ ಗಂಟೆ. ರಾಜಕಾರಣ, ಹಣದ ಆಮಿಷ, ಅತಿ ಆಸೆಗಳನ್ನು ಬದಿಗಿಟ್ಟು ನಮ್ಮ ಬದುಕನ್ನು ಹಸನು ಮಾಡಿಕೊಳ್ಳುವುದು ಬಿಡುವುದು ನಮ್ಮ ಕೈಯಲ್ಲಿದೆ. ಇಂತಹ ಕಾಲೆಗಳ ಬಿಸಿ ನಗರ ಪ್ರದೇಶಗಳಲ್ಲಿಯೇ ಕಾಲ ಕಳೆಯುತ್ತಿರುವ ರಾಜಕಾರಣಿಗಳು, ಅಧಿಕಾರಿಗಳಿಗೆ ತಗುಲಿದರೆ ಇದಕ್ಕೊಂದು ಪಶ್ಚಿಮಘಟ್ಟವೂ ಉಳಿದೀತು.

ಲೇಖನ: ಕೆ. ವೆಂಕಟೇಶ್, ಕವಲಕೋಡು

Tags: Kannada ArticleKannada NewsMangana KayilePoliticianSagaraShivamoggaWestern Ghatsಕಂದಾಯ ಮಂತ್ರಿಪಶ್ಚಿಮ ಘಟ್ಟಮಂಗನ ಕಾಯಿಲೆರೈತ ಕುಟುಂಬ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪ್ರವಾಸಗರೇ ಗಮನಿಸಿ: ಫೆ.4ರಂದು ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವೇಶವಿಲ್ಲ

Next Post

ಶಿವಮೊಗ್ಗದಲ್ಲಿ ನಡೆದ ಫಲಪುಷ್ಪ ಪ್ರದರ್ಶನದ ಅಪರೂಪದ ಚಿತ್ರ ಸಂಗ್ರಹ

kalpa News

kalpa News

Next Post
ಶಿವಮೊಗ್ಗದಲ್ಲಿ ನಡೆದ ಫಲಪುಷ್ಪ ಪ್ರದರ್ಶನದ ಅಪರೂಪದ ಚಿತ್ರ ಸಂಗ್ರಹ

ಶಿವಮೊಗ್ಗದಲ್ಲಿ ನಡೆದ ಫಲಪುಷ್ಪ ಪ್ರದರ್ಶನದ ಅಪರೂಪದ ಚಿತ್ರ ಸಂಗ್ರಹ

Leave a Reply Cancel reply

Your email address will not be published. Required fields are marked *

No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL