ಶಿವಮೊಗ್ಗ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ಭೀಕರ ದಾಳಿಗೆ ಬಲಿಯಾಗಿ ವೀರಸ್ವರ್ಗ ಸೇರಿದ ಸಿಆರ್’ಪಿಎಫ್’ನ 42 ಯೋಧರಿಗೆ ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಗಾಂಧಿ ನಗರದ ಆಡಳಿತ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಸಂಘದ ಜಂಟಿ ಕಾರ್ಯದರ್ಶಿ ತುಳಸಿರಾಂ ಮಾತನಾಡಿ, ಉಗ್ರರ ಕೃತ್ಯವನ್ನು ಖಂಡಿಸಿದರು. ಘಟನೆಯಲ್ಲಿ ವೀರಸ್ವರ್ಗ ಸೇರಿದ ಯೋಧರ ಆತ್ಮಕ್ಕೆ ಚಿರಶಾಂತಿನ್ನು ಕೋರಿದರು.
ಸಂಘದ ಅಧ್ಯಕ್ಷ ಪಿ.ಓ. ಶಿವಕುಮಾರ್, ಗೌರವಾಧ್ಯಕ್ಷ ಟಿ.ಜೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಟಿ. ಶ್ರೀನಿವಾಸರಾವ್ ಮತ್ತು ಇತರ ಸದಸ್ಯರು ಹಾಜರಿದ್ದರು.
(ವರದಿ: ಡಾ.ಸುಧೀಂದ್ರ)

















