ಶಿವಮೊಗ್ಗ: ರಾಜ್ಯ ರಾಜಧಾನಿ ಬೆಂಗಳೂರಿಗೆ ಶರಾವತಿ ನದಿ ನೀರನ್ನು ಹರಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ, ಇದಕ್ಕೆ ವಿರುದ್ಧವಾಗಿ ಹೋರಾಟದ ಕುರಿತಾಗಿ ಪರಿಸರಾಕ್ತರು ಚರ್ಚೆ ನಡೆಸಿದರು.
ಮಥುರಾ ಪ್ಯಾರಡೈಸ್’ನಲ್ಲಿ ನಿನ್ನೆ ಸಂಜೆ ಆಯೋಜಿಸಿದ್ದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಕಾಂತೇಶ್ ಕದರಮಂಡಲಗಿ ಅವರು, ಶರಾವತಿ ಸಮಸ್ಯೆ ನೇರವಾಗಿ ಶಿವಮೊಗ್ಗಕ್ಕೆ ಸಂಬಂಧವಿಲ್ಲವಾದರೂ ಜಿಲ್ಲೆಯ ನೈಸರ್ಗಿಕ ಸಂಪತ್ತಾಗಿ ರಕ್ಷಿಸುವ ನೈತಿಕ ಹೊಣೆ ಜಿಲ್ಲೆಯ ಎಲ್ಲ ನಾಗರಿಕರ ಮೇಲಿದೆ ಎಂದರು.
ಸಾಗರದ ಪರಿಸರ ಸಂಘಟನೆಗಳು ಈಗಾಗಲೇ ಈ ಪ್ರಸ್ತಾವನೆ ವಿರುದ್ಧ ಚಳವಳಿಯ ಸ್ವರೂಪಗಳನ್ನ ಆಯೋಜಿಸಿದೆ. ಸಾಗರ ಮತ್ತು ಸ್ಥಳೀಯ ಸಂಘಟನೆಗಳ ಬೆಂಬಲಕ್ಕೆ ಜಿಲ್ಲೆಯ ಪರಿಸರ ಆಸಕ್ತರು ನಿಲ್ಲಬೇಕಿದೆ. ಇಂದಿನ ಸಮಾಲೋಚನೆಯಲ್ಲಿ ಗೆಳೆಯ ಗೆಳತಿಯರೆಲ್ಲ ತಮ್ಮ ಅನಿಸಿಕೆ ಹಂಚಿಕೊಳ್ಳಬೇಕು ಎಂದರು.
ಅಶೋಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗದ ಪರಿಸಾರಸ್ತರು ಪಾಲ್ಗೊಂಡು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ತಮ್ಮ ಅನಿಸಿಕೆ ಹಂಚಿಕೊಂಡರು.
Discussion about this post