ಶಿವಮೊಗ್ಗ: ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ನಿರ್ಗಮಿತ ಡಿಸಿ ದಯಾನಂದ್ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ.
ವಿಶೇಷವೆಂದರೆ, ಅಧಿಕಾರ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಕಾರ್ಯಪ್ರವೃತ್ತರಾದ ನೂತನ ಜಿಲ್ಲಾಧಿಕಾರಿಯವರು, ನೆರೆಯಿಂದ ಹಾನಿಗೆ ಒಳಗಾಗಿರುವ ಹಲವು ಪ್ರದೇಶಗಳಿಗೆ ಭೇಟಿ ನೀಡಿದ ಪರಿಶೀಲನೆ ನಡೆಸಿದರು.

ಶಿವಮೊಗ್ಗ ನಗರದ ಮಂಡಕ್ಕಿ ಭಟ್ಟಿ, ಸೀಗೆಹಟ್ಟಿ, ಇಮಾಮಬಾಡ, ರಾಮಿನಕೊಪ್ಪ ರಸ್ತೆಯ ಚಾನೆಲ್ ಏರಿಯಾ, ಆರ್.ಎಂ.ಎಲ್ ನಗರ, ಶಾಂತಮ್ಮ ಲೇ ಔಟ್ ಮುಂತಾದ ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಎಲ್ಲ ರೀತಿಯ ರಕ್ಷಣಾ ಕಾರ್ಯ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.



















