ಭದ್ರಾವತಿ: ಇಲ್ಲಿನ ನಗರ ವ್ಯಾಪ್ತಿಯ ಭದ್ರಾ ನದಿಯಲ್ಲಿ ತೆಪ್ಪದಲ್ಲಿ ಸಾಗುತ್ತಿದ್ದ ಯುವಕರಲ್ಲಿ ಓರ್ವ ಕೊಚ್ಚಿ ಹೋದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ತಮೀಮ್ ಜಬಿ ಹಾಗೂ ಅಜರ್ ಸೇರಿದಂತೆ ಮೂವರು ಯುವಕರು ನದಿಯಲ್ಲಿ ತೆಪ್ಪದಲ್ಲಿ ತೆರಳಿದ್ದಾರೆ. ತೆಪ್ಪ ನದಿಯ ಮಧ್ಯದಲ್ಲಿ ತೆರಳುತ್ತಿದ್ದ ವೇಳೆ ತೆಪ್ಪದ ಹುಟ್ಟು ಕೈಜಾರಿದ ಪರಿಣಾಮ ಗಾಬರಿಗೊಂಡ ಯುವಕರು ನೀರಿಗೆ ಜಿಗಿದು ಈಜಿಕೊಂಡು ಬಂದಿದ್ದಾರೆ. ಅಜರ್’ಗೆ ಮರ ಸಿಕ್ಕ ಹಿನ್ನೆಲೆಯಲ್ಲಿ ಆತ ರಕ್ಷಣೆ ಮಾಡಿಕೊಂಡಿದ್ದು, ತಮೀಮ್ ಮಾತ್ರ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.
ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಚ್ಚಿ ಹೋದ ಯುವಕನಿಗಾಗಿ ಶೋಧಕಾರ್ಯ ನಡೆದಿದೆ.















