No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
  • Advertise With Us
  • Grievances
  • About Us
  • Contact Us
Thursday, September 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಮಹಾಲಯ ಅಮಾವಾಸ್ಯೆ ಪಿತೃಗಳಿಗೆ ವಿಶೇಷವೇಕೆ? ಯಾವ ವಸ್ತುಗಳು ದಾನಕ್ಕೆ ಪವಿತ್ರ? ಇಲ್ಲಿದೆ ಮಾಹಿತಿ

ಪಿತೃ ಪಕ್ಷ ಹಿರಿಯರ ಸ್ಮರಣೆಯ ಪರ್ವದಿನ

kalpa News by kalpa News
September 27, 2019
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
ಮಹಾಲಯ ಅಮಾವಾಸ್ಯೆ ಪಿತೃಗಳಿಗೆ ವಿಶೇಷವೇಕೆ? ಯಾವ ವಸ್ತುಗಳು ದಾನಕ್ಕೆ ಪವಿತ್ರ? ಇಲ್ಲಿದೆ ಮಾಹಿತಿ
Share on FacebookShare on TwitterShare on WhatsApp

ಪಿತೃಗಳಿಗೆ ನಾವು ಸಲ್ಲಿಸುವ ವಂದನಾರ್ಪಣೆಯೇ ಪಿತೃಪಕ್ಷದ ವಿಶೇಷ. ನಾವು ಏನೇ ಸಾಧನೆ ಮಾಡಲಿ; ನಮ್ಮ ಜನ್ಮಕ್ಕೆ, ಇಂದಿನ ಜೀವನಕ್ಕೆ ನಮ್ಮ ಪಿತೃಗಳ ಕೊಡುಗೆ ಅಪಾರ. ಆದುದರಿಂದ ವರ್ಷಕ್ಕೊಮ್ಮೆ ಅವರೆಲ್ಲರನ್ನೂ ನೆನೆದು ನಮ್ಮ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ. ಈ ಕರ್ಮಾಂಗಕ್ಕೆ ಯಾವುದೇ ಜಾತಿ-ಧರ್ಮಗಳ ಭೇದವಿಲ್ಲ! ಪಿತೃಪಕ್ಷವು ಸರ್ವರಿಗೂ ಅನ್ವಯಿಸುವ ಆಚರಣೆಯಾಗಿದೆ.

“ಆಚರಣೆ ಎಲ್ಲಿ ಮಾಡಬೇಕು”
ಮನೆಯಲ್ಲಿ ತಿಲತರ್ಪಣ ನೀಡುವುದನ್ನು ಶಾಸ್ತ್ರಗಳು ನಿಷೇಧಿಸಿವೆ. ಭಾನುವಾರ, ಶುಕ್ರವಾರ, ಭರಣಿ, ಕೃತಿಕಾ ಹಾಗೂ ಮಘಾ ನಕ್ಷತ್ರಗಳಿರುವ ದಿನಗಳಲ್ಲಿ ಕೂಡ ತಿಲತರ್ಪಣವನ್ನು ನಿಷೇಧಿಸಲಾಗಿದೆ. ಆದರೆ ಪಿತೃಪಕ್ಷದಲ್ಲಿ ಮಾತ್ರ ಯಾವುದೇ ನಿಷಿದ್ಧ ತಿಥಿ ವಾರ ನಕ್ಷತ್ರಗಳಿದ್ದರೂ ತಿಲತರ್ಪಣ ಮಾಡಬಹುದು.

ತರ್ಪಣಕ್ಕೆ ಉತ್ತಮ ಸ್ಥಳಗಳೆಂದರೆ ಪವಿತ್ರ ನದೀತೀರಗಳು ಹಾಗೂ ಗೋಕರ್ಣಾದಿ ತೀರ್ಥಕ್ಷೇತ್ರಗಳು. ಪಿತೃಪಕ್ಷದಲ್ಲಿ ಅವಶ್ಯವಾಗಿ ತರ್ಪಣದ ಅಧಿಕಾರವುಳ್ಳವರು ಗೋಕರ್ಣ, ಶ್ರೀರಂಗಪಟ್ಟಣ ಮುಂತಾದ ಕ್ಷೇತ್ರಗಳು ಅಥವಾ ಕಾವೇರಿ, ಗಂಗಾ ಇಂಥ ಪವಿತ್ರ ನದೀತೀರಗಳಲ್ಲಿ ಪಿತೃಗಳಿಗೆ ಪಿಂಡಪ್ರದಾನ, ತರ್ಪಣಾದಿಗಳನ್ನು ಅರ್ಪಿಸುವುದು ಉತ್ತಮ. ವಿವಾಹವಾಗಿ ಇನ್ನೂ ಒಂದು ವರ್ಷ ಮುಗಿಯದವರು ತರ್ಪಣ ಮಾಡಕೂಡದು.

ಪರಮ ದುರ್ಲಭವಾದ ಮನುಷ್ಯಜನ್ಮದ ಸಾಫಲ್ಯತೆಯು ಅದನ್ನು ಪಡೆದ ನಮ್ಮ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ಪರಮಾತ್ಮ ನಮಗೆ ಈ ಜನ್ಮವನ್ನು ಏತಕ್ಕಾಗಿ ನೀಡಿದ್ದಾನೆ ಎಂದರೆ ಹಿಂದಿನ ಜನ್ಮದ ಪಾಪ ಶೇಷಗಳನ್ನು ಅನುಭವಿಸಿ ಮುಗಿಸಿ ಮತ್ತೆ ಇನ್ನೂ ಹೆಚ್ಚಿನದಾದ ಪುಣ್ಯಸಂಪಾದನೆ ಮಾಡಿ ಮೋಕ್ಷವನ್ನು ಪಡೆಯಲಿ ಎಂದು. ಆಚಾರ್ಯ ಶಂಕರರು ನುಡಿದಂತೆ ಪುನರಪಿ ಜನನಂ ಪುನರಪಿ ಮರಣಂ. ಹೀಗೆ ಎಷ್ಟು ಜನ್ಮ ತಾಳಿದರೂ ಸಹ ಮುಗಿಸಲಾಗದಷ್ಟು ಪಾಪವನ್ನು ಒಂದೇ ಜನ್ಮದಲ್ಲಿ ಸಂಪಾದಿಸಿಬಿಡುತ್ತೇವೆ. ಈ ಕಠಿಣ ಸಮಸ್ಯೆಗೆ ನಮ್ಮ ಶಾಸ್ತ್ರಗಳು ಸುಲಭ ಪರಿಹಾರ ನೀಡುತ್ತವೆ. ಶಾಸ್ತ್ರಗಳ ಪ್ರಕಾರ ಮೃತರ ಆತ್ಮಗಳಿಗೆ ಶಾಶ್ವತ ಪಿತೃಲೋಕ ಪ್ರಾಪ್ತಿಯಾಗುವಂತೆ ಮಾಡುವುದು ಅವರ ಮಕ್ಕಳ ಕರ್ತವ್ಯ.

ಗರುಡಪುರಾಣದಲ್ಲಿ ಭಗವಂತನು ನುಡಿಯುತ್ತಾನೆ: ‘ಯಾವನು ಪುತ್ ಎಂಬ ನರಕದಿಂದ ಪಿತೃಗಳನ್ನು ಪಾರುಮಾಡುತ್ತಾನೋ ಅವನೇ ಪುತ್ರ’. ಆದುದರಿಂದ ಯಾವುದೇ ಜಾತಿಬೇಧವಿಲ್ಲದೆ ಕರ್ಮಾಕಾರ ಇದ್ದಲ್ಲಿ ಪಿತೃಗಳಿಗೆ ಶ್ರಾದ್ಧ, ತರ್ಪಣ ಹಾಗೂ ದಾನಗಳನ್ನು ಮಾಡಿ ತಮ್ಮ ಋಣ ತೀರಿಸಲೇಬೇಕು.

ಕಾಲ
ಇಂಥ ವಿಶೇಷ ಕರ್ತವ್ಯವನ್ನು ಪಾಲಿಸಬೇಕಾದ ಸಂದರ್ಭದಲ್ಲಿ ಗಮನಿಸಬೇಕಾದ ಅಂಶ ಕಾಲ. ಯಾವ ಕಾಲದಲ್ಲಿ ಪಿತೃಗಳಿಗೆ ಸದ್ಗತಿ ನೀಡುವ ಕಾರ್ಯಗಳನ್ನು ಮಾಡಬೇಕು? ಸಾಮಾನ್ಯವಾಗಿ ವಾರ್ಷಿಕ ಶ್ರಾದ್ಧ ರೂಢಿಯಲ್ಲಿ ಇಟ್ಟುಕೊಂಡವರು ಮೃತರ ಶ್ರಾದ್ಧವನ್ನು ಅವರ ಮೃತಮಾಸದ ಆ ತಿಥಿಯಂದು ಪಿಂಡಗಳನ್ನು ಸಮರ್ಪಿಸಿ ಆಚರಿಸುತ್ತಾರೆ. ಆದರೆ ಅಂಥ ಸಮಯದಲ್ಲಿ ಶ್ರಾದ್ಧ ಮಾಡುವವರು ಪಿತೃ, ಪಿತಾಮಹ, ಪ್ರಪಿತಾಮಹ ಅಂದರೆ ತಂದೆ, ಅಜ್ಜ ಹಾಗೂ ಮುತ್ತಜ್ಜನಿಗೆ ಅಥವಾ ತಾಯಿ, ಅಜ್ಜಿ ಹಾಗೂ ಮುತ್ತಜ್ಜಿಗೆ ಪಿಂಡಾದಿಗಳನ್ನಿಟ್ಟು ಶ್ರಾದ್ಧ ಮಾಡುತ್ತಾರೆ. ಆದರೆ ಭಾದ್ರಪದಮಾಸದ ಕೃಷ್ಣಪಕ್ಷದಲ್ಲಿ ಮಾತ್ರ ಕುಟುಂಬದಲ್ಲಿ ಮೃತರಾದ ಪ್ರತಿಯೊಬ್ಬರಿಗೂ ತರ್ಪಣ ಕೊಡಬೇಕು. ಕಾರಣ ಮಾಸಗಳಲ್ಲಿ ಅತ್ಯಂತ ಭದ್ರಮಾಸ ಎಂದು ಕರೆಯಲ್ಪಡುವುದು ಈ ಭಾದ್ರಪದ.

ಅದರಲ್ಲಿಯೂ ಕೃಷ್ಣಪಕ್ಷ ಪ್ರಾರಂಭಗೊಳ್ಳುವುದು ಉತ್ತರಭಾದ್ರಾ ನಕ್ಷತ್ರದಿಂದ. ಅಂದರೆ ಮನುಷ್ಯಜನ್ಮ ಮುಗಿಸಿದ ಉತ್ತರದಲ್ಲಿ ಆ ಆತ್ಮಕ್ಕೆ ಶಾಶ್ವತ ಭದ್ರಸ್ಥಾನವನ್ನು ಪಿತೃಲೋಕದಲ್ಲಿ ಸ್ಥಾಪಿಸಲು ಹಾಗೂ ಅವರಿಗೆ ತರ್ಪಣಾದಿಗಳನ್ನು ಕೊಟ್ಟು ಶುಭವನ್ನು ಪಡೆಯಲು ಈ ಪಕ್ಷ ಸೂಕ್ತ ಸಮಯ. ವರ್ಷಕ್ಕೊಮ್ಮೆ ಏಕೆ ಎಂಬುದು ಸಾಮಾನ್ಯರ ಅನುಮಾನ. ಶಾಸಗಳ ಪ್ರಕಾರ ಭೂಲೋಕದಲ್ಲಿ ವಾಸ ಮಾಡುವ ನಮ್ಮ ಒಂದು ವರ್ಷ ಪಿತೃಲೋಕದವರಿಗೆ ಒಂದು ದಿವಸ. ಹೀಗಾಗಿ ವರ್ಷಕ್ಕೊಮ್ಮೆ ಪಿತೃಪಕ್ಷದಲ್ಲಿ ಪೂರ್ವಿಕರನ್ನು ಆರಾಸಿದರೆ ಪ್ರತಿದಿನ ಪಿತೃಗಳನ್ನು ಆರಾಸಿದಂತೆ. ಇನ್ನು ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿಯೇ ಏಕೆ? ‘ನಿರ್ಣಯಸಿಂಧು’ ಗ್ರಂಥದಲ್ಲಿ ತಿಳಿಸಿದಂತೆ ‘ಆಷಾಢಮಾಸದ ಹುಣ್ಣಿಮೆಯ ನಂತರ ಐದನೆಯ ಪಕ್ಷದಲ್ಲಿ ಪಿತೃಗಳು ಪ್ರತಿದಿನ ಅನ್ನ ಹಾಗೂ ನೀರನ್ನು ಬಯಸುತ್ತಾರೆ.’

ಇಲ್ಲಿ ಪಕ್ಷ ಎಂದರೆ 15 ತಿಥಿಗಳು. ಅಲ್ಲಿಗೆ ಆಷಾಢಮಾಸದ ಹುಣ್ಣಿಮೆಯ ನಂತರ ಐದನೆಯ ಪಕ್ಷ ಈ ಭಾದ್ರಪದ ಕೃಷ್ಣಪಕ್ಷ. ಆದುದರಿಂದ ಈ ಪಕ್ಷವನ್ನು ಪಿತೃಪಕ್ಷ ಎಂದು ಕರೆದಿದ್ದಾರೆ. ಆದುದರಿಂದ ಪಿತೃಗಳನ್ನು ತೃಪ್ತಿಪಡಿಸಲು ಅವರು ಬಯಸುವ ಅನ್ನವನ್ನು ಪಿಂಡಗಳ ಸಮರ್ಪಣೆ ಮೂಲಕ ಹಾಗೂ ಅವರು ಬಯಸುವ ನೀರನ್ನು ತರ್ಪಣಗಳ ಮೂಲಕ ನೀಡಿ ಪಿತೃಗಳ ಆಶೀರ್ವಾದಕ್ಕೆ ಪಾತ್ರರಾಗಬೇಕು.

“ಆಚರಣಾ ಕ್ರಮಗಳು”
ಈ ಪಕ್ಷದಲ್ಲಿ ಪಿತೃಗಳಿಗೆ ಯಾವ ವಿಧಾನವನ್ನು ಆಚರಿಸಬೇಕೆಂಬುದು ವರ್ಣಶ್ರಮಗಳನ್ನು ಆಧರಿಸಿ ಸ್ವಲ್ಪ ವಿಭಿನ್ನವಾಗಿದೆ. ಇಲ್ಲಿ ಪದ್ಧತಿ ಭೇದಗಳು ಬಹಳವಾಗಿ ಕಂಡುಬರುವುದು. ಆದರೆ ‘ಶಾಸಾತ್ ರೂಢಿಃ ಗರೀಯಸೀ’ ಎಂಬ ಶಾಸ್ತ್ರವಾಕ್ಯದಂತೆ ಹಿಂದಿನಿಂದ ಆಚರಣೆ ಮಾಡಿಕೊಂಡು ಬಂದುದನ್ನು ಬಿಡಬಾರದು. ವೇದಾಕಾರ ಇಲ್ಲದವರು ಪಿತೃಗಳಿಗೆ ಪ್ರಿಯವಾದ ಭಕ್ಷ್ಯಗಳನ್ನು ತಯಾರಿಸಿ ಮನೆಯ ದೇವರ ಮುಂದೆ ಬಾಳೆ ಎಲೆಗಳನ್ನು ಹರಡಿ ಅದರಲ್ಲಿ ಆ ಭಕ್ಷ್ಯಗಳನ್ನು ಬಡಿಸಬೇಕು. ಮನೆಯ ತುಂಬ ಧೂಪವನ್ನು ಹಾಕಿ ಪಿತೃಗಳನ್ನು ನೆನೆದು, ಅವರು ಈ ಎಲ್ಲ ಭಕ್ಷ್ಯಭೋಜ್ಯಗಳನ್ನು ಸ್ವೀಕರಿಸಿ ತಮ್ಮನ್ನು ಹರಸಬೇಕೆಂದು ಪ್ರಾರ್ಥಿಸಬೇಕು. ಯದ್ಭಾವಂ ತದ್ಭವತಿ ಎಂಬಂತೆ ಇದನ್ನೇ ಹಿರಿಯರಿಗೆ ಎಡೆ ನೀಡುವುದು ಎನ್ನುತ್ತಾರೆ. ಇದರಿಂದ ಪಿತೃಗಳು ತೃಪ್ತರಾಗುತ್ತಾರೆ. ತರ್ಪಣಗಳನ್ನು ಕೊಡುವಾಗ ಯಾರ‍್ಯಾರಿಗೆ ಮತ್ತು ಯಾರಿಗೆ ಮೊದಲು ತರ್ಪಣ ಕೊಡಬೇಕು ಇತ್ಯಾದಿಗಳ ಬಗ್ಗೆ ಶಾಸಗಳಲ್ಲಿ ಹೀಗೆ ತಿಳಿಸಲಾಗಿದೆ.

ಆದೌ ಪಿತಾ ತತೋ ಮಾತಾ ಸಪತ್ನೀ ಜನನೀ ತಥಾ |
ಮಾತಾಮಹಾಃ ಸಪತ್ನೀಕಾಃ ಹ್ಯಾತ್ಮಪತ್ನೀ ತತಃ ಪರಂ ||
ಸುತಭ್ರಾತೃಪಿತೃವ್ಯಾಶ್ಚ ಮಾತುಲಾಶ್ಚ ಸಭಾರ್ಯಕಾಃ |
ದುಹಿತಾ ಭಗಿನೀ ಚೈವ ದೌಹಿತ್ರೋ ಭಾಗಿನೇಯಕಃ ||
ಶ್ಯಾಲಕೋ ಭಾವುಕಶ್ಬೈವ ಶ್ವಶುರೋ ಗುರುಋತ್ವಿಜಾ |
ಏತೇ ಸ್ಯುಃ ಪಿತರಸ್ತೀರ್ಥೆ ತರ್ಪಣೇಚ ಮಹಾಲಯೇ ||

ಕುಟುಂಬದಲ್ಲಿ ಮೃತಪಟ್ಟವರಲ್ಲಿ ಕ್ರಮವಾಗಿ ಮೊದಲು ತಂದೆ, ತಾಯಿ, ಹೆಂಡತಿ, ಅತ್ತೆ, ಮಾವ, ಮಗ, ಸಹೋದರರು, ದೊಡ್ಡಪ್ಪ, ಚಿಕ್ಕಪ್ಪ ಹಾಗೂ ಅವರ ಹೆಂಡತಿ, ತಾಯಿಯ ತಮ್ಮ ಅಥವಾ ಅಣ್ಣ, ಅವರ ಹೆಂಡತಿಯರು, ಮಗಳು, ಅಕ್ಕ, ತಂಗಿ ಹಾಗೂ ಅವರ ಮಕ್ಕಳಿಗೆ, ಭಾವ, ಮೈದುನ ಮುಂತಾದವರು ಹಾಗೂ ವಿಶೇಷವಾಗಿ ಗುರುಗಳು, ಕುಲಪುರೋಹಿತರು ಸೇರಿದಂತೆ ಯಾರು ನಮಗೆ ತಿಳಿದಂತೆ ಮೃತರಾಗಿದ್ದಾರೋ ಅವರಿಗೆ – ಹೀಗೆ ಸರ್ವರಿಗೂ ಕ್ರಮವಾಗಿ ತರ್ಪಣಗಳನ್ನು ಕೊಡಬೇಕು.

ಇನ್ನು ಅನಾರೋಗ್ಯ, ವೃದ್ಧಾಪ್ಯ ಇತ್ಯಾದಿ ಕಾರಣಗಳಿಂದಾಗಿ ಇಷ್ಟೆಲ್ಲ ವಿಸ್ತಾರವಾಗಿ ತರ್ಪಣಗಳನ್ನು ಮಾಡಲು ಅಶಕ್ತರಾದವರು ಸಂಕ್ಷಿಪ್ತವಾಗಿಯೂ ಆಚರಿಸಬಹುದು. ಹೇಗೆಂದರೆ,

ಆಬ್ರಹ್ಮಸ್ತಂಭಪರ‍್ಯಂತಂ ದೇವರ್ಷಿ ಪಿತೃಮಾನವಾಃ |
ತೃಪ್ಯಂತು ಪಿತರಃ ಸರ್ವೇ ಮಾತೃಮಾತಾಮಹಾದಯಃ ||
ಆತೀತ ಕುಲಕೋಟೀನಾಂ ಸಪ್ತದ್ವೀಪ ನಿವಾಸಿನಾಂ |
ಆಬ್ರಹ್ಮ ಭುವನಾಲ್ಲೋಕಾತ್ ಇದಮಸ್ತು ತಿಲೋದಕಮ್ ||

ಎಂದು ಹೇಳುತ್ತ ಮೂರು ಸಲ ಎಳ್ಳುನೀರು ಬಿಡಬೇಕು. ಸಾಮಾನ್ಯವಾಗಿ ಇದನ್ನು ಮನೆಯ ಮುಂದೆ, ತುಳಸಿ ಕಟ್ಟೆಯ ಹತ್ತಿರ ಮಾಡುವ ಸಂಪ್ರದಾಯ ಕೆಲವರಲ್ಲಿದೆ ಎಂಬುದು ಕೆಲವು ಧರ್ಮಶಾಸ್ತ್ರಜ್ಞರ ಅಭಿಪ್ರಾಯ.

ಈ ತರ್ಪಣಾದಿಗಳನ್ನು ಆಚರಿಸುವಾಗ ಶುದ್ಧತೆಗೆ ಪ್ರಾಮುಖ್ಯತೆ ನೀಡಬೇಕು. ಈ ಸಂದರ್ಭದಲ್ಲಿ ದರ್ಭೆಗೆ ಅತ್ಯಂತ ಆವಶ್ಯಕ ಸ್ಥಾನವಿದೆ. ದರ್ಭೆಯಿಂದ ತಯಾರಿಸಿದ ಪವಿತ್ರವನ್ನು ಉಂಗುರದ ಬೆರಳಿಗೆ ಧರಿಸಿಯೇ ತರ್ಪಣಾದಿಗಳನ್ನು ಕೊಡಬೇಕು. ಕರ್ಮ ಮಾಡುವವನು ದರ್ಭಾಸನದಲ್ಲಿ ಕುಳಿತುಕೊಳ್ಳಬೇಕು ಹಾಗೂ ಪಿಂಡ ಹಾಕಿ ಕರ್ಮಾಂಗ ಮಾಡುವವರು ದರ್ಭೆಯ ಮೇಲೆಯೇ ಪಿಂಡ ಪ್ರಧಾನ ಮಾಡಬೇಕು. ತರ್ಪಣಾದಿಗಳನ್ನು ಮಾಡುವವರು ಶುದ್ಧವಾದ ಸ್ಥಳ, ವಸ, ನೀರು, ಎಳ್ಳು ಹಾಗೂ ಅಕ್ಕಿಯನ್ನು ಬಳಸಬೇಕು. ಯಾವುದೇ ಕಾರಣಕ್ಕೂ ತರ್ಪಣದಲ್ಲಿ ಬಳಸುವ ಅಕ್ಕಿ ತುಂಡಾಗಿರಬಾರದು. ತರ್ಪಣ ಮಾಡುವ ಸ್ಥಳದಲ್ಲಿ ಉದುರಿದ ಕೂದಲು ಇತ್ಯಾದಿಗಳು ಇರಬಾರದು. ಪರಿಶುದ್ಧ ಮನಸ್ಸಿನಿಂದ ತರ್ಪಣಗಳನ್ನು ನೀಡಬೇಕು. ಮನೆಯಲ್ಲಿ ಹಿರಿಯರ ದಿನದ ಆಚರಣೆಯ ಸಂದರ್ಭದಲ್ಲಿ ಅವಾಚ್ಯ ಶಬ್ದಗಳ ಬಳಕೆ, ಕೂಗುವುದು, ಕಿರುಚುವುದು ಮಾಡಬಾರದು. ಈ ಸಂದರ್ಭದಲ್ಲಿ ಘಂಟಾನಾದಕ್ಕೆ ನಿಷೇಧವಿದೆ.

“ಘಾತ ಚತುರ್ದಶಿ”
ಪಿತೃಪಕ್ಷದಲ್ಲಿ ಮಹಾಲಯ ಅಮಾವಾಸ್ಯೆಯ ಹಿಂದಿನ ತಿಥಿ ಅಂದರೆ ಚತುರ್ದಶಿಯಂದು ಘಾತ ಚತುರ್ದಶಿ ಎಂದು ಬಳಸುವ ಪದ್ಧತಿ ಹಾಗೂ ಶಾಸ್ತ್ರಾಧಾರವಿದೆ. ಶಾಸ್ತ್ರಾದಿಗಳಲ್ಲಿ ತಿಳಿಸಿದಂತೆ ಮರದಿಂದ ಬಿದ್ದು ಸತ್ತವರು; ವಿಷಪ್ರಾಶನ, ಲೋಹ, ವಿದ್ಯುತ್, ನೀರು, ಬೆಂಕಿ, ಶಸ್ತ್ರಾಸ್ತ್ರಗಳ ಘಾತ, ಪ್ರಾಣಿಗಳ ಆಕ್ರಮಣ ಇತ್ಯಾದಿಗಳಿಂದ ಪ್ರಾಣ ಕಳೆದುಕೊಂಡವರಿಗೆ ಮಹಾಲಯ ಅಮಾವಾಸ್ಯೆಯ ಮೊದಲು ಬರುವ ಚತುರ್ದಶಿಯಂದು ಪಿಂಡಾದಿ ಪ್ರದಾನ ಮಾಡಿ ಶ್ರಾದ್ಧ ಆಚರಿಸಬೇಕು. ಅದರಿಂದ ಅವರು ತೃಪ್ತರಾಗುತ್ತಾರೆ. ಕುಟುಂಬದಲ್ಲಿ ಯಾರಾದರೂ ಅಪಮೃತ್ಯುವಿಗೀಡಾಗಿದ್ದಲ್ಲಿ ಈ ತಿಥಿಯಂದು ಅವರಿಗೆ ಕಡ್ಡಾಯವಾಗಿ ತರ್ಪಣಾದಿಗಳನ್ನು ನೀಡಬೇಕು. ಹಾಗೆ ಮಾಡುವುದರಿಂದಾಗಿ ಕುಟುಂಬದಲ್ಲಿನ ಪ್ರೇತಬಾಧೆಗಳು ನಿವಾರಣೆಯಾಗುತ್ತವೆ.

“ದಾನಗಳು”
ಈ ಪಕ್ಷದಲ್ಲಿ ಪಿತೃಗಳ ತೃಪ್ತಿಗಾಗಿ ದಾನಗಳಿಗೆ ಮಹತ್ವವಿದೆ. ಈರುಳ್ಳಿ-ಬೆಳ್ಳುಳ್ಳಿ ಇತ್ಯಾದಿ ತಮೋಗುಣ ಪ್ರಧಾನ ತರಕಾರಿ ಹೊರತುಪಡಿಸಿ ಬೇರೆ ತರಕಾರಿ, ಅಕ್ಕಿ, ಬೇಳೆ, ಬೆಲ್ಲ ಇತ್ಯಾದಿಗಳನ್ನು ಕುಂಬಳಕಾಯಿ ಸಹಿತ ದಾನ ಮಾಡಬೇಕು. ವಸ್ತ್ರ, ಗೋವು, ಹೊಸ ಕೊಡೆ, ಹೊಸ ಪಾದರಕ್ಷೆ ಇತ್ಯಾದಿಗಳ ದಾನವು ಕೂಡ ವಿಶೇಷ ಫಲಗಳನ್ನು ಹಾಗೂ ಪಿತೃಗಳಿಗೆ ತೃಪ್ತಿಯನ್ನು ಕೊಡುತ್ತದೆ ಎಂದು ಶಾಸ್ತಗಳು ತಿಳಿಸಿವೆ. ನಾವು ಕೊಡುವ ದಾನವು, ಅದನ್ನು ಪಡೆದವರು ಸಂತೋಷವಾಗಿ ಬಳಸುವಂತಿರಬೇಕು ಎಂಬುದು ಗಮನಿಸಬೇಕಾದ ಮುಖ್ಯ ಅಂಶ. ಅಶಕ್ತರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಕ್ಷಿಣೆ ಕೊಟ್ಟು ನಮಸ್ಕರಿಸಿದರೂ ಅದು ಶುಭಪ್ರದ.
ಸರ್ವೇಜನಾಃ ಸುಖಿನೋಭವಂತು ಕೃಷ್ಣಾರ್ಪಣಮಸ್ತು

Tags: Dr. Gururaja PoshettihalliGaruda PuranaMahalaya AmavasyaPitru PakshaSpecial Articleಗರುಡಪುರಾಣಡಾ.ಗುರುರಾಜ ಪೋಶೆಟ್ಟಿಹಳ್ಳಿತಿಲತರ್ಪಣಪಿತೃ ಪಕ್ಷಮಹಾಲಯ ಅಮಾವಾಸ್ಯೆ
Share202Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭದ್ರಾವತಿ-ಜನಪದ ಕಲೆಗಳು ಅಗಾಧ ಸಮುದ್ರ, ಕಲಿಕೆಗೆ ಆಸಕ್ತಿ ಮುಖ್ಯ: ಡಿ.ಮಂಜುನಾಥ್

Next Post

ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಸದ ಬಿವೈಆರ್ ಒತ್ತು: ಜೋಗ ಅಭಿವೃದ್ಧಿ ಹೊಸ ಪ್ಲಾನ್ ಏನು ಗೊತ್ತಾ?

kalpa News

kalpa News

Next Post
ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಸದ ಬಿವೈಆರ್ ಒತ್ತು: ಜೋಗ ಅಭಿವೃದ್ಧಿ ಹೊಸ ಪ್ಲಾನ್ ಏನು ಗೊತ್ತಾ?

ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಸದ ಬಿವೈಆರ್ ಒತ್ತು: ಜೋಗ ಅಭಿವೃದ್ಧಿ ಹೊಸ ಪ್ಲಾನ್ ಏನು ಗೊತ್ತಾ?

Leave a Reply Cancel reply

Your email address will not be published. Required fields are marked *

No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL