No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
  • Advertise With Us
  • Grievances
  • About Us
  • Contact Us
Saturday, July 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಭದ್ರಾವತಿ

ಸೌತ್ ಏಷ್ಯನ್ ಒಲಿಂಪಿಕ್ ಗೇಮ್ಸ್‌’ನಲ್ಲಿ ಭಾರತವನ್ನು ಗೆಲ್ಲಿಸಿದ ಭದ್ರಾವತಿಯ ಮುನಿರ್ ಬಾಷಾ ನಮ್ಮ ಹೆಮ್ಮೆ

ಮಲೆನಾಡ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ ಕ್ರೀಡಾಪಟು ಈತ

kalpa News by kalpa News
December 4, 2019
in ಭದ್ರಾವತಿ, ಕ್ರೀಡೆ
0
ಸೌತ್ ಏಷ್ಯನ್ ಒಲಿಂಪಿಕ್ ಗೇಮ್ಸ್‌’ನಲ್ಲಿ ಭಾರತವನ್ನು ಗೆಲ್ಲಿಸಿದ ಭದ್ರಾವತಿಯ ಮುನಿರ್ ಬಾಷಾ ನಮ್ಮ ಹೆಮ್ಮೆ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ:
ಸೌತ್ ಏಷ್ಯನ್ ಒಲಿಂಪಿಕ್ ಗೇಮ್ಸ್‌’ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಖೊ ಖೋ ಕ್ರೀಡಾಕೂಟದಲ್ಲಿ ತಮ್ಮ ನೇತೃತ್ವದ ಭಾರತೀಯ ತಂಡವನ್ನು ಗೆಲ್ಲಿಸಿಕೊಂಡು ಬರುವಲ್ಲಿ ನಮ್ಮ ಭದ್ರಾವತಿಯ ಹೆಮ್ಮೆಯ ಕ್ರೀಡಾಪಟು ಮುನಿರ್ ಬಾಷಾ ಯಶಸ್ವಿಯಾಗಿದ್ದಾರೆ.

ನೇಪಾಳದ ಕಠ್ಮಂಡುವಿನಲ್ಲಿ ನಿನ್ನೆ ನಡೆದ ಕ್ರೀಡಾಕೂಟದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿದ್ದು, ಇದರ ನೇತೃತ್ವವನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮುನಿರ್ ಬಾಷಾ ವಹಿಸಿದ್ದರು ಎಂಬುದು ಮಲೆನಾಡಿಗರ ಹೆಮ್ಮೆಯಾಗಿದೆ.

ಮುನಿರ್ ಬಾಷಾ ಅವರ ಕುರಿತು ಓದಿ:
ಭದ್ರಾವತಿಯ ಭಾಷಾ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂದರೆ ಸುಮಾರು ಅವರ ಎಂಟನೆಯ ವಯಸ್ಸಿನಲ್ಲಿ ನಾಲ್ಕನೇ ತರಗತಿಯಲ್ಲಿ ಓದುವಾಗಲೇ ಖೊಖೋ ಕ್ರೀಡೆಯಲ್ಲಿ ಅತೀವ ಆಸಕ್ತಿಯಿಂದ ಹೊಂದಿದ್ದರು.

ಪ್ರತಿನಿತ್ಯ ಮೈದಾನಕ್ಕೆ ತೆರಳುತ್ತಿದ್ದ ಅವರು ಹಿರಿಯ ಕ್ರೀಡಾಪಟುಗಳಿಗೆ ಮೈದಾನವನ್ನು ಸಜ್ಜು ಮಾಡಿಕೊಡುವ ಜೊತೆಯಲ್ಲಿ ಅವರ ತಯಾರಿಯನ್ನು ನೋಡುತ್ತಾ ಕಲಿಯಲು ಆರಂಭಿಸಿದರು ಬಾಷಾ.

ಭದ್ರಾವತಿಯ ಖ್ಯಾತ ದೈಹಿಕ ಶಿಕ್ಷಕ ಎಚ್.ಟಿ. ತಿಮ್ಮಪ್ಪ ಅವರ ಮಾರ್ಗದರ್ಶನ ಗರಡಿಗೆ ಬಂದ ಇವರು, ಎಸ್’ಸಿಎಫ್’ಐಯಿಂದ ಕರ್ನಾಟಕವನ್ನು ಪ್ರತಿನಿಧಿಸಿ ವಿಜೇತರಾಗಿದ್ದರು. ಕರ್ನಾಟಕ ರಾಜ್ಯ ಸಂಸ್ಥೆಯಿಂದ ಹದಿನಾಲ್ಕನೆಯ ವರ್ಷದ ಸಬ್ ಜೂನಿಯರ್ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದು, ಅದರಲ್ಲಿ ಅವರು ವಿಜೇತರಾಗಿ ಹಾಗೂ ಅತ್ಯುತ್ತಮ ಆಟಗಾರರಾಗಿ ಖೊಖೋ ಫೆಡರೇಷನ್ ಆಫ್ ಇಂಡಿಯಾದಿಂದ ನೀಡುವಂತಹ ಗೌರವಾನ್ವಿತ ಭಾರತ್ ಅವಾರ್ಡ್ ಪಡೆದಿದ್ದಾರೆ.


ಹೈಸ್ಕೂಲ್ ವಿಭಾಗದಲ್ಲಿಯೂ ರಾಜ್ಯವನ್ನು ಪ್ರತಿನಿಧಿಸಿದ್ದ ಬಾಷಾ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಎರಡು ಬಾರಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾಗಿದ್ದರು.

ತಮ್ಮ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಅದನ್ನೆಲ್ಲಾ ಪಕ್ಕಕ್ಕಿಟ್ಟ ಎಂಪಿಎಂಸಿ ಆವರಣದಲ್ಲಿ ಹಮಾಲಿ ಕೆಲಸ ಮಾಡುವ ಬಾಷಾ ಅವರ ತಂದೆ ಅಹ್ಮದ್ ಜಾನ್, ತಾಯಿ ಆರಿಫಾ ಬೇಗಂ ಅವರುಗಳು ಮಗನ ಕ್ರೀಡಾಸಕ್ತಿಗೆ ನೀರೆರೆದು ಪ್ರೋತ್ಸಾಹಿಸುತ್ತಾ ಬಂದರು.

ಬಡತನದ ಕಾರಣದಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ಬಾಷಾ ಜೀವನಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಗಾರೆ ಕೆಲಸ ಆರಂಭಿಸುತ್ತಾರೆ. ಮೂರು ವರ್ಷಗಳ ಕಾಲ ಗಾರೆ ಕೆಲಸ ಮಾಡುತ್ತಲೇ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ತೆರಳುತ್ತಿದ್ದ ಬಾಷಾ, ತಮ್ಮ ಕ್ರೀಡಾಸಕ್ತಿಯನ್ನು ಮಾತ್ರ ಬಿಡದೇ ನಿರಂತರ ಅಭ್ಯಾಸ ಮಾಡುತ್ತಿದ್ದರು.

ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾ ಸಂಸ್ಥೆಯವರು ಇವರನ್ನು ಗುರುತಿಸಿ ವಿದ್ಯಾಭ್ಯಾಸ ಮುಂದುವರೆಸಲು ಪ್ರೋತ್ಸಾಹಿಸಿದರು. ಹೀಗಾಗಿ, ಮತ್ತೆ ವಿದ್ಯಾಭ್ಯಾಸ ಆರಂಭಿಸಿದ ಅವರು ಬಿಎ ಪದವಿ ಪಡೆದು ಕುವೆಂಪು ವಿವಿಯನ್ನು ಮೂರು ಬಾರಿ ಖೊಖೊ ತಂಡವನ್ನು ಪ್ರತಿನಿಧಿಸಿ, ರನ್ನರ್ ಅಪ್ ಆಗಿದ್ದರು.


ಕರ್ನಾಟಕ ರಾಜ್ಯ ಖೊಖೊ ಸಂಸ್ಥೆಯ ವತಿಯಿಂದ ತುಮಕೂರಿನಲ್ಲಿ ನಡೆದ ಖೊಖೊ ಫೆಡರೇಶನ್ ಕಪ್’ನಲ್ಲಿ ರಾಜ್ಯವನ್ನು ವಿಜೇತರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸರಿಸುಮಾರು ಸೀನಿಯರ್ ನ್ಯಾಷನಲ್ಸ್‌’ನ್ನು ರಾಜ್ಯದ ಪರವಾಗಿ ನಾಲ್ಕು ಬಾರಿ ಪ್ರತಿನಿಧಿಸಿದ್ದು, ಕೇರಳದಲ್ಲಿ ನಡೆದ ನ್ಯಾಷನಲ್ಸ್ ಗೇಮ್’ನಲ್ಲಿ ರಾಜ್ಯವನ್ನು ಮೂರನೇ ಸ್ಥಾನ ಹಾಗೂ ಸೀನಿಯರ್ ನ್ಯಾಷನಲ್ಸ್’ಗಳಲ್ಲಿ ಎರಡು ಮತ್ತು ಮೂರು ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಾಜ್ಯ ಮಟ್ಟದಲ್ಲಿ ಹಾಗೂ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನಗೊಳಿಸಲು ಅತಿ ಹೆಚ್ಚು ಪಾತ್ರ ವಹಿಸಿದ್ದು ಹಾಗೂ ನಮ್ಮ ಸಂಸ್ಥೆಯಲ್ಲಿ ಎಲ್ಲ ಆಟಗಾರರು ಅವನ ಜೊತೆಗೆ ಸಂಪೂರ್ಣ ಸಹಕಾರದಿಂದ ನಮ್ಮ ಸಂಸ್ಥೆಯ ಹೆಸರನ್ನು ಉನ್ನತ ಮಟ್ಟಕ್ಕೆ ಏರಲು ಪ್ರಮುಖ ಪಾತ್ರರಾಗಿದ್ದಾರೆ.

ಇವರ ಈ ಎಲ್ಲ ಕ್ರೀಡಾ ಸಾಧನೆಯನ್ನು ಗಮನಿಸಿ ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು 2017ರಲ್ಲಿ ನೀಡಿ ಗೌರವಿಸಿದೆ.


ಇನ್ನು ಈ ಹಿಂದೆ ನೀಡುತ್ತಿದ್ದಂತಹ ಏಕಲವ್ಯ ಪ್ರಶಸ್ತಿಯನ್ನು ಖೊಖೊ ಕ್ರೀಡೆಗೆ ಪರಿಗಣಿಸಿ ಅವರಿಗೆ ನೀಡಬೇಕೆಂದು ರಾಜ್ಯ ಸರ್ಕಾರದಲ್ಲಿ ಕಳಕಳಿಯ ವಿನಂತಿ ಮಾಡುತ್ತಾರೆ.

ರಾಷ್ಟ್ರವೇ ಮೆಚ್ಚುವಂತಹ ಸಾಧನೆ ಮಾಡಿರುವ ಮುನಿರ್ ಬಾಷಾ ಅವರ ಕ್ರೀಡಾ ಸೇವೆಯನ್ನು ರಾಜ್ಯ ಸರ್ಕಾರ ಪರಿಗಣಿಸಿ, ಇವರ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಇವರಿಗೊಂದು ಸರ್ಕಾರಿ ಉದ್ಯೋಗ ನೀಡುವ ಮೂಲಕ ಪ್ರೋತ್ಸಾಹಿಸಬೇಕಿದೆ ಎಂಬುದು ಭದ್ರಾವತಿ ನಾಗರಿಕರ ಮನವಿಯಾಗಿದೆ.

(ವರದಿ: ಡಾ.ಸುಧೀಂದ್ರ)

Get in Touch With Us info@kalpa.news Whatsapp: 9481252093

Tags: BhadravathiIndian SportsKannada NewsKhokhoMalnad NewsMunir BashaShivamoggaSouth Asian Olympic GamesSports NewsSriLankaಏಕಲವ್ಯ ಪ್ರಶಸ್ತಿಕರ್ನಾಟಕ ರಾಜ್ಯ ಖೊಖೊ ಸಂಸ್ಥೆಕ್ರೀಡಾ ಸುದ್ಧಿಕ್ರೀಡಾಂಗಣಖೊಖೊಭದ್ರಾವತಿಮುನಿರ್ ಬಾಷಾಶಿವಮೊಗ್ಗಸೌತ್ ಏಷ್ಯನ್ ಒಲಿಂಪಿಕ್ ಗೇಮ್ಸ್‌
Share366Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ತುಮಕೂರು: ದೇವಸ್ಥಾನದ ಹುಂಡಿ ಒಡೆದು ಸರಣಿ ಕಳ್ಳತನ

Next Post

ವಾಟ್ಸಪ್ ಗ್ರೂಪ್’ಗೂ ನಾಲ್ಕನೆಯ ವಾರ್ಷಿಕೋತ್ಸವ ಸಂಭ್ರಮ: ಅರ್ಥಪೂರ್ಣ ಆಚರಣೆ ಹೇಗಿತ್ತು ಗೊತ್ತಾ?

kalpa News

kalpa News

Next Post
ವಾಟ್ಸಪ್ ಗ್ರೂಪ್’ಗೂ ನಾಲ್ಕನೆಯ ವಾರ್ಷಿಕೋತ್ಸವ ಸಂಭ್ರಮ: ಅರ್ಥಪೂರ್ಣ ಆಚರಣೆ ಹೇಗಿತ್ತು ಗೊತ್ತಾ?

ವಾಟ್ಸಪ್ ಗ್ರೂಪ್’ಗೂ ನಾಲ್ಕನೆಯ ವಾರ್ಷಿಕೋತ್ಸವ ಸಂಭ್ರಮ: ಅರ್ಥಪೂರ್ಣ ಆಚರಣೆ ಹೇಗಿತ್ತು ಗೊತ್ತಾ?

Leave a Reply Cancel reply

Your email address will not be published. Required fields are marked *

No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL