ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಸಪ್ತಸ್ವರ ವಾಟ್ಸಾಪ್ ಸಮೂಹ ಮತ್ತು ಕೊಪ್ಪಳ ಶ್ರೀರಾಘವೇಂದ್ರ ಮಠದ ಸಂಯುಕ್ತಾಶ್ರಯದಲ್ಲಿ ಸಪ್ತಸ್ವರ ವಾಟ್ಸಾಪ್ ಸಮೂಹದ 4ನೆಯ ವಾರ್ಷಿಕೋತ್ಸವ ಸಂಭ್ರಮ ಸಡಗರದದಿಂದ ಡಿಸೆಂಬರ್ 1ರಂದು ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ನಡೆಯಿತು.
ಉದ್ಘಾಟನೆಯ ನಂತರದಲ್ಲಿ ಸಪ್ತಸ್ವರ ಸಮೂಹದ ಸದಸ್ಯರುಗಳಾದ ಅಶ್ವಿನಿ ಬಳ್ಳಾರಿ, ರಾಧಾ ಸವಣೂರ, ವೇಣುಗೋಪಾಲ ರಾಯಚೂರು, ವಿಭಾ ಕಟ್ಟಿ, ಅನನ್ಯಾ ದೇಸಾಯಿ, ಅನ್ವಿಕಾ ಕೊಪ್ಲು, ಕೃಷ್ಣ ಡಬೇರ, ಅನಸೂಯಾ ಜಾಗಿರದಾರ, ಸಮೀರ ಬಂಡಿಹಾಳ, ವಾದಿರಾಜ ಪಾಟೀಲ ರವರ, ಮುಂತಾದವರ ದಾಸವಾಣಿ, ನೃತ್ಯರೂಪಕ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಸುಮಾರು 250ಕ್ಕೂ ಹೆಚ್ಚು ವಾಟ್ಸಾಪ್ ಸಮೂಹದ ಸದಸ್ಯರು ವಿವಿಧ ರಾಜ್ಯ ಮತ್ತು ನಗರದಿಂದ ಆಗಮಿಸಿದ್ದು ವಿಶೇಷವಾಗಿತ್ತು.
ಸಂಜೆ ಸನ್ಮಾನ ಸಭಾ ಕಾರ್ಯಕ್ರಮ ನಡೆಸಿ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದರಾದ ಪಂಡಿತ ಶ್ರೀಪಾದ ಹೆಗಡೆ, ಧಾರವಾಡ ಹಾಗೂ ದಾಸರಾದ ಶ್ರೀ ಸಿರವಾಳ ರಾಘವೇಂದ್ರಾಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪಂಡಿತರಂಗನಾಥಾಚಾರ್ಯ ಹುಲಗಿ, ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಅರ್ಚಕರಾದ ಪ್ರೇಮಾಚಾರ್ಯ, ಹಾಗೂ ಕೊಪ್ಪಳ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ. ಕೆ.ಜಿ ಕುಲಕರ್ಣಿ ಉಪಸ್ಥಿತರಿದ್ದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಈ ವಾಟ್ಸಾಪ್ ಸಮೂಹದ ಸಂಸ್ಥಾಪಕ ಗಿರೀಶ ಕುಲಕರ್ಣಿ ವಹಿಸಿದ್ದರು.
ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಯೋಜಿಸಲಾಗಿತ್ತು.
ಇನ್ನು, ಸಪ್ತಸ್ವರ 4 ನೇಯ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದ ಪ್ರಾರಭದಲ್ಲಿ ಗಂಗಾವತಿಯ ಪಂ. ಋಗ್ವೇದಿ ಶ್ರೀನಿವಾಸಾಚಾರ್ ಅವರಿಂದ ದಾಸವಾಣಿ, ನಂತರ ಸಮೂಹದ ಕಲಾವಿದೆ ಕುಮಾರಿ ಚೈತ್ರಾ ಗುಬ್ಬಿ ಬೆಂಗಳೂರು ಇವರ ಭರತನಾಟ್ಯ ಹಾಗೂ ಶ್ರೀಮೇಧೋನ್ಮೋದಿನಿ ಭಜನಾ ಮಂಡಳಿ ಕೊಪ್ಪಳ ಅವರಿಂದ ಕೋಲಾಟ ಜರುಗಿದವು.
ಧಾರವಾಡದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಪ್ರಖ್ಯಾತ ಕಲಾವಿದರಾದ ಶ್ರೀಪಾದ ಹೆಗಡೆ ಅವರಿಂದ ಗಾಯನ ಜರುಗಿತು. ತಬಲಾ ಸಾಥನಲ್ಲಿ ಹೊನ್ನಾವರದ ಶ್ರೀಗುರುರಾಜ ಆಡುಕಳ ಹಾಗೂ ಸಂವಾದಿನಿಯಲ್ಲಿ ಧಾರವಾಡದ ಶ್ರೀಮತಿ ನಾಗವೇಣಿ ಹೆಗಡೆ, ತಾನ್ಪೂರ ಸಾಥ ವಿಭಾ ಕಟ್ಟಿ ಕೊಪ್ಪಳರವರು ಸಹಕರಿಸಿದರು.
ಬೆಳಿಗ್ಗೆಯಿಂದ ನೆಡೆದ ಸಂಗೀತ ಕಾರ್ಯಕ್ರಮದಲ್ಲಿ ಸಮೂಹದ ಕಲಾವಿದರಾದ ಶ್ರೀಗುರುರಾಜದಾಸ ಕೊಪ್ಪಳ, ರವೀಂದ್ರ ಆಶ್ರೀತ, ಅನಂತ ಪವಣಸ್ಕರ ಅವರುಗಳು ತಬಲಾ ಕಲಾವಿದರಾಗಿ ಸಾಥ್ ನೀಡಿದರು. ನಾರಾಯಣ ದಾಸ್, ಪ್ರಭಾಕರ್ ಪಟವಾರಿ, ಸಮೀರ್ ಬಂಡಿಹಾಳ್, ಮಾರುತಿ ಚಿತ್ರಗಾರ್ ರವರುಗಳು ಹಾರ್ಮೋನಿಯಂ ಸಾಥ್ ನೀಡುವರು, ತಾಳವಾದ್ಯದಲ್ಲಿ ಕೃಷ್ಣ ಸೊರರ್ಟೂ, ಸತೀಶ್ ದೇಸಾಯಿ, ಗುರುರಾಜ್ ಜೋಶಿ ನರಸಿಂಹ ಆಲೂರ್ ಸಾಥ್ ನೀಡಿ ಸಂಗೀತದ ಮೆರುಗನ್ನು ಹೆಚ್ಚಿಸಿದರು.
ಕೊಪ್ಪಳದ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಆವರಣದಲ್ಲಿ ಶ್ರೀಮತಿ ರಮಾಬಾಯಿ ನಾರಾಯಣಚಾರ್ ಕಿನ್ನಾಳ, ಇವರಿಂದ ಹಂಪಿಯ ಯಂತ್ರೋದ್ದಾರಕ ಮುಖ್ಯಪ್ರಾಣ ದೇವರ ವಿಶೇಷ ರಂಗೋಲಿ ಹಾಕುವುದರ ಮೂಲಕ ದೀಪ ಹಚ್ಚಲಾಯಿತು.
ಕೊಪ್ಪಳ, ಕಿನ್ನಾಳ್ ಇನ್ನಿತರ ಸುತ್ತಮುತ್ತಲಿನ ಬ್ರಾಹ್ಮಣ ಸಮುದಾಯದ ಸಂಗೀತ ಪ್ರೇಮಿಗಳು ಮತ್ತು ಶ್ರೀರಾಘವೇಂದ್ರ ಸ್ವಾಮಿಗಳ ಮಠ ಕೊಪ್ಪಳ ಇವರ ಪೂರ್ಣ ಸಹಕಾರ ಮತ್ತು ಸಹಾಯದಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ವರದಿ: ಮುರಳೀಧರ್ ನಾಡಿಗೇರ್, ಕೊಪ್ಪಳ
Get in Touch With Us info@kalpa.news Whatsapp: 9481252093
Discussion about this post