ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರ ವ್ಯಾಪ್ತಿಯ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಡಿ.14ರಂದು ಶನಿವಾರ ಕನ್ನಡ ಭಾವಗೀತೆ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ.
ನಗರದ ಪ್ರತಿಷ್ಠಿತ ಕರ್ನಾಟಕ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ. ಶಿವಮೊಗ್ಗ ಸುಬ್ಬಣ್ಣ ಮತ್ತು ಅವರ ಸಹೋದರ ಎಸ್.ಜಿ. ಯಜ್ಞನಾರಾಯಣ ಸ್ಥಾಪಿಸಿರುವ, ದಿ. ರಂಗನಾಯಕಮ್ಮ ಗಣೇಶ ರಾವ್ ಸ್ಮಾರಕ ದತ್ತಿನಿ ಕನ್ನಡ ಭಾವಗೀತೆ ಗಾಯನ ಸ್ಪರ್ಧೆಯನು ಆಯೋಜಿಸಲಾಗಿದೆ.
ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜು ವಿಭಾಗದ ವಿಜೇತರಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗುತ್ತಿದ್ದು, ಮೊದಲ ಬಹುಮಾನ- 1000.00, ದ್ವಿತೀಯ ಬಹುಮಾನ-750.00, ತೃತೀಯ ಬಹುಮಾನ – 500.00 ಹಾಗೂ ಎರಡು ಸಧಾನಕರ ಬಹುಮಾನ – ತಲಾ 250.00 ರೂ. ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ಕರ್ನಾಟಕ ಸಂಘದ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತದೆ.
ಆಸಕ್ತ ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ತಮ್ಮ ಶಾಲಾ ಕಾಲೇಜುಗಳ ಮೂಲಕ ಡಿ. 09ರ ಸೋಮವಾರದ ಒಳಗಾಗಿ ಹೆಸರುಗಳನ್ನು ನೋಂದಾಯಿಸಬಹುದು. ಈ ಹಿಂದೆ ಇದೇ ಸ್ಪರ್ಧೆಯಲ್ಲಿ ಮೊದಲನೇ ಮತ್ತು ಎರಡನೇ ಬಹುಮಾನ ಪಡೆದ
ವಿದ್ಯಾರ್ಥಿಗಳು ಪುನಃ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ.
ವಿವರಗಳಿಗೆ ದೂರವಾಣಿ ಕರ್ನಾಟಕ ಸಂಘದ ಕಚೇರಿಯ ವೇಳೆಯಲ್ಲಿ 08182 277406ರಲ್ಲಿ ಸಂಪರ್ಕಿಸಬಹುದು.
Get in Touch With Us info@kalpa.news Whatsapp: 9481252093
Discussion about this post