No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
  • Advertise With Us
  • Grievances
  • About Us
  • Contact Us
Sunday, September 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಬ್ಯಾಂಕ್’ಗಳು ರೈತರನ್ನು ಹೇಗೆ ಅಡಿಯಾಳಾಗಿಸಿಕೊಂಡಿವೆ ಎಂಬುದಕ್ಕಿದು ನೈಜ, ತಾಜಾ ಉದಾಹರಣೆ!

kalpa News by kalpa News
January 14, 2020
in Small Bytes, Special Articles
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ಕಳೆದ ಎರಡು ದಶಕಗಳಿಂದ ಕಾಣುತ್ತಿದ್ದೇವೆ. ಭಾರತೀಯ ಆರ್ಥಿಕ ವ್ಯವಸ್ಥೆಯಲ್ಲಿ ಭಾರತೀಯ ರಿರ್ಸವ್ ಬ್ಯಾಂಕ್ ತನ್ನದೇ ಆದ ಕೊಡುಗೆಯನ್ನು ಆರಂಭದಿಂದಲ್ಲೂ ನೀಡುತ್ತಾ ಬಂದಿದೆ. ಮುಂದುವರೆದ ದೇಶಗಳ ಬಡ್ಡಿ ದರಗಳಿಗೆ ಹೋಲಿಸಿದರೇ ಕೊಂಚ ಹೆಚ್ಚೇ ಬಡ್ಡಿ ಹಾಕುತ್ತಾರೆ ಎನ್ನುವ ಅಪವಾದವು ಇದೆ. ಸಾರ್ವಜನಿಕ ವಲಯದ ಬ್ಯಾಂಕ್’ಗಳಾಗಲಿ ಖಾಸಗಿ ವಲಯದ ಬ್ಯಾಂಕ್’ಗಳಾಗಲಿ ಭಾರತದಂತಹ ಗ್ರಾಮೀಣ ಜನಗಳನ್ನು ವಹಿವಾಟಿನಲ್ಲಿ ತೊಡಗಿಸುವುದರಲ್ಲಿ ಸೋತಿವೆ.

ಕೃಷಿ ಪ್ರಧಾನ ಕುಟುಂಬಗಳಲ್ಲಿನ ಶಿಕ್ಷಣದ ಕೊರೆತೆ ಹಾಗೂ ಬ್ಯಾಂಕ್ ನೌಕರರ ಮುಂಚುಮರೆಯ ನಿಲುವುಗಳು ಬ್ಯಾಂಕಿಂಗ್ ವಲಯದ ಪ್ರಗತಿಗೆ ಮಾರಕವಾಗಿದೆ ಎಂದು ಹೇಳಬಹುದು. ಒಬ್ಬ ಕೃಷಿ ಭೂಮಿ ಹೊಂದಿರುವ ವ್ಯಕ್ತಿಯು ಕೆಸಿಸಿ ಖಾತೆಯಲ್ಲಿ ಸಾಲ ಪಡೆದಿರುತ್ತಾನೆ. ಆತ ಇನ್ಯಾವುದೋ ಉದ್ದೇಶದಿಂದ ಬಂಗಾರವನ್ನು ಅಡಮಾನವಾಗಿಟ್ಟು ಜೊತೆಗೆ ಆರ್’ಟಿಸಿಯನ್ನು ಸಲ್ಲಿಸಿರುತ್ತಾನೆ. ಹಸು ಖರೀದಿಗೆ ಅದೇ ವ್ಯಕ್ತಿ ಸಾಲವನ್ನು ನೀಡುತ್ತಾರೆ.

ಇಷ್ಟೆಲ್ಲ ರೀತಿಯ ಸಾಲವನ್ನು ನೀಡುವ ಬ್ಯಾಂಕಿನ ನೌಕರರು ಸಾಲ ಪಡೆದ ವ್ಯಕ್ತಿಗೆ ಸಾಲ ಮರುಪಾವತಿಯ ದಿನಾಂಕ ತಿಂಗಳು ಕಂತಿನ ವಿವರ ಹಾಗೂ ಸರ್ಕಾರಗಳಿಂದ ನಿಗದಿ ಸಮಯಕ್ಕೆ ಬಡ್ಡಿ ಪಾವತಿಸಿದಕ್ಕೆ ನೀಡುವ ಸಬ್ಸಿಡಿಗಳ ಮಾಹಿತಿಯನ್ನು ಯಾವ ಬ್ಯಾಂಕಿನವರು ನೀಡುವುದಿಲ್ಲ. ಸಾಲ ಪಡೆಯುವ ವ್ಯಕ್ತಿಗೆ ತನ್ನದೇ ಆದ ಸಂಕಷ್ಟ ನಿವಾರಣೆಗೆಂದು ಬಂದ ಕಾರಣ ಮರುಪಾವತಿ ಮಾಹಿತಿಯನ್ನು ಸ್ವತಃ ಸ್ವಯಂ ಪ್ರೇರಿತರಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ ಅಥವಾ ಬ್ಯಾಂಕಿನಲ್ಲಿರುವ ಸೌಲಭ್ಯಗಳನ್ನು ಗ್ರಾಹಕರಿಗೆ ತಿಳಿಸುವ ಗೋಜಿಗೆ ಹೋಗುವುದಿಲ್ಲ.

ಕೃಷಿ ಕುಟುಂಬದಿಂದ ಬಂದ ಗ್ರಾಹಕರನ್ನು ಹೇಗೆಲ್ಲ ಯಾಮಾರಿಸುತ್ತಾರೆ ಎಂದರೆ, ಜರೂರಾಗಿ ಮಕ್ಕಳ ಮದುವೆಗಾಗಿ ಗೋಲ್ಡ್‌ ಲೋನ್’ನಲ್ಲಿಟ್ಟ ಬಂಗಾರವನ್ನು ಬಿಡಿಸಬೇಕೆಂದು ಬಂದ ಗ್ರಾಹಕನಿಗೆ ಉಳಿದ ಲೋನ್’ಗಳಾದ ಕೆಸಿಸಿ, ಟ್ಯಾಕ್ಟರ್ ಸಾಲಗಳ ಬಡ್ಡಿಯನ್ನು ರೈತನಿಗೆ ಹೇಳದೇ ಒಟ್ಟು ಮೊತ್ತ ಇಷ್ಟಾಗಿದೆ ಎನ್ನುವ ಬ್ಯಾಂಕ್ ನೌಕರನಿಗೆ ಇವರುಗಳಿಂದ ನನಗೆ ಸಂಬಳ, ಅನ್ನ ತಿಂದ ಮನೆಗೆ ಕನ್ನ ಹಾಕಬಾರದೆಂಬ ಕನಿಷ್ಟ ನಿಯತ್ತು ಕೂಡ ಇಲ್ಲವಾಗಿಸಿಕೊಂಡಿರುತ್ತಾರೆ.

ಹಣ ಕಟ್ಟಿದ ರೈತನಿಗೆ ಯಾವುದೋ ರೂಪದಲ್ಲಿ ವಿಷಯ ತಲುಪಿದಾಗ ಬಾಯಿಬಿಟ್ಟು ಇಂತಹದಕ್ಕೆ ಇಷ್ಟಿಷ್ಟು ಬಡ್ಡಿಯಾಗಿತ್ತು, ಕಟ್ಟಿಸಿಕೊಳ್ಳುತ್ತಿವೆ ಎಂದರೆ ಹೇಗಾದ್ರೂ ಮಾಡಿ ಕಟ್ಟುತ್ತಿದೆ. ಈ ರೀತಿ ಮಾಡಬಾರದಿತ್ತು. ಇನ್ನು ಈ ಬ್ಯಾಂಕ್ ಅವರ ಸಹವಾಸ ಸಾಕೆಂಬ ನಿರ್ಧಾರಕ್ಕೆ ಬಂದುಬಿಡುತ್ತಾನೆ. ಅದೇ ಗ್ರಾಹಕ ತಾನು ಪಡೆದ ಸಾಲವನ್ನೆಲ್ಲ ಒಂದೇ ಸಾರಿ ಕಟ್ಟಿದರೇ ಬ್ಯಾಂಕ್’ನವರು ಡಿಸ್ಕೌಂಟ್ ಕೊಡುತ್ತಾರೆಂದು ಘೋಷಿಸಿದನ್ನು ಕೇಳಿ ಬರುತ್ತಾನೆ. ಅದೇ ಬ್ಯಾಂಕ್ ಮ್ಯಾನೇಜರ್ ಹೇಳ್ತಾನೆ ಕಳೆದ ತಿಂಗಳು ಗೋಲ್ಡ್‌ ಲೋನ್ ಕ್ಲೋಸ್ ಮಾಡುವಾಗ ಉಳಿದ ಲೋನ್ ರಿನೀವಲ್ ಆಗಿದೆ, ಇವಾಗ ಏನು ಮಾಡಲು ಸಾಧ್ಯವಿಲ್ಲ.

ಬ್ಯಾಂಕ್ ನೌಕರ ಮಾಡಿದ ಈ ಯಡವಟ್ಟಿನಿಂದ ಒನ್ ಟೈಮ್ ಸೆಟಲ್ಮೆಂಟ್ ಅಡಿ ಶೇ.35ರಷ್ಟು ಮಾತ್ರ ಕಟ್ಟಿದ್ದರೇ ಸಾಲ ಮುಕ್ತವಾಗುವ ಅವಕಾಶವಿತ್ತು. ಹೇಯ್ ವ್ಯವಸಾಯಗಾರ ನೀ ಸಾಯ ನಿಮ್ಮಪ್ಪ ಸಾಯ ಮನೆ ಮಂದಿ ಎಲ್ಲಾ ಸಾಯ. ಆದರೆ ಬ್ಯಾಂಕಿನವರಿಂದ ಋಣಮುಕ್ತರಾಗದಿರಿ ಎನ್ನುವ ಹಿಡನ್ ಅಜೆಂಡಾದೊಂದಿಗೆ ರೈತಾಪಿ ಜನಗಳನ್ನು ಶೋಷಿಸುತ್ತಿದ್ದಾರೆ.

ಈ ಮೇಲೆ ವ್ಯಕ್ತಪಡಿಸಿದ ಸನ್ನಿವೇಶ ನೈಜವಾಗಿ ನಡೆದ ಘಟನೆಯಾಗಿದ್ದು. ಬ್ಯಾಂಕ್’ಗಳು ಹೇಗೆ ರೈತಾಪಿ ವರ್ಗವನ್ನು ಅಡಿಯಾಳಾಗಿ ಮಾಡಿಕೊಂಡಿವೆ ಎನ್ನುವುದಕ್ಕೆ ತಾಜಾ ಉದಾಹರಣೆ. ಒಂದು ಕಡೆ ಮಳೆ ಅತಿಯಾಗಿ ಬೆಳೆ ನಾಶ ಇನ್ನೊಂದು ಕಡೆ ಬರಗಾಲದಿಂದ ದೀಘಾವಧಿ ಬೆಳೆ ನಾಶ. ಅಲ್ಲೊಂದ್ ಸ್ವಲ್ಪ, ಇಲ್ಲೊಂದ್ ಸ್ವಲ್ಪ ಬಂದ ಬೆಳೆಗೆ ನಿಗದಿತ ದರವಿಲ್ಲದೇ ಕಂಗಾಲಾಗಿದ್ದಲ್ಲದೇ ಬ್ಯಾಂಕಿನವರಿಗೆ ಸಾಯುವವರೆಗೂ ಗುಮಲಾಗಿರಿ ಮಾಡಿಕೊಂಡೇ ಇರುವ ಪರಿಸ್ಥಿತಿ.

ಬ್ಯಾಂಕಿನವರಿಗೆ ನಿಗದಿತ ಬಡ್ಡಿ ದರವಿದೆ, ಔಷಧಿ ಅಂಗಡಿಯಲ್ಲಿ ನಿಗದಿತ ದರವಿದೆ, ಬೇರೆ ಯಾವುದೇ ಸರಕು ಸಾಮಾಗ್ರಿಗಳಿಗೆ ನಿಗದಿತ ದರ ಇರುತ್ತದೆ. ರೈತ ಬೆಳೆದ ಬೆಲೆ ನಿಗದಿತ ಬೆಲೆ ಇಲ್ಲವೆ ಇಲ್ಲ. ಇನ್ನು ಮುಗಿಲು ನೋಡುತ್ತಾ ಆಚ್ಛೇ ದಿನ್ ಕಾಯುತ್ತಲೇ ಇದೆ ಭಾರತ ರೈತಾಪಿ ವರ್ಗ.


Get in Touch With Us info@kalpa.news Whatsapp: 9481252093

Tags: BankBanking SectorKannada News WebsiteLoanSpecial ArticleU J Niranjan Murthyಕೃಷಿ ಕುಟುಂಬಬ್ಯಾಂಕಿಂಗ್ ಕ್ಷೇತ್ರಬ್ಯಾಂಕ್ರೈತವ್ಯವಸಾಯ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಗತ ವೈಭವ ಸಾರಿದ ಆನೆಗೊಂದಿ ಹಾಗೂ ಹಂಪಿ ಉತ್ಸವ

Next Post

ಮತ್ತೆ ಬಂದೈತೆ ನೋಡಣ್ಣ ಮನೆ ಮನಗಳ ಸಂಕ್ರಮಣ: ಆಹಾರ ವೈವಿಧ್ಯದ ಸುಗ್ಗಿ

kalpa News

kalpa News

Next Post

ಮತ್ತೆ ಬಂದೈತೆ ನೋಡಣ್ಣ ಮನೆ ಮನಗಳ ಸಂಕ್ರಮಣ: ಆಹಾರ ವೈವಿಧ್ಯದ ಸುಗ್ಗಿ

Leave a Reply Cancel reply

Your email address will not be published. Required fields are marked *

No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL