ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಸಂರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ಗ್ರಾಹಕರ ವೇದಿಕೆಯು ಗ್ರಾಹಕ ಸಂರಕ್ಷಣಾ ಕಾಯ್ದೆಗಳಲ್ಲಿ ಕೆಲವು ಮುಖ್ಯ ಬದಲಾವಣೆಯನ್ನು ಮಾಡಲಾಗಿದೆ. ಜಿಲ್ಲಾ ಗ್ರಾಹಕರ ವೇದಿಕೆಯನ್ನು ಜಿಲ್ಲಾ ಆಯೋಗವೆಂದು ಮರು ಹೆಸರಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಸಿ.ಎಂ. ಚಂಚಲ ತಿಳಿಸಿದರು.
ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಾಹೀರಾತು ಹಳೆಯ ಕಾಯ್ದೆ ಆಡೀಯೋ, ವಿಶುವಲ್ ಪಬ್ಲಿಸಿಟಿ, ರೆಪ್ರಸೆಂಟೇಷನ್, ಲೈಟ್, ಸ್ಮೋಕ್, ಗ್ಯಾಸ್, ಪ್ರಿಂಟ್’ಗಳ ಜಾಹೀರಾತುಗಳ ಜೊತೆಗೆ ಎಲೆಕ್ಟ್ರಾನಿಕ್ ಮೀಡಿಯಾ, ಇಂಟರ್‌ನೆಟ್, ವೆಬ್’ಸೈಟ್ ಜಾಹೀರಾತುಗಳನ್ನು ಸೇರಿಸಲಾಗಿದೆ. ವಸ್ತುಗಳನ್ನು ಕೊಂಡುಕೊಳ್ಳುವುದರ ಕಾಯ್ದೆ ಜೊತೆಗೆ ಆನ್’ಲೈನ್ ಮತ್ತು ಎಲೆಕ್ಟ್ರಾನಿಕ್ ಅಥವಾ ಟೆಲಿಶಾಪಿಂಗ್ ಮೂಲಕ ನೇರವಾಗಿ ಅಥವಾ ಪರೋಕ್ಷವಾಗಿ ಕೊಂಡುಕೊಳ್ಳುವುದರ ಮೊಕದ್ದಮೆಗಳನ್ನು ಸೇರಿಸಲಾಗಿದೆ. ಹಾಗೆಯೇ ಇ-ಕಾಮರ್ಸ್ ವಸ್ತುಗಳನ್ನು ಕೊಂಡುಕೊಳ್ಳುವುದು ಮತ್ತು ಮಾರುವಿಕೆ ವ್ಯಾಜ್ಯಗಳ ಜೊತೆ ಡಿಜಿಟಲ್ ಪ್ರಾಡಕ್ಟ್ ಅಥವಾ ಎಲೆಕ್ಟ್ರಾನಿಕ್ ನೆಟ್‌ವರ್ಕ್ ವ್ಯಾಜ್ಯಗಳನ್ನು ಸಹ ಸೇರಿಸಲಾಗಿದೆ ಎಂದವರು ತಿಳಿಸಿದರು.
ರಕ್ತ, ರಕ್ತದ ಕಣಗಳು, ರಕ್ತಕ್ಕೆ ಸಂಬಂಧಿಸಿದ ಯಾವುದೇ ಪ್ರಾಡೆಕ್ಟ್ ಮತ್ತು ಆರ್ಗನೈಸರ್ಸ್’ಗಳನ್ನು ಗೂಡ್ಸ್ ಡೆಫಿನೇಷನ್‌ನಿಂದ ಹೊರತುಪಡಿಸಲಾಗಿದೆ. ವಸ್ತುಗಳನ್ನು ತಯಾರಿಸುವವನ ಜೊತೆ ಮಾರುವವನು ಹಾಗೂ ಸರ್ವಿಸ್ ಪ್ರೊವೈಡರ್‌ಗಳನ್ನು ಸಹ ಸೇವಾ ನ್ಯೂನತೆಗೆ ಸಂಬಂಧಿಸಿದ ಕೇಸ್‌ಗಳಲ್ಲಿ ಒಳಪಡಿಸಬಹುದಾಗಿದೆ. ಜೊತೆಯಲ್ಲಿ ಪ್ರಾಡೆಕ್ಟ್ ಲೈಯಾಬಿಲಿಟಿ ಆಕ್ಷನ್ ಎಂಬ ಅಂಶವನ್ನು ಸೇರಿಸಿ ಇದರಲ್ಲಿ ಆ ಪ್ರಾಡೆಕ್ಟ್‌ನಿಂದ ಕೊಂಡುಕೊಂಡ ವ್ಯಕ್ತಿಗೆ ಯಾವುದೇ ತೊಂದರೆ ಆದಲ್ಲಿ ಪ್ರಾಡಕ್ಟ್’ಗೆ ಸಂಬಂಧಿಸಿದ ಎಲ್ಲಾ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.
ಸೆಂಟ್ರಲ್ ಕನ್ಸೂಮರ್ ಕೌನ್ಸಿಲ್‌ಗಳಲ್ಲಿ ಇನ್‌ವೆಸ್ಟಿಗೇಷನ್ ವಿಂಗ್‌ಗಳನ್ನು ಹೊಸದಾಗಿ ಜಾರಿಗೆ ತರಲಾಗಿದೆ. ಸೆಂಟ್ರಲ್ ಕನ್ಸೂಮರ್ ಕೌನ್ಸಿಲ್‌ಗಳು ಇನ್‌ವೆಸ್ಟಿಗೇಷನ್ ಮಾಡಿಕೊಟ್ಟಂತಹ ರಿಪೋರ್ಟಿನ ಆಧಾರದ ಮೇಲೆ ಯಾವುದೇ ಸುಳ್ಳು ಜಾಹಿರಾತು ಎಂದು ತಿಳಿದು ಬಂದಲ್ಲಿ ಅವರ ವಿರುದ್ಧ 10 ಲಕ್ಷದವರೆಗೆ ದಂಡ ವಿಧಿಸಲು ಸೆಂಟ್ರಲ್ ಅಥಾರಿಟಿಗೆ ಅಧಿಕಾರ ನೀಡಲಾಗಿದೆ. ಸುಳ್ಳು ಜಾಹೀರಾತು ಪುನಃ ಮರುಕಳಿಸಿದರೆ ಅದಕ್ಕೆ 50 ಲಕ್ಷದವರೆಗೆ ದಂಡ ವಿಧಿಸಲು ಅಧಿಕಾರ ನೀಡಲಾಗಿದೆ. ಜಾಹೀರಾತಿನ ಪ್ರಾಡಕ್ಟ್’ಗಳ ಬಗ್ಗೆ 1 ವರ್ಷದವರೆಗೆ ಯಾವುದೇ ಜಾಹೀರಾತು ನೀಡದಂತೆ ಪ್ರತಿಬಂಧಿಸುವ ಅಧಿಕಾರ ಸಹ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನು ಮೀರಿ ಜಾಹೀರಾತು ನೀಡಿದಲ್ಲಿ ಆ ಒಂದು ವರ್ಷದಿಂದ ಮೂರು ವರ್ಷದವರೆಗೆ ವಿಸ್ತರಿಸಲು ಹಾಗೂ ಯಾವುದೇ ವ್ಯಕ್ತಿ ಸುಳ್ಳು ಜಾಹೀರಾತು ನೀಡಿದಲ್ಲಿ ಅವನಿಗೆ 10 ಲಕ್ಷದವರೆಗೆ ದಂಡ ವಿಧಿಸಲು ಅಧಿಕಾರವಿರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆಯೋಗವು ಗ್ರಾಹಕರಿಗೆ ಪರಿಹಾರ ಕೊಡಿಸುವ ಹಣದ ವ್ಯಾಪ್ತಿಯು 20 ಲಕ್ಷದಿಂದ 1 ಕೋಟಿಗೆ ವಿಸ್ತರಿಸಲಾಗಿದ್ದು, ರಾಜ್ಯ ಆಯೋಗಕ್ಕೆ ಒಂದು ಕೋಟಿಯಿಂದ ಹತ್ತು ಕೋಟಿಗೆ ಹಾಗೂ ರಾಷ್ಟ್ರೀಯ ಆಯೋಗಕ್ಕೆ 10 ಕೋಟಿಗಿಂತ ಹೆಚ್ಚಿರಬೇಕೆಂದು ಅವರು ತಿಳಿಸಿದರು.
ಮೊದಲು ಪಿರ್ಯಾದಿಯು ಯಾವ ಪ್ರದೇಶದಲ್ಲಿ ಪ್ರಾಡಕ್ಟ್’ನ್ನು ಕೊಂಡುಕೊಳ್ಳುವನೋ ಆ ಪ್ರದೇಶದ ವ್ಯಾಪ್ತಿಯಲ್ಲೇ ದೂರು ದಾಖಲಿಸಬೇಕಿತ್ತು. ಆದರೆ ಈಗ ಪಿರ್ಯಾದಿಯು ಎಲ್ಲೇ ಪ್ರಾಡಕ್ಟ್‌ನ್ನು ಕೊಂಡುಕೊಂಡರೂ ಅವನಿದ್ದ ಜಾಗದ ವ್ಯಾಪ್ತಿಯಲ್ಲಿರುವ ಜಿಲ್ಲಾ ಗ್ರಾಹಕರ ಆಯೋಗದ ಮುಂದೆ ದೂರು ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಜಿಲ್ಲಾ ಗ್ರಾಹಕರ ಆಯೋಗದ ಮುಂದೆ ದೂರು ದಾಖಲಾದ 5 ದಿನದ ಒಳಗೆ ಇಬ್ಬರು ಪಕ್ಷಗಾರರು ಇಷ್ಟಪಟ್ಟಲ್ಲಿ ಈ ದೂರುಗಳನ್ನು 15 ದಿನದ ಒಳಗೆ ಮಧ್ಯಸ್ಥಿಕೆ ಕೇಂದ್ರಕ್ಕೆ ಚಾಪ್ಟರ್ 5 ರ ರೀತ್ಯಾ ಕಳುಹಿಸಿಕೊಡಲು ಅವಕಾಶ ಮಾಡಿಕೊಡಲಾಗಿದೆ. ಜಿಲ್ಲಾ ಆಯೋಗಕ್ಕೆ ತಾನು ಮಾಡಿದ ಆದೇಶವನ್ನು ಮರುಪರಿಶೀಲಿಸುವ ಅವಕಾಶವನ್ನು ಮಾಡಿಕೊಡಲಾಗಿದೆ. ರಾಜ್ಯ ಆಯೋಗಕ್ಕೆ ಒಬ್ಬ ಅಧ್ಯಕ್ಷರ ಜೊತೆಗೆ 4 ಜನ ಸದಸ್ಯರಿರುವುದನ್ನು ಕಡ್ಡಾಯಗೊಳಿಸಿದೆ. ಜಿಲ್ಲಾ ಆಯೋಗದಲ್ಲಿ ಒಬ್ಬ ಅಧ್ಯಕ್ಷರ ಜೊತೆ ಒಬ್ಬ ಸದಸ್ಯರಿರುತ್ತಾರೆ ಎಂದು ತಿಳಿಸಿದರು.
ವ್ಯಾಜ್ಯ ಅಪೀಲು ಮಾಡುವ ಸಂದರ್ಭದಲ್ಲಿ ಮೊದಲು ಇದ್ದ 25% ಡೆಪಾಸಿಟ್ ಬದಲು 50% ಮಾಡಲು ಇಚ್ಛಿಸಲಾಗಿದೆ. ರಾಷ್ಟ್ರೀಯ ಆಯೋಗಕ್ಕೆ ಯಾವುದೇ ಕರಾರಿನ ಅಂಶವನ್ನು ಶೂನ್ಯ ಕರಾರು ಎಂದು ಘೋಷಿಸಲು ಅಧಿಕಾರ ನೀಡಲಾಗಿದೆ. ರಾಷ್ಟ್ರೀಯ ಆಯೋಗವು ಯಾವುದೇ ತೀರ್ಪನ್ನು ನೀಡಲು ಮೊದಲು ವಿಷಯದ ಬಗ್ಗೆ ಸಂಶಯವಿದ್ದಲ್ಲಿ ಯಾವುದೇ ಎಕ್ಸ್’ಪರ್ಟ್‌ಗಳ ಸಹಾಯವನ್ನು ತೆಗೆದುಕೊಳ್ಳಬಹುದಾಗಿದೆ. ಮೇಲ್ಮನವಿ ಅರ್ಜಿಯನ್ನು ರಾಜ್ಯ ಆಯೋಗಕ್ಕೆ ಸಲ್ಲಿಸುವ ಅವಧಿಯನ್ನು 30 ದಿನಗಳಿಂದ 45 ದಿನಗಳವರೆಗೆ ಹೆಚ್ಚಿಸಲಾಗಿದೆ ಹಾಗೂ ರಾಜ್ಯ ಆಯೋಗದ ತೀರ್ಪನ್ನು ರಾಷ್ಟ್ರೀಯ ಆಯೋಗದ ಮುಂದೆ ಸಲ್ಲಿಸಲು 30 ದಿನಗಳ ಕಾಲಾವಕಾಶವನ್ನು ಉಳಿಸಿಕೊಳ್ಳಲಾಗಿದೆ ಎಂದರು.
ರಾಜ್ಯ ಸರ್ಕಾರ ಹಾಗೂ ರಾಜ್ಯ ಆಯೋಗಕ್ಕೆ ಮಧ್ಯಸ್ಥಿಕೆ ಕೇಂದ್ರ (ಮಿಡಿಯೇಷನ್ ಸೆಂಟರ್)ನ್ನು ರಚಿಸಲು ಅಧಿಕಾರ ವಹಿಸಲಾಗಿದ್ದು, ಮೀಡಿಯೇಷನ್ ಮುಂದೆ ರಾಜಿಯಾದ ಪ್ರಕರಣಗಳ ಬಗ್ಗೆ ಯಾವುದೇ ಅಪೀಲು ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದರು.
ಯಾವುದೇ ಗ್ರಾಹಕ ತಾನು ಕೊಂಡ ವಸ್ತುಗಳನ್ನು ದುರುಪಯೋಗ ಮಾಡಿಕೊಂಡಲ್ಲಿ ಅಥವಾ ಬದಲಾವಣೆ ಅಥವಾ ರಿಪೇರಿ ಮಾಡಿದಲ್ಲಿ ಅವನು ಪ್ರಾಡಕ್ಟ್ ಲೈಯಾಬಿಲಿಟಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಹಾಗೂ ಯಾವುದೇ ತಯಾರಕರು ಅಥವಾ ಸರ್ವಿಸ್ ಪ್ರೊವೈಡರ್ ಸುಳ್ಳು ಜಾಹೀರಾತು ನೀಡಿದಲ್ಲಿ ಎರಡು ವರ್ಷಗಳ ಶಿಕ್ಷೆಯ ಜೊತೆ 10 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ ಮತ್ತು ನಂತರವೂ ಮುಂದುವರೆಸಿದಲ್ಲಿ 5 ವರ್ಷದ ಶಿಕ್ಷೆಯ ಜೊತೆಗೆ 50 ಲಕ್ಷದವರೆಗೆ ದಂಡವನ್ನು ವಿಧಿಸಬಹುದಾಗಿದೆ ಎಂದು ತಿಳಿಸಿದರು.
Get in Touch With Us info@kalpa.news Whatsapp: 9481252093
Discussion about this post