ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಾರಕ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸ್ವಚ್ಛತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾನಗರ ಪಾಲಿಕೆ, ಮಾಸ್ಕ್ ಇಲ್ಲದೇ ಓಡಾಡುತ್ತಿರುವವರಿಗೆ ಹಾಗೂ ಕಂಡ ಕಂಡಲ್ಲಿ ಉಗಿಯುತ್ತಿರುವವರಿಗೆ ಫೈನ್ ಹಾಕಲು ಆರಂಭಿಸಿದೆ.
ಈ ಕುರಿತಂತೆ ಮಹಾನಗರ ಪಾಲಿಕೆ ಒಂದು ವಾರದ ಹಿಂದೆಯೇ ಪ್ರಕಟಣೆ ಹೊರಡಿಸಿದ್ದು, ಕಂಡ ಕಂಡಲ್ಲಿ ಉಗಿದರೆ, ಮಾಸ್ಕ್ ಇಲ್ಲದೇ ಓಡಾಡಿದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿತ್ತು.
ಈಗ ಇದನ್ನು ಕಾರ್ಯತಗೊಳಿಸಿರುವ ಪಾಲಿಕೆ ಅಧಿಕಾರಿಗಳು ಇಂದು ಮಾಸ್ಕ್ ಇಲ್ಲದೇ ಹೊರ ಬಂದುದಕ್ಕಾಗಿ 100 ರೂ. ಹಾಗೂ ಸಾರ್ವಜನಿಕ ಸ್ಥಳದಲ್ಲಿ ಉಗುಳಿದ ಹಿನ್ನೆಲೆಯಲ್ಲಿ 500 ರೂ. ದಂಡ ವಿಧಿಸಿದೆ.
ಈ ರೀತಿ ದಂಡ ವಿಧಿಸಿರುವ ರಸೀದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Get in Touch With Us info@kalpa.news Whatsapp: 9481252093
















