ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಾರ್ವಜನಿಕ ಸ್ಥಳ ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ತಂಬಾಕು, ಗುಟ್ಕಾ ಸೇವಿಸಿ ಉಗುಳಿದರೆ ದಂಡ ವಿಧಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ಆದೇಶ ನೀಡಿದ್ದಾರೆ.
ಸಾರ್ವಜನಿಕ ಸ್ಥಳ ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ತಂಬಾಕು, ಗುಟ್ಕಾ ಸೇವಿಸಿ ಅದನ್ನು ಉಗುಳುವ ಮೊದಲ ಅಪರಾಧಕ್ಕೆ ರೂ. 500 ಹಾಗೂ ಎರಡನೆಯ ಅಪರಾಧಕ್ಕೆ ರೂ.1000, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ಅಂಗಡಿ ಮುಂಗಟ್ಟುಗಳ ಮಾಲೀಕರ ಮೊದಲ ಅಪರಾಧಕ್ಕೆ ರೂ. 200 ಹಾಗೂ ಎರಡನೇ ಅಪರಾಧಕ್ಕೆ ರೂ. 500 ಮತ್ತು ಸಾರ್ವಜನಿಕ ಸ್ಥಳ ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಾಸ್ಕ್ ಧರಿಸದಿರುವ ಮೊದಲ ಅಪರಾಧಕ್ಕೆ ರೂ.200 ಎರಡನೆಯ ಅಪರಾಧಕ್ಕೆ ರೂ. 400 ಗಳ ದಂಡವನ್ನು ವಿಧಿಸಿ ಅವರು ಆದೇಶಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post