ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಮೊನ್ನೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ವೀರಸ್ವರ್ಗ ಸೇರಿದ ಬೆನ್ನಲ್ಲೇ, ಕಾರ್ಯಾಚರಣೆ ಆರಂಭಿಸಿರುವ ಸೇನೆ ನಾಲ್ವರು ಉಗ್ರರನ್ನು ಬೇಟೆಯಾಡಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಉಗ್ರ ಸಂಘಟನೆಯ ಹಿರಿಯ ಕಮಾಂಡರ್ ರಿಯಾಜ್ ನೈಕೋ ಸೇರಿದಂತೆ ನಾಲ್ವರನ್ನು ಎನ್ ಕೌಂಟರ್ ಮಾಡುವಲ್ಲಿ ಯಶಸ್ವಿಯಾಗಿದೆ.
ಮತ್ತೊಂದು ಘಟನೆಯಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಜಮ್ಮು-ಕಾಶ್ಮೀರ ಪೊಲೀಸ್, ಸೇನೆ ಮತ್ತು ಸಿಆರ್ ಪಿಎಫ್ ಮತ್ತು ವಿಶೇಷ ಕಾರ್ಯಾಚರಣೆ ತಂಡ ಜಂಟಿಯಾಗಿ ಪುಲ್ವಾಮಾದ ಅವಂತಿಪೋರಾದ ಶರ್ಸಾಲಿ ಗ್ರಾಮದಲ್ಲಿ ನಿನ್ನೆ ರಾತ್ರಿ ಕಾರ್ಯಾಚರಣೆ ಆರಂಭಿಸಿದ್ದವು ಸೇನಾಧಿಕಾರಿ ಹೇಳಿದ್ದಾರೆ.
ಸೇನೆಯ ಗುಂಡಿಗೆ ಬಲಿಯಾದ ರಿಯಾಜ್ ನೈಕೂ 1985ರಲ್ಲಿ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದ ಬೈಗ್ ಪೋರಾ ಗ್ರಾಮದಲ್ಲಿ ಜನಿಸಿದ್ದ, ತನ್ನ 33ನೆಯ ವಯಸ್ಸಿಗೆ ಗನ್ ಹಿಡಿಯಲು ಆರಂಭಿಸಿದ್ದ. ಪುಲ್ವಾಮಾ ಜಿಲ್ಲೆಯ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದ. ಉಗ್ರಗಾಮಿ ಸಂಘಟನೆಗೆ ಸೇರುವ ಮುನ್ನ ನೈಕೂ ಖಾಸಗಿ ಶಾಲೆಯಲ್ಲಿ ಎರಡು ವರ್ಷಗಳ ಕಾಲ ಗಣಿತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಎಂದು ವರದಿ ವಿವರಿಸಿದೆ! 2010-12ರಲ್ಲಿ ಶಿಕ್ಷಕನಾಗಿದ್ದ ಈತ 2012ರಲ್ಲಿ ನಾಪತ್ತೆಯಾಗಿದ್ದ ಎಂದು ವರದಿಯಾಗಿದೆ.
ಇಂಟರ್’ನೆಟ್ ಸ್ಥಗಿತ-ಪ್ರತಿಕಾರದ ಶುಭಸುದ್ಧಿ
ಇನ್ನು, ರಿಯಾಜ್ ಸೇರಿದಂತೆ ನಾಲ್ವರ ಎನ್’ಕೌಂಟರ್ ಬೆನ್ನಲ್ಲೇ ಕಣಿವೆ ರಾಜ್ಯದಲ್ಲಿ ಮೊಬೈಲ್ ಇಂಟರ್’ನೆಟ್ ಸೇವೆಯನ್ನು ರದ್ದುಗೊಳಿಸಲಾಗಿದ್ದು, ಅಲ್ಲಿನ ಮಾದ್ಯಮಗಳಿಗೂ ಸಹ ಎಚ್ಚರಿಕೆ ನೀಡಲಾಗಿದೆ. ಊಹಾಪೋಹದ ಸುದ್ದಿಗಳನ್ನು ಪ್ರಕಟಿಸಿ, ಶಾಂತಿಗೆ ಭಂಗ ತರುವಂತಹ ಕೆಲಸ ಮಾಡದೇ ಜವಾಬ್ದಾರಿಯಿಂದ ವರ್ತಿಸಿ ಎಂದು ಸೂಚಿಸಿದೆ.
ಅಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಐವರು ಯೋಧರ ಬಲಿದಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆ ಮುಂದಾಗಿದೆಯೇ ಎಂಬ ಪ್ರಶ್ನೆಗಳು ಉದ್ಬವಿಸುತ್ತಿವೆ.
Get in Touch With Us info@kalpa.news Whatsapp: 9481252093
Discussion about this post