ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಎಲ್ಲರಿಗೂ ನಮಸ್ಕಾರ… ಈ ಕ್ಷಣಗಳು ಜೀವನದಲ್ಲಿ ಕೆಲವೇ ಕೆಲವರಿಗೆ ಸಿಗುವ ಅಮೋಘ ಘಳಿಗೆಗಳು. ಸತತವಾಗಿ 40 ವರ್ಷಗಳ ಕಾಲ ಸರಕಾರಿ ಸೇವೆಯಲ್ಲಿದ್ದು ಇಂದು ನಿವೃತ್ತಿಯಾಗಿರುವ ನಮ್ಮೆಲ್ಲರ ಅಚ್ಚುಮೆಚ್ಚಿನ ಶ್ರೀಗಣೇಶ್ ಅವರು.
ಶ್ರೀ ಗುಂಡಪ್ಪ ಹಾಗೂ ಶ್ರೀಮತಿ ಇಂದ್ರಮ್ಮ ಅವರ ಮಗನಾಗಿ ನಾಲ್ಕು ಜನ ಸಹೋದರಿಯರಾದ (ಗೀತಾ, ನಾಗರತ್ನ(ಪಾಪ), ರಾಧ, ಸುಧಾ) ಹಾಗೂ ನಾಲ್ಕು ಜನ ಸಹೋದರರಾದ ರಂಗರಾಜು, ಕೃಷ್ಣ, ನಾಗರಾಜು, ಕೆ.ಆರ್. ಮಂಜು ರವರ ಜೊತೆಗೆ 4ನೆಯ ಪುತ್ರರಾಗಿ 1960 ಮೇ 31ರಂದು ಜನಿಸಿದ ಇವರು ಕೇವಲ 20 ವರ್ಷದವರಿದ್ದಾಗಲೇ ಉದ್ಯೋಗಕ್ಕೆ ಸೇರಿದವರು.
ಕೇಂದ್ರ ರೇಷ್ಮೆ ಇಲಾಖೆಗೆ ಸೇವೆಗೆ ಸೇರಿದ ಇವರು ಇಷ್ಟು ವರ್ಷಗಳ ಕಾಲ ನಿರಂತರ ಸೇವೆ ಮಾಡಿ, ಇಂದು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. 40 ವರ್ಷಗಳಷ್ಟು ದೀರ್ಘಕಾಲ ಸೇವೆ ಸಲ್ಲಿಸುವುದು ತೀರಾ ಅಪರೂಪದ ಸಂಗತಿ. ಇವರು ಯಾವುದೇ ಊರಿನ ಕಚೇರಿಯಲ್ಲಿ ಸೇವೆಯಲ್ಲಿ ಇರಲಿ ಅಲ್ಲಿ ಇವರು ಪ್ರತೀ ವರ್ಷ ಗಣಪತಿಯ ಹಬ್ಬದಲ್ಲಿ ಗಣೇಶೋತ್ಸವ ಆಚರಣೆ ಮಾಡುತ್ತಿದ್ದುದು ವಿಶೇಷವಾಗಿತ್ತು. ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದಾಗ ಇವರ ರೇಷ್ಮೆ ಇಲಾಖೆಯ ಪೇಟವನ್ನು ಅವರಿಗೆ ತೊಡಿಸಲಾಯಿತು.
ಆಂಧ್ರ ಪ್ರದೇಶದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿರುವಾಗ ಸಂಪರ್ಕಕ್ಕೆ ಬಂದ ನಮ್ಮ ದೇಶದ ಉಪರಾಷ್ಟ್ರಪತಿಯಾಗಿದ್ದ ಶ್ರೀ ನೀಲಂ ಸಂಜೀವರೆಡ್ಡಿ ಕುಟುಂಬದ ಜೊತೆಗೆ ಸ್ನೇಹ (ಇಂದಿಗೂ) ಹಾಗೂ ಉತ್ತಮ ಒಡನಾಟ ಹೊಂದಿದ್ದಾರೆ. ಅನೇಕ ರಾಜಕೀಯ ನಾಯಕರೊಂದಿಗೂ ಸ್ನೇಹ _ಹೊಂದಿರುವ ಇವರು ಬಾಲ್ಯದಲ್ಲಿ ಹಲಸಿನ ಹಣ್ಣು, ತಂದೆ ತರುತ್ತಿದ್ದ ಸಿಪಿಸಿ ಬಿಸ್ಕತ್ತು ಅತ್ಯಂತ ಪ್ರಿಯ ಇವರಿಗೆ. ಇವರು ಪಿಯುಸಿ ತನಕ ಓದಿದ್ದು (ಚಾಮರಾಜನಗರದಲ್ಲಿ) ದೊಡ್ಡ ಕುಟುಂಬ ಹಾಗೂ ಬಡತನದ ಕಾರಣ ಮುಂದೆ ಓದಬೇಕೆಂಬ ಆಸೆ ಇದ್ದರೂ ಓದಲು ಸಾದ್ಯವಾಗಲಿಲ್ಲ!
ತಮ್ಮ ಕಾಲೇಜು ದಿನಗಳಲ್ಲಿ ಸಿನಿಮಾದ ರಂಗ ಪ್ರವೇಶ ಮಾಡಿ 1980 ರಲ್ಲಿ ದೇವರ ಮಕ್ಕಳು (ರಾಜೇಶ್ ಹೀರೋ) ಹಾಗೂ ’ನಂಜುಂಡ ನಕ್ಕಾಗ ’ಚಿತ್ರದಲ್ಲಿ ನಟಿಸಿದ್ದಾರೆ. ತಂದೆ ಗುಂಡಪ್ಪನವರು ಚಾಮರಾಜನಗರದಲ್ಲಿ ಸ್ಥಳ ಪುರೋಹಿತ ಆದ್ದರಿಂದ ಪುರೋಹಿತದಲ್ಲಿ ಆಸಕ್ತಿಯಾಗಿ ಪುರೋಹಿತ ವೃತ್ತಿ ಹಾಗೂ ಅದರಲ್ಲಿ ಹೆಚ್ಚು ಪರಿಚಯ. ಇದರಿಂದ ದೊಡ್ಡರಾಯಪೇಟೆಯ ಬಸವರಾಜು ಎಂಬುವವರು ಕೇಂದ್ರ ರೇಷ್ಮೆ ಇಲಾಖೆಯ ಕೆಲಸದಲ್ಲಿ ಇದ್ದು ಅವರ ಸಹಾಯದಿಂದ ಕೇಂದ್ರದ ರೇಷ್ಮೆ ಇಲಾಖೆಯ ಕೆಲಸಕ್ಕೆ ಶಿಫಾರಸ್ಸು ಹೊಂದಿ ಅದಕ್ಕಾಗಿ ಊರಿನ ಮುಖಂಡ ಚಿನ್ನಸ್ವಾಮಿಶೆಟ್ಟಿ ಅವರಿಂದ ಪ್ರಯಾಣಕ್ಕೆ 80 ರೂಪಾಯಿಗಳ ಸಹಾಯ ಪಡೆದಿದ್ದನ್ನು ನೆನೆಸಿಕೊಳ್ಳುತ್ತಾರೆ.
ಮೊದಲ ಸಂಬಳ ಒಂದು ನೂರ ಐವತ್ತು (ಆ ಕಾಲದಲ್ಲಿ ದೊಡ್ಡ ಮೊತ್ತ)ಅದರಲ್ಲಿ ಮನೆಗೆ 75 ರೂಪಾಯಿ ಮನಿ ಆರ್ಡರ್ ಮಾಡುತ್ತಿದ್ದರು. ಸೇವೆಯಲ್ಲಿ ದಕ್ಷಿಣ ಭಾರತದ ಹಲವು ಕಡೆ ಸೇವೆ ಮಾಡಿದ್ದರು. ಹೀಗಾಗಿ ಆರು ಭಾಷೆಯಲ್ಲಿ ಅತ್ಯಂತ ಸುಲಲಿತವಾಗಿ ಮಾತನಾಡಲು ಇವರಿಗೆ ಬರುತ್ತದೆ. ಆಂಧ್ರಪ್ರದೇಶದ_ ಮದನಪಲ್ಲಿ ಹಾಗೂ ನಮ್ಮ ರಾಜ್ಯದ ಅತ್ತಿಬೆಲೆ, ಬೆಂಗಳೂರು, ಕೊಣನೂರು, ಕೊಳ್ಳೇಗಾಲ, ನಂಜನಗೂಡು, ಚಾಮರಾಜನಗರ, ಮೈಸೂರು ಹೀಗೆ ಹಲವಾರು ಕಡೆ ಸೇವೆ ಹಾಗೂ ಕೇಂದ್ರದಿಂದ ಬಂದ ಹಲವಾರು ವಿಐಪಿಗಳಿಗೆ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಧರ್ಮ ಪತ್ನಿಯಾದ ಶ್ರೀಮತಿ ಸರಸ್ವತಿಯವರು ಗುಂಡ್ಲುಪೇಟೆಯ ಕೆಲಸೂರಿನವರಾಗಿದ್ದು, ಒಬ್ಬನೇ ಮಗ ಪುನೀತ್ ಮೈಸೂರಿನ ಎಸ್’ಪಿಐನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾಲ್ಕು ಜನ ಸಹೋದರಿಯರು ಮತ್ತು ನಾಲ್ಕು ಸಹೋದರರ ಬಾಂಧವ್ಯದಲ್ಲಿ ಇರುವ ಇವರಿಗೆ ಈಗ 60ರ ಸಂಭ್ರಮ. ಇವರ ಸೊಸೆ ಪೂಜಾ(ಮೇಘ) ಹಾಗೂ ಮೊಮ್ಮಗ ಪೃಥು.
ಅನೇಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಕುಟುಂಬಸ್ಥರು ಸರ್ಕಾರದ ಶಾಲೆಗಳಿಗೆ ಉಚಿತವಾಗಿ ಪುಸ್ತಕದ ಹಾಗೂ ಸಾಮಾಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯವನ್ನು ಮಗನ ಜೊತೆಯಲ್ಲಿ ವಿದ್ಯಾ ಸ್ಪಂದನದ ಮುಖಾಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಕೊರೋನಾದ ಬಗ್ಗೆ ಜನ ಜಾಗೃತಿ ಹಾಗೂ ಮೈಸೂರು ಮತ್ತು ಚಾಮರಾಜನಗರದಲ್ಲಿ ಉಚಿತವಾಗಿ ರಸ್ತೆಯ ಬದಿ ವ್ಯಾಪಾರಿಗಳಿಗೆ ಮಾಸ್ಕ ಗಳನ್ನು ವಿತರಿಸಿದ್ದಾರೆ.
ಕನಕಾಭಿಷೇಕ
ಅಂದರೆ ಹಿಂದೂ ಬ್ರಾಹ್ಮಣ ಪದ್ದತಿಯಲ್ಲಿ ಮೊದಲ ಗಂಡು ಮಗನಿಗೆ ಗಂಡು ಮಗು ಆಗಿ ಹಾಗೂ ಆ ಗಂಡು ಮಗನಿಗೆ ಮೊದಲ ಮಗ ಗಂಡು ಆದರೆ ಮುತ್ತಜ್ಜ ಹಾಗೂ ಮುತ್ತಜ್ಜಿಗೆ ಆ ಮರಿ ಮೊಮ್ಮಗನಿಂದ ಕನಕಾಭಿಷೇಕವಾಗುತ್ತದೆ. ಇದನ್ನು ಇವರ ಸಂತಾನದಿಂದ ಸಂಪನ್ನಗೊಳಿಸಲಾಯಿತು.
ಪ್ರಸ್ತುತ ಮೈಸೂರಿನ ಮಾನಂದವಾಡಿ ರಸ್ತೆಯ ಪಕ್ಕದಲ್ಲಿ ಸ್ವಂತ ಮನೆಯಲ್ಲಿ ಇರುವ ಇವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ, ನಿವೃತ್ತಿ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಸಿಗಲಿ ಎಂದು ಕೂಡ್ಲೂರಿನ ಅವಿಭಕ್ತ ಕುಟುಂಬದಿಂದ ಹಾರೈಸುತ್ತಿದ್ದೇವೆ ಹಾಗೂ ಇವರಿಂದ ಇನ್ನಷ್ಟು ಸಮಾಜ ಸೇವೆ ಮುಂದುವರೆಯಲಿ.
ಲೇಖನ: ಕೆ.ಆರ್. ಮಂಜು, ಸಮಾಜ ಸೇವಕರು, ಕೂಡ್ಲೂರು
Get In Touch With Us info@kalpa.news Whatsapp: 9481252093
Discussion about this post