ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಳ್ಳೇಗಾಲ: ಬಟ್ಟೆ ಅಂಗಡಿಯೊಂದಕ್ಕೆ ಬೆಂಕಿಬಿದ್ದು, ಲಕ್ಷಾಂತರ ರೂ. ಗಳ ನಷ್ಟ ಸಂಭವಿಸಿರುವ ದುರ್ಘಟನೆ ಜಯ್ ಇನ್ಸ್‌ಟ್ಯೂಟ್ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ದಕ್ಷಿಣ ಬಡಾವಣೆಯ ಜಯ್ ಇನ್ಸ್‌ಟ್ಯೂಟ್ ರಸ್ತೆಯಲ್ಲಿನ ಮೀನಾಕ್ಷಿ ಟೆಕ್ಸ್‌ಟೆಲ್ಸ್ ಬೆಂಕಿಗೆ ಆಃಹುತಿಯಾಗಿದೆ.
ಸುಮಾರು 9.45ರ ವೇಳೆ ಅಂಗಡಿ ಮಾಲೀಕ ಪುನಂ ಸಿಂಗ್ ವ್ಯಾಪಾರ ಮುಗಿಸಿ, ಅಂಗಡಿ ಬಂದ್ ಮಾಡುವ ವೇಳೆ ಒಳಗಡೆಯಿಂದ ಭಾರಿ ಶಬ್ಧದೊಂದಿಗೆ, ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.
ಅಂಗಡಿ ಬಂದ್ ಮಾಡುವ ವೇಳೆ ಬಾಗಿಲು ಸಿಡಿದು ಬೆಂಕಿ ಕೆನ್ನಾಲಿಗೆ ಹೊರಗೆ ಬಂದ ಪರಿಣಾಮ ಅಂಗಡಿ ಮಾಲೀಕ ಪುನಂ ಸಿಂಗ್ ತೆಲೆಗೆ ತೀವ್ರ ಪೆಟ್ಟಾಗಿದ್ದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಸ್ಥಳಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಹೊತ್ತಿ ಉರಿಯುತ್ತಿದ ಬೆಂಕಿ ನಂದಿಸಿದ್ದು. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಅಂಗಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿವೆ. ಆದರೆ ಆಕಸ್ಮಿಕ ಬೆಂಕಿ ಹೊತ್ತಲು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವೋ? ಅಥವಾ ಬೇರೇನೋ ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get In Touch With Us info@kalpa.news Whatsapp: 9481252093















