ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸಣ್ಣ ಹಾಗೂ ಅತಿ ಸಣ್ಣ ರೈತರು ತಮ್ಮ ಜಮೀನುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬದುಗಳನ್ನು ನಿರ್ಮಿಸಿಕೊಳ್ಳಲು ಹೆಚ್ಚಿ ಆಸಕ್ತಿ ವಹಿಸಬೇಕು ಎಂದು ಮುಖ್ಯಕಾರ್ಯನಿರ್ವಾಹಣ ಅಧಿಕಾರಿ ಪಿ. ಯೋಗೇಶ್ ಹೇಳಿದರು.
ತಾಲೂಕಿನ ನಗರಂಗೆರೆ ಪಂಚಾಯಿತಿಗೆ ಭೇಟಿ ನೀಡಿದ್ದ ಅವರು ಗ್ರಾಮಪಂಚಾಯಿತಿ ವಾಪ್ತಿಯ ರೈತರನ್ನು ಕುರಿತು ಅವರು ಮಾತನಾಡಿದರು.
ರಾಜ್ಯದಲ್ಲೆ ಅತಿ ಕಡಿಮೇ ಮಳೆ ಬೀಳುವ ಪ್ರದೇಶ ಚಳ್ಳಕೆರೆ, ಮೊಳಕಾಲ್ಮೂರು ಈ ಭಾಗದ ಮುಖ್ಯ ಕೃಷಿ ಶೇಂಗಾ ಯೋವುದೆ ನೀರಾವರಿ ಸೌಲಭ್ಯವಿಲ್ಲದೆ ಮಳೆಯಾಶ್ರಿತ ಪ್ರದೇಶವಾಗಿದ್ದು ಮಳೆಗಾಲದಲ್ಲಿ ಬಿಳುವ ಅಲ್ಪ ಮಳೆಯ ನೀರನ್ನು ಶೇಖರಿಸಿಕೊಂಡು ಕುಡಿಯುವ ನೀರು, ಅಂತರ್ಜಲ ಮಟ್ಟುವನ್ನು ಹೇಚ್ಚಿಸಿಕೊಳ್ಳವ ಉದ್ದೇಶದಿಂದ ರೈತರು ಹೆಚ್ಚಿನ ಬದು ನಿರ್ಮಾಣ, ಕೃಷಿಹೊಂಡ, ಜಮೀನು ಸಮತಟ್ಟು, ಅಭಿವೃದ್ದಿ ಕೆಲಸಗಳನ್ನು ಮಾಡಿಕೊಳ್ಳಲು ನರೇಗಾ ಯೋಜನೆಯಲ್ಲಿ ಅವಕಾಶವಿದೆ. ಇದರ ಸದುಪಯೋಗವನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು, ಗ್ರಾಮದಲ್ಲಿ ಕುಡಿಯುವ ನೀರು ಪೋಲಾಗಂತೆ ನೋಡಿಕೊಳ್ಳಬೇಕು, ಸ್ವಚ್ಚತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು, ಸಾರ್ವಜನಿಕ ಶೌಚಾಲಯದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು, ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಚತೆ ವಹಿಸಬೇಕು, ಹೊರಹೋಗುವಾಗ ತಪ್ಪದೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಗ್ರಾಮಪಂಚಾಯಿತಿ ಕಚೇರಿಗೆ ಬಂದಾಗ ಸ್ಯಾನಿಟರ್ ಕೈಗೆ ಸಿಂಪಡಿಸಿಕೊಳ್ಳಬೇಕು, ಕೊರೋನಾ ಹರಡದಂತೆ ತುಂಬಾ ಜಾಗೃತಿ ವಹಿಸಬೇಕು, ಹೊರಗಿನಿಂದ ಬಂದವರ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಾಮಚಂದ್ರ, ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಬಿ.ಸಿ. ಸತೀಶ್ ಕುಮಾರ್, ಮಾಜಿ ಸದಸ್ಯರಾದ ಮಹೇಶ್, ರಮೇಶ್, ಗ್ರಾಮಪಂಚಾಯಿತಿ ಕಾರ್ಯದರ್ಶಿ ಹನುಮಂತರಾಜು ಗ್ರಾಮದ ಗ್ರಾಮಸ್ಥರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post