ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಲ್ಲಿಂದು 62 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ.
ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ತಾಲೂಕಿನಲ್ಲಿ 62 ಪಾಸಿಟಿವ್ ಪತ್ತೆಯಾಗಿದೆ ಎಂದು ಹೇಳಿದೆ.
ಲಕ್ಷ್ಮೀಪುರದ 57ವರ್ಷದ ಪುರುಷ, ಜನ್ನಾಪುರದ ಎನ್‌ಟಿಬಿ ಕಚೇರಿಯಲ್ಲಿ 70, 42 ವರ್ಷದ ಇಬ್ಬರು ಮಹಿಳೆಯರು, 22 ವರ್ಷದ ಪುರುಷ, ಸಿದ್ಧಾಪುರ ಹೊಸೂರಿನಲ್ಲಿ ಪುರುಷ, ಸಿದ್ಧಾರೂಢನಗರದಲ್ಲಿ 67 ವರ್ಷದ ಮಹಿಳೆ, ಕೆಎಸ್‌ಆರ್‌ಟಿಸಿ ಡಿಪೋದಲ್ಲಿ 36 ವರ್ಷದ ಪುರುಷ, ರಂಗಪ್ಪ ವೃತ್ತದಲ್ಲಿ 75 ವರ್ಷದ ಪುರುಷ, ನೆಹರೂ ನಗರದಲ್ಲಿ 65 ವರ್ಷ ಹಾಗೂ 55 ವರ್ಷದ, 75 ವರ್ಷದ ಮೂವರು ಮಹಿಳೆಯರು, 50 ವರ್ಷದ ಪುರುಷ, ತರೀಕೆರೆ ರಸ್ತೆಯಲ್ಲಿ 38 ವರ್ಷದ ಪುರುಷ, ಭೂತನಗುಡಿಯಲ್ಲಿ ಇಬ್ಬರು ಪುರುಷರು, ಗಾಂಧೀನಗರದಲ್ಲಿ 56ವರ್ಷದಮಹಿಳೆ, ಹೊಸಮನೆಯಲ್ಲಿ 31 ವರ್ಷದ ಮಹಿಳೆ, ಮಾರಶೆಟ್ಟಿಹಳ್ಳಿಯಲ್ಲಿ 74 ವರ್ಷ, 69 ವರ್ಷದ ಇಬ್ಬರು ಪುರುಷರು, 68 ವರ್ಷ, 38 ವರ್ಷದ ಇಬ್ಬರು ಮಹಿಳೆಯರು ಹಾಗೂ 12 ವರ್ಷದ ಬಾಲಕಿ, ಅರಬಿಳಚಿಯಲ್ಲಿ 58 ವರ್ಷದ ಮಹಿಳೆ, ಹೊಳೆಹೊನ್ನೂರಿನಲ್ಲಿ 70 ವರ್ಷ ಮತ್ತು 60 ವರ್ಷದ ಇಬ್ಬರು ಪುರುಷರಲ್ಲಿ ಪಾಸಿಟಿವ್ ಪತ್ತೆಯಾಗಿದೆ.
Get In Touch With Us info@kalpa.news Whatsapp: 9481252093
















