ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೊರೋನಾ ವೈರಸ್ ಗೆದ್ದುಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೆ ಅಸ್ವಸ್ಥಗೊಂಡಿದ್ದು ಅವರನ್ನು ಏಮ್ಸ್’ಗೆ ದಾಖಲು ಮಾಡಲಾಗಿದೆ.
ಎದೆ ಸೋಂಕಿಗೆ ಒಳಗಾಗಿರುವ ಅಮಿತ್ ಶಾ ಅವರು ನಿನ್ನೆ ರಾತ್ರಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಏಮ್ಸ್’ಗೆ ದಾಖಲು ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಶಾ ಅವರಿಗೆ ಸಿಟಿ ಸ್ಕಾನ್ ಮಾಡಲಾಗಿದ್ದು, ಎದೆಯ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ನೇತೃತ್ವದ ಉನ್ನತ ಮಟ್ಟದ ವೈದ್ಯರ ತಂಡ ನಿರಂತರವಾಗಿ ಶಾ ಅವರಿಗೆ ಚಿಕಿತ್ಸೆ ನೀಡುತ್ತಿದೆ.
Get In Touch With Us info@kalpa.news Whatsapp: 9481252093















