ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿರುವ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.
ಈ ಕುರಿತಂತೆ ಆದೇಶ ನೀಡಿರುವ ನ್ಯಾಯಾಲಯ, ಇಂದು ನಟಿ ರಿಯಾ ಚಕ್ರವರ್ತಿ ಅವರು ತನಿಖೆಯನ್ನು ಬಿಹಾರದಿಂದ ಮುಂಬೈಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಪಾಟ್ನಾದಲ್ಲಿ ದಾಖಲಿಸಲಾಗಿರುವ ಎಫ್’ಐಆರ್ ಸರಿಯಾಗಿದೆ ಎಂದಿರುವ ನ್ಯಾಯಾಲಯ, ಈ ಆದೇಶವನ್ನು ಪ್ರಶ್ನಿಸುವ ಆಯ್ಕೆಯನ್ನು ಮಹಾರಾಷ್ಟ್ರ ರಾಜ್ಯ ನಿರಾಕರಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಿಬಿಐ ತನಿಖೆಗೆ ನ್ಯಾಯಾಲಯ ಆದೇಶಿಸಿದ ಕಾರಣ ತನಿಖೆಯಲ್ಲಿ ಸಿಬಿಐಗೆ ಸಹಾಯ ಮಾಡುವಂತೆ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಸ್ಪಷ್ಟ ಆದೇಶ ನೀಡಿದೆ.
Get In Touch With Us info@kalpa.news Whatsapp: 9481252093
















