ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭದ್ರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಹಳೇ ಕವಲಗುಂದಿ ಪ್ರದೇಶದ ಸುಮಾರು 30 ಮನೆಗಳು ಜಲಾವೃತವಾಗಿವೆ.
ದೊಣಬಗಟ್ಟ ರಸ್ತೆ ಹಳ್ಳದ ಮೇಲಿನ ಸುಮಾರು 30ಕ್ಕೂ ಅಧಿಕ ಮನೆಗಳು ಬಹುತೇಕ ಮುಳುಗಡೆಯಾಗಿದ್ದು, ರಸ್ತೆಗಳ ಸಂಪೂರ್ಣ ಜಲಾವೃತಗೊಂಡಿವೆ.
https://www.facebook.com/KalpaNews/posts/1228804790798174
ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ನಿನ್ನೆಯೇ ಗಂಜಿ ಕೇಂದ್ರ ಆರಂಭಿಸಲಾಗಿದ್ದು, ಪ್ರವಾಹ ಸಂತ್ರಸ್ತರನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗಿದೆ.
ವಾರ ಭವಿಷ್ಯ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 20.09.2020 ರಿಂದ 26.09.2020
ಈ ಕುರಿತಂತೆ ಮಾತನಾಡಿದ ನಗರಸಭೆ ಆಯುಕ್ತ ಮನೋಹರ್, ಸುಮಾರು 30 ಮನೆಗಳು ಭಾಗಷಃ ಜಲಾವೃತವಾಗಿದ್ದು, ಇದರ ಸಂಪರ್ಕ ರಸ್ತೆಯೂ ಸಹ ಮುಳುಗಿದೆ. ಸುಮಾರು 70ಕ್ಕೂ ಹೆಚ್ಚು ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post