ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಾನು ಆರೋಗ್ಯವಾಗಿದ್ದೇನೆ, ಮತದಾರ ಪ್ರಭುವಿನ ಆಶೀರ್ವಾದಿಂದ ಶೀಘ್ರ ಗುಣಮುಖನಾಗಿ ಮತ್ತೆ ನಿಮ್ಮ ಸೇವೆಗೆ ಬರುತ್ತೇನೆ ಎಂದು ಕೋವಿಡ್19 ಸೋಂಕಿಗೆ ಒಳಗಾಗಿರುವ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಕ್ಷೇತ್ರದ ಜನತೆಗೆ ಸಂದೇಶ ನೀಡಿದ್ದಾರೆ.
ಈ ಕುರಿತಂತೆ ವೀಡಿಯೋ ಸಂದೇಶ ನೀಡಿರುವ ಅವರು, ವಿಧಾನ ಮಂಡಲ ಅಧಿವೇಶನದಲ್ಲಿ ಪಾಲ್ಗೊಳ್ಳುವ ಎಲ್ಲರೂ ಕಡ್ಡಾಯವಾಗಿ ಕೋವಿಡ್19 ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಹೀಗಾಗಿ, ಪರೀಕ್ಷೆ ಮಾಡಿಸಿರುವ ವೇಳೆ ಕೊರೋನಾ ಪಾಸಿಟಿವ್ ಬಂದಿದೆ. ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲ. ಹೀಗಾಗಿ, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದಷ್ಟು ಶೀಘ್ರ ಸೋಂಕಿನಿಂದ ಗುಣಮುಖನಾಗಿ, ಎಂದಿನಂತೆ ಜನರ ಸೇವೆಗೆ ಸಿದ್ದನಾಗಿರುತ್ತೇ ಎಂದಿದ್ದಾರೆ.
ನಾನು ಆರೋಗ್ಯದಿಂದ ಇದ್ದೇನೆ, ಯಾರೂ ಆತಂಕ ಪಡಬೇಡಿ: ಶಾಸಕ ಸಂಗಮೇಶ್ವರ್#Bhadravathi #MLA #BK_Sangameshwara pic.twitter.com/yfHWEz5F6s
— Kalpa News (@KalpaNews) September 20, 2020
ಭದ್ರಾ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಹರಿಸಿರುವ ಕಾರಣ ಹಲವು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಜನರ ರಕ್ಷಣೆ ಹಾಗೂ ಅಗತ್ಯ ಕ್ರಮಗಳನ್ನು ನಗರಸಭೆ ಆಯುಕ್ತರು, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರುಗಳು ಕೈಗೊಳ್ಳಲಿದ್ದಾರೆ. ಈ ಕುರಿತಂತೆ ಈಗಾಗಲೇ ಅವರಿಗೆ ಸೂಚನೆ ನೀಡಿದ್ದೇನೆ. ಜನರೂ ಸಹ ಆಡಳಿತದೊಂದಿಗೆ ಸಹಕಾರ ನೀಡಬೇಕು ಎಂದರು.
ವಾರ ಭವಿಷ್ಯ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 20.09.2020 ರಿಂದ 26.09.2020
ಇನ್ನು, ಕೋವಿಡ್19 ಸೋಂಕಿನ ವಿಚಾರದಲ್ಲಿ ಜನರು ಬಹಳಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಸೇರಿದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಜನರೇ ಸ್ವಯಂಪ್ರೇರಿತರಾಗಿ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
Get In Touch With Us info@kalpa.news Whatsapp: 9481252093
Discussion about this post