ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಅಕ್ರಮವಾಗಿ ಮಣ್ಣು ಮುಕ್ಕ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಲಿಂಗಾಪುರದ ನವೀನ್, ಸಕಲೇಶಪುರದ ಕೇಶವ ಹಾಗೂ ಹೊನ್ನಳಿಯ ಶ್ರೀನಿವಾಸ್ ಎನ್ನುವವರನ್ನು ಶಿವಮೊಗ್ಗದ ಚಿಕ್ಕ ಕೂಡಲಿಯಲ್ಲಿ ಹಾವು ಸಹಿತ ಬಂಧಿಸಿ, ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗಿದೆ.
ಕಾರ್ಯಾಚರಣೆಯನ್ನು ರಾಜ್ಯ ಅರಣ್ಯ ಘಟಕದ ಸಿಐಡಿ ಡಿವೈಎಸ್’ಪಿ ಅವರ ಮಾರ್ಗದರ್ಶನದಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಬಿ. ಮಲ್ಲಿಕಾರ್ಜುನ, ಸಿಬ್ಬಂದಿಯವರುಗಳಾದ ರಂಗನಾಥ, ಗಣೇಶ್, ರತ್ನಾಕರ್, ಗಿರೀಶ್ ವಿಶ್ವನಾಥ ಮತ್ತು ಮಂಜುನಾಥ ಅವರುಗಳು ಕಾರ್ಯಾಚರಣೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















