ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಯುವಕನೊಂದಿಗೆ ಬಾಲಕಿಯೊಬ್ಬಳ ಬಾಲ್ಯ ವಿವಾಹ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ, ತಡೆದ ಘಟನೆ ಇಂದು ನಡೆದಿದೆ.
ಉಂಬ್ಳೇಬೈಲ್ ರಸ್ತೆಯಲ್ಲಿರುವ ಭದ್ರಾ ಲಯನ್ಸ್ ಕ್ಲಬ್’ನಲ್ಲಿರುವ ಭವನದಲ್ಲಿ ಇಂದು ವಿವಾಹ ನಡೆಯುತ್ತಿತ್ತು. ಆದರೆ, ಬಾಲಕಿಗೆ ಇನ್ನೂ 18 ವರ್ಷ ಪೂರ್ಣಗೊಳ್ಳದೇ ಅಪ್ರಾಪ್ತಳಾಗಿದ್ದಾಳೆ ಎಂಬ ಖಚಿತ ಮಾಹಿತಿ ಆಧರಿಸಿದ ಅಧಿಕಾರಿಗಳು ದಾಳಿ ನಡೆಸಿ, ವಿಚಾರಣೆ ನಡೆಸಿದ್ದಾರೆ.
ಅನ್ವರ್ ಕಾಲೋನಿಯ 17 ವರ್ಷ 10 ತಿಂಗಳ ಬಾಲಕಿಗೆ 21 ವರ್ಷದ ಯುವಕನೊಂದಿಗೆ ವಿವಾಹ ಮಾಡುತ್ತಿರುವುದು ದೃಢಪಟ್ಟಿದೆ. ಬಾಲಕಿ ಅಪ್ರಾಪ್ತಳಾಗಿರುವ ಕಾರಣ ಇದು ಬಾಲ್ಯ ವಿವಾಹವಾಗಿದ್ದು, ಕಾನೂನು ಪ್ರಕಾರ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ವಿವಾಹವನ್ನು ನಡೆದಿರುವ ಅಧಿಕಾರಿಗಳು ವಧು ಹಾಗೂ ವರನ ಪೋಷಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಭದ್ರಾವತಿಯ ಮಕ್ಕಳ ಸಹಾಯವಾಣಿಯ ಶೃತಿ, ಶಿಶು ಅಭಿವೃದ್ಧಿ ಯೋಜನಾ ವಲಯ ಮೇಲ್ವಿಚಾರಕರಾದ ಯಶೋಧಾ, ಸಿಡಿಪಿಒ ಕಚೇರಿ ಅಧಿಕಾರಿ ರಮೇಶ್ ಹಾಗೂ ನ್ಯೂ ಟೌನ್ ಪೊಲೀಸರು ಈ ವೇಳೆ ಉಪಸ್ಥಿತರಿದ್ದರು.
ಈ ಕುರಿತಂತೆ ಪ್ರಕರಣ ಇನ್ನೂ ದಾಖಲಾಗಬೇಕಿದ್ದು, ಹೆಚ್ಚಿನ ವಿವರ ತಿಳಿದುಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post