No Result
View All Result
Cervical Cancer | Early Detection and Prevention Can Save Lives
English Articles

Cervical Cancer | Early Detection and Prevention Can Save Lives

by ಕಲ್ಪ ನ್ಯೂಸ್
January 16, 2026
0

Kalpa Media House  |  Special Article  |Cervical cancer remains one of the most preventable yet life-threatening cancers affecting women worldwide....

Read moreDetails
From Global Gold to Mumbai Spirit: Andre De Grasse Brings Olympic Legacy to the Tata Mumbai Marathon

From Global Gold to Mumbai Spirit: Andre De Grasse Brings Olympic Legacy to the Tata Mumbai Marathon

January 16, 2026
ಟಾಟಾ ಮುಂಬೈ ಮ್ಯಾರಥಾನ್ 2026ರಲ್ಲಿ ದಾಖಲೆ ನಿಧಿ ಸಂಗ್ರಹ

Haseena Themali Raises Over ₹5 Lakh for Palliative Care at the Tata Mumbai Marathon 2026 in her bid

January 15, 2026
ಚಳಿಗಾಲದ ಸೋಂಕುಗಳು & ಆಂಟಿಬಯೋಟಿಕ್ ದುರ್ಬಳಕೆ | ವೈರಲ್ ಯಾವುದು? ಅಪಾಯಕಾರಿ ಯಾವುದು?

Winter Infections and Antibiotic Misuse: What Is Viral? What Is Dangerous?

January 12, 2026
ಶಿವಮೊಗ್ಗ | ಜ.5-9 | ಕೃಷಿ ವಿವಿಯಲ್ಲಿ ನಡೆಯಲಿದೆ ಅಂತಾರಾಷ್ಟ್ರೀಯ ಮಹತ್ವದ ಕಾರ್ಯಾಗಾರ

Shivamogga | An international workshop will be held at the Agricultural University from Jan 5-9

January 1, 2026
  • Advertise With Us
  • Grievances
  • About Us
  • Contact Us
Sunday, January 18, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ವಿಷ್ಣು ಸಹಸ್ರನಾಮದ ಪಠಿಸಿದರೆ ಮಾತ್ರವಲ್ಲ, ಕೇಳಿದರೂ ಸಹ ಎಂತಹ ಪ್ರಯೋಜವಿದೆ ಗೊತ್ತಾ?

ವಿಷ್ಣು ಸಹಸ್ರನಾಮದ ಮಹತ್ವ: ಲೇಖನ-1

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 21, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
ಅಧ್ಯಾತ್ಮ ಬಂಧುಗಳು ತಪ್ಪದೇ ಓದಿ: ಜಾಗತಿಕ ವಿಷ್ಣು ಸಹಸ್ರನಾಮ ಕಂಠಪಾಠ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣುಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣಮಾಡಿದರೆ ಒಳ್ಳೆಯದು. ವಿಷ್ಣು ಸಹಸ್ರನಾಮದಲ್ಲಿ ಎಲ್ಲ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರಿಗೆ ಅಷ್ಟೇ ಅಲ್ಲ ಕೇಳುವವರು ಕೂಡ ಪ್ರಯೋಜನ ಪಡೆಯುತ್ತೀರಿ.

ವಿಷ್ಣುಸಹಸ್ರನಾಮ ಪಾರಾಯಣಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭಗಳಲ್ಲಿ, ಯಾವುದೇ ಸಮಯದಲ್ಲಿ ನೀವು ಎಲ್ಲಿಯಾದರೂ ಪಠಿಸಬಹುದು. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ನಿಮ್ಮ ಹಿಂದಿನ ಜನ್ಮದ ಕರ್ಮದ ಪ್ರತಿಕ್ರಿಯೆಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

ವಿಷ್ಣು ಸಹಸ್ರನಾಮ ಪಠಿಸುವ ಭಕ್ತರಿಗೆ ಎಂದೂ ಭಯವಿಲ್ಲ. ಇದರಿಂದ ವಿಶೇಷ ಕಾಂತಿ, ವರ್ಚಸ್ಸು, ಆತ್ಮವಿಶ್ವಾಸ, ಮನೋಬಲ, ದೇಹಬಲ ಇಂದ್ರಿಯಬಲ ಹೆಚ್ಚಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು. ವಿಷ್ಣುಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರವಾಗುತ್ತವೆ.

ಶುದ್ಧಮನದಿಂದ ವಿಷ್ಣುಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ, ಆಧಿದೈವಿಕ ಹಾಗೂ ಆಧಿಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ. ವಿಷ್ಣುಸಹಸ್ರನಾಮ ಅಂದರೆ ಮಹಾವಿಷ್ಣುವಿನ ಸಹಸ್ರನಾಮ ಪಠನ ಇದರಲ್ಲಿ ಅಲೌಕಿಕ ಶಕ್ತಿ ಇರುವುದನ್ನು ಅನೇಕ ಸಾಧಕರು ಕಂಡಿದ್ದಾರೆ, ಅನುಭವಿಸಿದ್ದಾರೆ. ವಿಷ್ಣುಸಹಸ್ರನಾಮ ಪಾರಾಯಣದಿಂದ ಕ್ಯಾನ್ಸೆರ್ ನಂತಹ ಭಯಂಕರ ಖಾಯಿಲೆಯಿಂದ ಹಿಡಿದು ಇನ್ನು ಇತರೆ ಕಾಯಿಲೆಗಳು ಕೂಡ ವಾಸಿಯಾಗುತ್ತವೆ.

ಮನೆಯಲ್ಲಿ ಸಾಮೂಹಿಕ ಪಾರಾಯಣ ಪಠಿಸಿದರೆ ಮನೆಯ ವಾತವರಣವೇ ಬದಲಾಗುತ್ತದೆ. ಮನೆಯವ ಮೈಯಲ್ಲಿ ಮನಸ್ಸಲ್ಲಿ ಆಧ್ಯಾತ್ಮದ ಶಕ್ತಿಸಂಚಾರವಾದಂತಹ ಅನುಭವವಾಗುತ್ತದೆ. ಸಾಮೂಹಿಕ ಪಾರಾಯಣದಲ್ಲಿ ಅಂಥ ಒಂದು ವಿಶೇಷ ಶಕ್ತಿ ಇದೆ.ವಿಷ್ಣುಸಹಸ್ರನಾಮಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೋತ್ರವನ್ನು ಎಲ್ಲ ವರ್ಗದವರು ಮತ್ತು ಎಲ್ಲವಯಸ್ಸಿನವರು ಪಠಿಸಬಹುದಾಗಿದೆ.

ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ನಾವಾಗಿಯೇ ಪರಣ ಮಾಡಿಬರಬಹುದು . ಸಮಯವಿಲ್ಲದವರು ತಮ್ಮ ತಮ್ಮ ಮನೆಯಲ್ಲಿಯೇ ನಿತ್ಯ ಪಠಣ ಮಾಡಿದರೆ ನಮಗೂ ಹಾಗು ನಮ್ಮ ಸುತ್ತಮುತ್ತಲಿನ ಪರಿಸರಕ್ಕೂ ವಿಶೇಷ ಶಕ್ತಿ ಪ್ರಾಪ್ತಿಯಾಗುವುದು.

ವಿಷ್ಣುಸಹಸ್ರನಾಮ ನಮ್ಮವರೆಗೆ ಹೇಗೆ ತಲುಪಿತು
ಹಿಂದುಗಳಾದ ನಾವು ದಿನಾಲು ಒಮ್ಮೆಯಾದರೂ ವಿಷ್ಣುಸಹಸ್ರನಾಮವನ್ನು ಪಠಣ  ಮಾಡುತ್ತೇವೆ.ಮಹಾಭಾರತದಲ್ಲಿ ರಚಿತವಾದ ವಿಷ್ಣುಸಹಸ್ರನಾಮ ನಮ್ಮ ವರೆಗೆ ಹೇಗೆ ತಲುಪಿತು ಎಂಬ ಸ್ವಾರಸ್ಯಕರ ವಿವರ ಕೆಳಗಿನಂತೆ ಇದೆ.

೧೯೪೦/೫೦ರ ದಶಕದಲ್ಲಿ ಮಹಾಪೆರಿಯಾರರೊಬ್ಬರು ಕಂಚಿ ಕಾಮಕೋಟಿ ಶ್ರೀಗಳ ಸಂದರ್ಶನ ನಡೆಸುತ್ತಿದ್ದರು.ಆಗ ಅವರು ಸಂದರ್ಶನದ ಸಾರಾಂಶವನ್ನು ಟೇಪ್ ರೆಕೊರ್ಡದಲ್ಲಿ ಟೇಪ್ ಮಾಡುತ್ತಿದ್ದರು.ಆಗ ಪೆರಿಯಾರವರು ಜನರನ್ನುದ್ದೇಶಿಸಿ, ಟೇಪ್ ರೆಕಾರ್ಡರ್ ಬಗ್ಗೆ ತಮಗಾರಿಗಾದರೂ ಮಾಹಿತಿ ಇದೆಯಾ?ನಂತರ ವಿಷ್ಣುಸಹಸ್ರನಾಮ ನಮ್ಮ ವರೆಗೆ ಹೇಗೆ ತಲುಪಿತು? ಎಂದು ಪ್ರಶ್ನಿಸಿದರು.ಆಗ ಅದು ಭೀಷ್ಮ ಪಿತಾಮಹರಿಂದ ನಮಗೆ ಬಂದಿತೆಂಬುದರ ಬಗ್ಗೆ ಎಲ್ಲರ ಸಹಮತವಿತ್ತು.ಆಗಮಹಾಪೆರಿಯಾರರು ಭೀಷ್ಮಪಿತಾಮಹರು ವಿಷ್ಣುಸಹಸ್ರನಾಮವನ್ನು ಯುದ್ಧಭೂಮಿಯಲ್ಲಿ ಹೇಳಿದರು.ಅದನ್ನು ಯಾರಾದರೂ ಬರೆದಿಟ್ಟುಕೊಂಡಿದ್ದರಾ? ಆಗ ಮತ್ತೊಮ್ಮೆ ಗಂಭೀರ ಶಾಂತತೆ ಆವರಿಸಿತ್ತು.ಮಹಾಪೆರಿಯಾರರು ಮುಂದೆವರೆದು,ಯಾವಾಗ ಭೀಷ್ಮರು ವಿಷ್ಣುಸ್ತುತಿಯನ್ನು ಹೇಳುತ್ತಿದ್ದರೊ,ಆಗ ಕ್ರಷ್ಣ,ವ್ಯಾಸರಾದಿಯಾಗಿ ಎಲ್ಲರೂ ಭೀಷ್ಮರ ಕಡೆಗೆ ವಿಷ್ಣು ಸಹಸ್ರನಾಮ ಕೇಳುವುದರಲ್ಲಿ ಮಗ್ನನಾಗಿದ್ದರು.ಯಾವಾಗ ಭೀಷ್ಮರು ೧೦೦೦ ಶ್ರೀ ಕೃಷ್ಣನ ನಾಮಗಳನ್ನು ಮುಗಿಸಿದರೋ,ಆಗ ಎಲ್ಲರೂ ಆಶ್ಚರ್ಯಚಕಿತರಾಗಿ ಭೀಷ್ಮರ ಕಡೆಗೆ ನೋಡಿದರು.

ಆಗ ಯುಧಿಷ್ಠಿರನು ಮುಂದೆ ಬಂದು ಸಮ್ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ, ಭೀಷ್ಮ ಪಿತಾಮಹರು ಶ್ರೀ ಕ್ರಷ್ಣನ ೧೦೦೦ ಹೆಸುಗಳುಳ್ಳ ಉತ್ಕೃಷ್ಟ,ರಮಣೀಯ, ಅಮೂಲ್ಯವಾದ ವಾಸುದೇವ ಸ್ತುತಿ ಯನ್ನು ಚೆನ್ನಾಗಿಹೇಳಿದ್ದಾರೆ.ನಾವೆಲ್ಲರೂ ಕೇಳಿ ಆನಂದ ಪಟ್ಟೆವು.ಆದರೆ ನಾವ್ಯಾರೊಬ್ಬರು ಅದನ್ನು ಬರೆದಿಟ್ಟುಕೊಳ್ಳಲಿಲ್ಲ.ಹೀಗಾಗಿ ಅದರ ಕ್ರಮ ಸಹ ಬಿಟ್ಟು ಹೋಗಿದೆ.

ಆಗ ಎಲ್ಲರೂ ಶ್ರೀ ಕೃಷ್ಣನ ಕಡೆಗೆ ಆಸೆಕಣ್ಣಿನಿಂದ ನೋಡುತ್ತಾ ಸಹಾಯ ಯಾಚಿಸಿದರು.ಆಗ ಶ್ರೀ ಕೃಷ್ಣನು ಯಥಾ ಪ್ರಕಾರ “ನಿಮ್ಮ ಹಾಗೆ ನನಗೂ ರಚನೆ ಬಹಳ ಹಿಡಿಸಿತು.ಆದರೆ ಈಗ ಏನು ಮಾಡಲು ಸಾಧ್ಯವಿಲ್ಲ.ಘಟನೆ ಮುಗಿದು ಹೋಗಿದೆ.ಆಗ ಎಲ್ಲರೂ ಈ ಅಮೂಲ್ಯವಾದ ರಚನೆಯ ಪುನರಪ್ರಾಪ್ತಿಗಾಗಿ ಉಪಾಯದ ಬಗ್ಗೆ ವಿನಂತಿಸಿದರು.ಆಗ ಶ್ರೀ ಕೃಷ್ಣನು,”ಈ ಕಾರ್ಯ ಕೇವಲ ಸಹದೇವನಿಂದ ಮಾತ್ರ ಸಾಧ್ಯ ಹಾಗೂ ಅದನ್ನು ವ್ಯಾಸರು ಬರೆದುಕೊಳ್ಳುವರೆಂದು ತಿಳಿಸಿದನು”. ಆಗ ಎಲ್ಲರೂ ಸಹದೇವನಿಂದ ಇದು ಹೇಗೆ ಸಾಧ್ಯ ಎಂದು ಕೇಳಲು ಉತ್ಸುಕರಾದರು. ಆಗ ಶ್ರೀ ಕೃಷ್ಣನು”ನಮ್ಮೆಲ್ಲರಲ್ಲಿ ಸಹದೇವನೊಬ್ಬನೇ ಮಾತ್ರ ಶ್ವೇತ ಸ್ಪಟಿಕ ಧಾರಣೆ ಮಾಡಿದ್ದಾನೆ. ಒಂದು ವೇಳೆ ಅವನು ಶಿವನ ಪ್ರಾರ್ಥನೆ ಮಾಡಿ ಧ್ಯಾನ ಮಾಡಿದರೆ, ಸ್ಪಟಿಕ ಧ್ವನಿಯಲ್ಲಿ ರೂಪಾಂತರವಾಗುವದು,ಅದನ್ನು ವ್ಯಾಸರು ಬರೆದುಕೊಳ್ಳುತ್ತಾರೆ.”

ಆಗ ಸಹದೇವ ಹಾಗೂ ವ್ಯಾಸರು ಭೀಷ್ಮರು ಹೇಳಿದ ವಿಷ್ಣುಸಹಸ್ರನಾಮವನ್ನು ಯಾವ ಸ್ಥಳದಿಂದ ಕೇಳಿದ್ದರೊ ಅದೇ ಸ್ಥಳದಲ್ಲಿ ಕೆಳಗೆ ಕುಳಿತರು.ಆಗ ಸಹದೇವನು ವಿಷ್ಣುಸಹಸ್ರನಾಮ ವನ್ನು ಸ್ಥಟಿಕದ ಮುಖಾಂತರ ಪ್ರಾಪ್ತಿ ಮಾಡಲು ಶಿವನ ಧ್ಯಾನವನ್ನು ಮಾಡಹತ್ತಿದನು.

“ಸ್ಪಟಿಕದ ವೈಶಿಷ್ಟ್ಯವೆಂದರೆ ಶಾಂತ ವಾತಾವರಣದಲ್ಲಿ ಧ್ವನಿ ಅಸ್ತಗತವಾಗುತ್ತದೆ.”ಯಾರು ಶ್ವೇತಾಂಬರ ಹಾಗೂ ಸ್ಕಟಿಕ ಪ್ರಮಾಣದಲ್ಲಿರುವರೊ,ಅವರು ಶಿವನ ಧ್ಯಾನ ಮಾಡಲಾಗಿ,ಆ ಧ್ವನಿಯ ಲಹರಿ ಪ್ರಾಪ್ತವಾಗುವದು”.

ಈ ಪ್ರಕಾರ ವೀಶ್ವದಲ್ಲಿ ಪ್ರಥಮಬಾರಿಗೆ ಸ್ಪಟಿಕದ ಮೂಲಕ ಧ್ವನಿ ಪ್ರಾಪ್ತಿಯಾಗಿ ವಿಷ್ಣುಸಹಸ್ರನಾಮವನ್ನು ಬರೆದು ವ್ಯಾಸರು ನಮ್ಮ ವರೆಗೆ ಮುಟ್ಟಿಸಿದರು.ಈ ವಿಷಯವನ್ನು ಮಹಾಪೆರಿಯಾರವರು ಎಲ್ಲರಿಗೂ ತಿಳಿಸಿದಾಗ ಎಲ್ಲರೂ ಸ್ಥಂಭೀಭೂತರಾದರು.ಈಗಲೂ ಸಹ ನಾವು ಉಪಯೋಗಿಸುವ ಹಾರ್ಡ್ಡಿಸ್ಕ,ಮೆಮೊರಿ ಕಾರ್ಡ್ ಗಳಲ್ಲಿ ಸ್ಪಟಿಕದ ಉಪಯೋಗವಿದೆ.

ಸ್ಪಟಿಕ ಎಂದರೆ ಕ್ರಿಸ್ಟಲ್ (crystal.) ಕ್ವಾಟ್ಜಸ್ಟೋನ SIO2,ಅಂದರೆ ಸಿಲಿಕಾನ್ ಅಂದರೆ ಸ್ಪಟಿಕ.ಇಂದಿನ ಆಧುನಿಕ ಟೇಪ್ ರೆಕಾರ್ಡರ್,ರೇಡಿಯೊಗಳಲ್ಲಿ ಇನ್ನೂ ಸ್ಪಟಿಕದ ಉಪಯೋಗವಿದೆ.ಈ ತಂತ್ರಜ್ಞಾನ ಬಹಳ ಹಳೇ ಕಾಲದಿಂದ,ಮಹಾಭಾರತ ಕಾಲದಿಂದಲೂ ಬಂದಿದೆ.ಅಂದರೆ ನಮ್ಮ ಪೂರ್ವಜರ ಕಾಲದಲ್ಲೂ ಸಹ ತಂತ್ರಜ್ಞಾನ ಬಹಳ ಮುಂದೆವರಿದಿತ್ತು ಅಂತಾ ಹೇಳಲು ಮೇಲಿನ ಉದಾಹರಣೆ ಒಂದುಸಾಕು.ಮೇಲಿನ ಸಂಗತಿ‌ ತಿಳಿದ ಮೇಲೆ ನಮಗೆ ಇನ್ನು ದಿನಾಲು ವಿಷ್ಣುಸಹಸ್ರನಾಮ ಅನ್ನುವಾಗ ಆನಂದ ದ್ವಿಗುಣವಾಗುವದರಲ್ಲಿ ಸಂದೇಹವೇ ಇಲ್ಲ.

ನಾಳೆ: ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ!

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Dr Gururaj PoshettihalliKannada News WebsiteLatest News KannadaShri Vishnu Sahasranamamಆಧ್ಯಾತ್ಮಿಕ ಲೇಖನಧಾರ್ಮಿಕ ಲೇಖನವಿಷ್ಣು ಸಹಸ್ರನಾಮ
Share197Tweet123Send
Previous Post

ಮಹಿಳೆಯ ಅಪಹರಣಕ್ಕೆ ಯತ್ನ: ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು

Next Post

ಅಪಾಯ ಕೋಟಿಗಳಿಗೆ ಉಪಾಯ ಒಂದೇ ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಅಪಾಯ ಕೋಟಿಗಳಿಗೆ ಉಪಾಯ ಒಂದೇ ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ

ಅಪಾಯ ಕೋಟಿಗಳಿಗೆ ಉಪಾಯ ಒಂದೇ ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ

Leave a Reply Cancel reply

Your email address will not be published. Required fields are marked *

  • Trending
  • Latest
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತೀರ್ಥಹಳ್ಳಿ ಭೀಕರ ಅಪಘಾತ | ನಾಲ್ಕಕ್ಕೆ ಏರಿದ ಸಾವಿನ ಸಂಖ್ಯೆ

ತೀರ್ಥಹಳ್ಳಿ ಭೀಕರ ಅಪಘಾತ | ನಾಲ್ಕಕ್ಕೆ ಏರಿದ ಸಾವಿನ ಸಂಖ್ಯೆ

January 14, 2026
ಶಿವಮೊಗ್ಗ | ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಶಿವಮೊಗ್ಗ | ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

January 9, 2026
ಜ.14ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತಿ ಆಚರಣೆ: ರವಿಕುಮಾರ್

ಜ.14ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತಿ ಆಚರಣೆ: ರವಿಕುಮಾರ್

January 12, 2026
ಇಂದಿನ ಪಂಚಾಂಗ : 2026ರ ಜನವರಿ 7, ಮಂಗಳವಾರ

ಇಂದಿನ ಪಂಚಾಂಗ | 2026ರ ಜನವರಿ 18, ಭಾನುವಾರ

January 17, 2026
ದೆಹಲಿ ಬ್ಲಾಸ್ಟ್ | ಯಾರೊಬ್ಬರನ್ನೂ ಬಿಡಲ್ಲ | ಮೋದಿ ಶಪಥ | ಸದ್ಯದಲ್ಲಿ ಕಾದಿದೆ ಮಾರಿಹಬ್ಬ?

ಕ್ರೂರ ತೃಣಮೂಲ ಸರ್ಕಾರವನ್ನು ಕಿತ್ತೊಗೆಯಿರಿ | ಪ.ಬಂಗಾಳದ ಜನರಿಗೆ ಪ್ರಧಾನಿ ಮೋದಿ ಮನವಿ

January 17, 2026
ಆರ್’ಸಿಬಿಗೆ ಭರವಸೆ | ಸ್ಪೋಟಕ ಬ್ಯಾಟಿಂಗ್’ಗೆ ಬೆಚ್ಚಿ ಬಿದ್ದ ಬೌಲರ‍್ಸ್

ಆರ್’ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ | ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ಗ್ರೀನ್ ಸಿಗ್ನಲ್

January 17, 2026
ಉದ್ಯೋಗ ಮೇಳದ ಪೂರ್ವಭಾವಿ ತರಬೇತಿಯಿಂದ ಸಂದರ್ಶನ ಕೌಶಲ್ಯ ವೃದ್ಧಿ | ಗುರುಮೂರ್ತಿ ಅಭಿಮತ

ಉದ್ಯೋಗ ಮೇಳದ ಪೂರ್ವಭಾವಿ ತರಬೇತಿಯಿಂದ ಸಂದರ್ಶನ ಕೌಶಲ್ಯ ವೃದ್ಧಿ | ಗುರುಮೂರ್ತಿ ಅಭಿಮತ

January 17, 2026
ಮೈಸೂರು ವಿವಿ ಕುಲಪತಿ ಹೇಳಿಕೆಗೆ ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ ಖಂಡನೆ | ಏನಿದು ವಿಚಾರ?

ಮೈಸೂರು ವಿವಿ ಕುಲಪತಿ ಹೇಳಿಕೆಗೆ ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ ಖಂಡನೆ | ಏನಿದು ವಿಚಾರ?

January 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL