ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸುಮಾರು ದಿನಗಳಿಂದ ಚಳ್ಳಕೆರೆ ನಗರದ ನೆಹರು ವೃತ್ತ, ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಂದರಲ್ಲೆ ಮಲಗಿಕೊಂಡು ಗಡ್ಡ ಬಿಟ್ಟುಕೊಂಡು ಕೊಳಕು ಬಟ್ಟೆಯಲ್ಲಿ ತಿರಾಗಡುತ್ತಿದ್ದ ಅನಿಲ್ ಕುಮಾರ್ ಎನ್ನುವ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿ ಪಿಎಸ್’ಐ ಮಂಜುನಾಥ್ ಮಾನವೀಯತೆ ಮೆರೆದಿದ್ದಾರೆ.
ಕೊಳಕು ಬಟ್ಟೆಯಲ್ಲಿ ತಿರಾಗಡುತ್ತಿದ್ದ ಅನಿಲ್ ಕುಮಾರ್ ಎನ್ನುವ ವ್ಯಕ್ತಿಯನ್ನು ಪಿಎಸ್’ಐ ಮಂಜುನಾಥ, ಅರ್ಜುನ್ ಲಿಂಗಾರೆಡ್ಡಿ ಗಮನಿಸಿ ಮುಖ್ಯ ಪೇದೆ ಮಂಜಣ್ಣ ಇವರನ್ನು ಕಳುಹಿಸಿ ನಗರದ ಸಲೂನ್ ಶಾಪಿಗೆ ಕರೆದುಕೊಂಡು ಬಂದು ಉದ್ದವಾಗಿ ಬೆಳೆದಿದ್ದ ಗಡ್ಡ ಹಾಗೂ ತಲೆಕೂದಲನ್ನು ನೀಟಾಗಿ ಕತ್ತರಿಸಿದ್ದಾರೆ. ಆತನಿಗೆ ಹೊಸ ಉಡುಪು ತೊಡಿಸಿ ಹೋಟೆಲ್’ಗೆ ಕರೆ ತಂದು ಊಟ ಕೊಡಿಸಿ ಚಿತ್ರದುರ್ಗ ಜಿಲ್ಲೆಯ ಗೂನೂರು ನಿರಾಶ್ರಿತ ಕೇಂದ್ರಕ್ಕೆ ಬಿಟ್ಟು ಬಂದಿದ್ದಾರೆ.
ಮಾನಸಿಕ ಅಸ್ವಸ್ಥ ಅನಿಲ್ ಚಳ್ಳಕೆರೆ ನಗರದ ಜನತ ಕಾಲೋನಿಯ ಲೇಟ್ ಹನುಂತಪ್ಪನವರ ಮಗ ಎಂದು ಗೊತ್ತಾಗಿದೆ. ಈ ವ್ಯಕ್ತಿ ತಂದೆ ಹನುಮಂತಪ್ಪ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಅನಿಲ್ ಕುಮಾರ್ ಈ ಹಿಂದೆ ನಗರದ ನೆಹರು ವೃತ್ತದ ಸಮೀಪದಲ್ಲಿ ಮೊಬೈಲ್ ಅಂಗಡಿ ಮಾಲೀಕನಾಗಿದ್ದ ಎಂದು ತಿಳಿದುಬಂದಿದೆ.
ಚಳ್ಳಕೆರೆ ಪಿಎಸ್’ಐ ಮಂಜುನಾಥ್ ಹಾಗೂ ಪೊಲೀಸರ ಈ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
(ವರದಿ: ಸುರೇಶ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post