ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಭಾರೀ ತಲ್ಲಣ ಸೃಷ್ಠಿಸಿರುವ ಕೊರೋನಾ ಮಾದರಿಯ ಹೊಸ ವೈರಸ್ ಭಾರತದಲ್ಲೂ ಸಹ ಆತಂಕವನ್ನು ಸೃಷ್ಠಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಮಟ್ಟಿಗೆ ರಾಜ್ಯ ಸರ್ಕಾರ ಕೆಲವು ಕಠಿಣ ನಿಯಮಗಳನ್ನು ಜಾರಿ ಮಾಡುತ್ತಿದೆ.
ಈ ಕುರಿತಂತೆ ಸರ್ಕಾರ ಈಗಾಗಲೇ ಕಠಿಣ ನಿಯಮಗಳನ್ನು ರೂಪಿಸಿದ್ದು, ಬಹುತೇಕ ಇಂದು ಮಾರ್ಗಸೂಚಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಈಗ ತಿಳಿದುಬಂದಿರುವ ಮಾಹಿತಿಯಂತೆ, ಈಗಾಗಲೇ ಬ್ರಿಟನ್ ನಿಂದ ಬಂದವರಿಗಾಗಿಯೇ ಪ್ರತ್ಯೇಕ ಮಾರ್ಗಸೂಚಿ ಹಾಗೂ ಪರೀಕ್ಷೆ ಕಡ್ಡಾಯಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಹೊಸ ಸ್ವರೂಪದ ಕೊರೋನಾ ವೈರಸ್ ತಡೆಯಲು ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗಳನ್ನು ಆರಂಭಿಸಿದೆ.
ಒಂದೆಡೆ ಹೊಸ ಡೆಡ್ಲಿ ವೈರಸ್ ಆರಂಭವಾಗುವ ಭೀತಿ ಎದುರಾಗಿರುವ ಬೆನ್ನಲ್ಲೇ ಜನವರಿಯಲ್ಲಿ ಕೊರೋನಾ ವೈರಸ್ ಎರಡನೆಯ ಅಲೆಯ ಭೀತಿಯೂ ಸಹ ಎದುರಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಎರಡೂ ವೈರಸ್ ರಾಜ್ಯದಲ್ಲಿ ವೇಗವಾಗಿ ಹರಡಲು ಆರಂಭವಾದರೆ ಮುಂದಿನ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತರಲು ಮಾರ್ಗಸೂಚಿಯನ್ನು ಸಿದ್ದಪಡಿಸಿದೆ.
ಉನ್ನತ ಮೂಲಗಳ ಮಾಹಿತಿಯಂತೆ ಎರಡೂ ವೈರಸ್ ಏಕಕಾಲದಲ್ಲಿ ಹಾವಳಿ ಆರಂಭಿಸಿದರೆ ಬಹುತೇಕ ಲಾಕ್ ಡೌನ್ ಅಥವಾ ನೈಟ್ ಕರ್ಫ್ಯೂ ಆರಂಭವಾಗಬಹುದು ಎನ್ನಲಾಗಿದೆ.
ಜೊತೆಗೆ ಹೊಸ ಮಾದರಿಯ ಕೊರೋನಾ ಸೋಂಕು ಪತ್ತೆಯಾದರೆ ಅದರ ಬಗ್ಗೆ ಅಧ್ಯಯನಕ್ಕೆ ನಿಮ್ಹಾನ್ಸ್’ನಲ್ಲಿ ಪ್ರತ್ಯೇಕ ತಂಡ ರಚನೆ ಮಾಡುವ ಸಾಧ್ಯತೆಗಳಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post