ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಆದಿ ಚುಂಚನಗಿರಿ ಮಠದಿಂದ ಕೊಡಮಾಡುವ ಭೈರವಿ ರೈತ ಮಹಿಳೆ ಪ್ರಶಸ್ತಿಗೆ ಭದ್ರಾ ಕಾಡಾ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ಪಾತ್ರರಾಗಿದ್ದಾರೆ.
ಡಾ.ಬಾಲ ಗಂಗಾಧರನಾಥ ಮಹಾಸ್ವಾಮಿಗಳ 78ನೆಯ ವರ್ಷದ ಜಯಂತ್ಯೋತ್ಸವ ಹಾಗೂ 8ನೆಯ ವರ್ಷದ ಸಂಸ್ಕರಣ ಮಹೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರತಿವರ್ಷ ರಾಜ್ಯದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕ ಮಹಿಳೆಯರಿಗೆ ಶ್ರೀ ಕ್ಷೇತ್ರದ ವತಿಯಿಂದ ಗುರುತಿಸಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗುತ್ತದೆ.
ರಾಜ್ಯ ರೈತ ಸಂಘದ ಮೂಲಕ ಸುಧೀರ್ಘ 35 ವರ್ಷಗಳ ಕಾಲ ರೈತರಿಗೆ ನ್ಯಾಯ ಕೊಡಿಸುವ ಸಲುವಾಗಿ ರಾಜ್ಯದಾದ್ಯಂತ ನಿರಂತರ ಹೋರಾಟ ಮಾಡಿರುವುದನ್ನು ಪರಮ ಪೂಜ್ಯರು ಗುರುತಿಸಿ ನಿನ್ನೆ ನಡೆದ ಸಮಾರಂಭದಲ್ಲಿ ಭೈರವಿ ರೈತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಕುರಿತಂತೆ ಮಾತನಾಡಿದ ಪವಿತ್ರಾ ರಾಮಯ್ಯ ಅವರು, ಈ ಪ್ರಶಸ್ತಿ ದೊರಕಲು ಪ್ರಮುಖ ಕಾರಣ ನನ್ನ ರೈತಾಪಿ ವರ್ಗ. ಈ ಪ್ರಶಸ್ತಿಯನ್ನು ಸಮಸ್ತ ರೈತ ಬಾಂಧವರಿಗೆ ಅರ್ಪಿಸುತ್ತೇನೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















