ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸರಿಸುಮಾರು ಐದು ಶತಮಾನಗಳ ದೀರ್ಘ ಕಾಯುವಿಕೆಯ ನಂತರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವ ಪುಣ್ಯಗಳಿಗೆಗೆ ಸಾಕ್ಷಿಯಾಗುವ ಸುಯೋಗ ನಮ್ಮದಾಗಿದ್ದು, ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿಯೂ ಶಿವಮೋಗ್ಗ ಜಿಲ್ಲೆಯವರಿಗಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಲಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಂಯೋಜಕ ಮಹೇಶ ಗೋಖಲೆ ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕವಿಗೋಷ್ಠಿಯ ವಿಷಯ ಅಯೋಧ್ಯೆಯಲ್ಲಿ ರಾಮಮಂದಿರ, ಹೃದಯದಲ್ಲಿ ರಾಮಚಂದಿರ ಆಗಿದ್ದು, ಸ್ಪರ್ಧಾತ್ಮಕವಾದ ಈ ಕವಿಗೋಷ್ಠಿಯು ರಾಜ್ಯದಲ್ಲಿ ಮೂರು ಸುತ್ತುಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಆಯ್ಕೆಯಾದ ಕವನಗಳಿಗೆ ಬಹುಮಾನಗಳನ್ನು ನೀಡಲಾಗುವುದು. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನಲ್ಲದೆ ಏಳು ಸಮಾಧಾನಕರ ಬಹುಮಾನಗಳನ್ನೂ ರಾಜ್ಯ ಮಟ್ಟದಲ್ಲಿ ನೀಡಲಾಗುವುದು. ಮೊದಲ ಸುತ್ತಿನಲ್ಲಿ ಜಿಲ್ಲೆಯೊಂದರ ಎಲ್ಲಾ ಘಟಕಗಳು ಒಟ್ಟುಗೂಡಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕವಿಗೋಷ್ಠಿಯನ್ನು ಆಯೋಜಿಸಿದೆ ಎಂದಿದ್ದಾರೆ.
ಕವಿಗೋಷ್ಠಿ ಕರ್ನಾಟಕ ವ್ಯಾಪ್ತಿಯಲ್ಲಿರುವ ಎಲ್ಲ ಜಿಲ್ಲೆಗಳಲ್ಲಿಯೂ ನಡೆಯಲಿದ್ದು, ಎಲ್ಲ ಕನ್ನಡಿಗರಿಗೂ ಮುಕ್ತವಾಗಿರುತ್ತದೆ. ಶಿವಮೊಗ್ಗ ಜಿಲ್ಲೆಯ ಕವಿಗೋಷ್ಟಿಯಲ್ಲಿ ಭಾಗವಹಿಸುವವರು. ಶ್ರೀರಂಜನಿ ದತ್ತಾತ್ರಿ(9449998531) ಡಾ. ನೇತ್ರಾವತಿ(9844569694) ಮತ್ತು ಮಹೇಶ ಗೋಖಲೆ, ಸೊರಬ (9986409875) maheshgokhale85@gmail.com ಅಥವಾ ranjdat@gmail.com ಗೆ ಕಳುಹಿಸಬಹುದು.
ಕವನಗಳಿಗೆ ವಾಚನ ಮತ್ತು ಗಾಯನಕ್ಕೆ ಸಾಗರದ ಅಜಿತ್ ಸಭಾ ಭವನದಲ್ಲಿ ಫೆ.7 ರ ಭಾನುವಾರ ಬೆಳಗ್ಗೆ 10.30 ರಿಂದ ನಡೆಯಲಿರುವ ಜಿಲ್ಲಾ ಕವಿಗೋಷ್ಟಿಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲಿ ಆಯ್ಕೆಯಾದ 10 ಕವನಗಳನ್ನು ಮುಂದಿನ ಹಂತಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post