ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹಳೇ ಚಾಳಿ ಮುಂದುವರೆಸಿದರೆ ಬೇಲ್ ರದ್ದು, ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ.
ಇದು ಜಾಮೀನು ಪಡೆದು ಹೊರಗಿರುವ ಗಾಂಜಾ ಆರೋಪಿಗಳಿಗೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ನೀಡಿರುವ ಎಚ್ಚರಿಕೆ.ಗಾಂಜಾ ಮಾರಾಟ ಮಾಡುತ್ತಿದ್ದ ಮತ್ತು ಬೆಳೆಯುತ್ತಿದ್ದ ಹಾಗೂ ಗಾಂಜಾ ವಿತರಣೆ ಜಾಲದಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಗಾಂಜಾ ಆರೋಪಿಗಳ ಜೊತೆ ಸಂಪರ್ಕವಿರುವ ಸದ್ಯ ಜಾಮೀನಿನ ಮೇಲೆ ಹೊರಗಿರುವ ಹಾಗೂ ಹಿಂದೆ ಗಾಂಜಾ ಮಾರಾಟ 87 ಆರೋಪಿಗಳಾಗಿರುವ ರೌಡಿಗಳನ್ನು ಕರೆಸಿ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ಮತ್ತೆ ಹಳೆ ಚಾಳಿಯನ್ನು ಮುಂದುವರೆಸಿದರೆ ಬೇಲ್ ರದ್ದುಪಡಿಸುವುದಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಶೇಖರ್, ಡಿವೈಎಸ್’ಪಿ ಹಾಗೂ ವಿವಿಧ ಠಾಣೆಯ ಇನ್’ಸ್ಪೆಕ್ಟರ್’ಗಳು ಮತ್ತು ಸಬ್ ಇನ್’ಸ್ಪೆಕ್ಟರ್’ಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post