No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Saturday, April 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ನನ್ನುಸಿರಿಗೆ ನಿನ್ನದೇ ಹೆಸರು: ಇದು ಕೊರಡಿನಲ್ಲೂ ಪ್ರೀತಿ ಉಕ್ಕಿಸುವ ನವಿರಾದ ಪದಪುಂಜ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 6, 2023
in ಸಚಿನ್ ಪಾರ್ಶ್ವನಾಥ್
0
ನನ್ನುಸಿರಿಗೆ ನಿನ್ನದೇ ಹೆಸರು: ಇದು ಕೊರಡಿನಲ್ಲೂ ಪ್ರೀತಿ ಉಕ್ಕಿಸುವ ನವಿರಾದ ಪದಪುಂಜ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ತಂಬೆಲರಿಗೆ ಸುಳಿಗಾಳಿಯ ಹಂಗೇಕೆ?
ಮಳೆಹಾಡಿಗೆ ತಾಳದ ಮೇಳವೇಕೆ?
ನವಿಲಿಗೆ ಪರ ಬಣ್ಣದ ರಂಗೇಕೆ?

ನಗುವಿಗೂ ನಗಿಸಿದವಳೀಕೆ
ನಾಳೆಗಳೂ ಇವಳಿಗೆ ಕಾಣಿಕೆ
ಅನುಗಳಿಗೆಯೂ ಅವಳದೇ ಕನವರಿಕೆ

ಚಂದಿರಳಾದೆ ಬಾಳ ಪಯಣಕೆ
ಕನಸನೆ ಕಾಣದ ಮರುಳು ಜೀವಕೆ
ಉಸಿರ ಬಸಿದೆ ನನ್ನ ಬದುಕಿಗೆ

ಎಷ್ಟು ಅಂತ ಬರೆಯಲಿ? ಅನಂತ ನೆನಪುಗಳು, ಎರಡೆಸಳ ತುಟಿಯ ಅಸದಳ ಆನಂದವು. ನೀನು ಅಂದರೆ ಬರೀ ಪ್ರೀತಿಯಲ್ಲ, ನನ್ನ ಬದುಕಿನ ರೀತಿ. ನಿನಗಾಗಿಯೇ ಬದುಕುವ ಆಸೆ ಹುಟ್ಟಿ ಎಷ್ಟೋ ವರ್ಷಗಳು ಕಳೆದವು. ನಿನಗಾಗಿ ಕಾಯುತ ದಶಕಗಳೇ ಉರುಳಿದವು. ಆ ಕಾಯುವ ಕನವರಿಕೆ ನಿಲ್ಲಗೊಡದು, ಕೂರಗೊಡದು.

ಅಂದು ತೀರದಲಿ ಮರಳ ಕೊರೆದ ಕಾಲ್ಬೆರಳ ತುದಿ ಎದೆಯೊಳಗೆ ನೆನಪುಗಳ ಗೀಚುತಿದೆ ಇಂದು. ನಿನ್ನ ನೆನಪಿಲ್ಲದ ದಿನವೇ ಇಲ್ಲ, ನಿನ್ನ ಎನ್ನ ಕಾಡದ ಕ್ಷಣವೂ ಇಲ್ಲ. ನೀ ಬೈದರೂ, ಬೈದು ಬಣ್ಣಿಸಿದರೂ ಅದೇ ಪ್ರೀತಿ, ನೀನಿರೆ ಅದೇ ಪ್ರೀತಿ. ನಿಜ ಹೇಳಬೇಕೆಂದರೆ ನಿನ್ನ ಬಗ್ಗೆ ಹೇಳುವುದು ಒಂದೇ, ನಾ ನನ್ನ ಬಗ್ಗೆ ಹೇಳುವುದು ಒಂದೇ. ಪದಗಳ ಕೋಟೆಗೆ ಮುತ್ತಿಗೆ ಹಾಕಿ ಕುಳಿತಿದ್ದೇನೆ. ಸಾಲುಗಳು ದಿಡ್ಡಿ ಬಾಗಿಲು ಹಾಕಿ ಅಡಗಿಬಿಟ್ಟಿವೆ.

ಚಿನ್ನದ ಬಣ್ಣ
ಹೊಂಬೆಳಕಿನ ಕಣ್ಣ
ಕನಸಿಗೂ ಚೆನ್ನ
ಹ್ಯಾಂಗ ಮರೆಯಲಿ ನಿನ್ನ

ನೀ ಬರೆದ ಪತ್ರದ ಪ್ರತಿ ಅಕ್ಷರವೂ ಮನದಿ ಮನೆ ಮಾಡಿದೆ
ಕಾಣುವ ತವಕ ಕಣ್ರೆಪ್ಪೆಯ ತೆರೆದಿಟ್ಟಿದೆ
ಇಲ್ಲಿ ನಾನಂತೂ ಹೆಸರಿಗಷ್ಟೇ ಮಾಲೀಕ
ಈ ಹೃದಯವ ನಿನಗೆಂದೇ ಬರೆದಿಟ್ಟಾಗಿದೆ

ನಿನ್ನ ಹೊಗಳಲು ಪದಗಳ ಬಂಧ ಸಾಲುತ್ತಿಲ್ಲ. ನಾನಂತೂ ಮೊದಲೇ ಮರುಳ, ಅಲೆದಾಟ ನಿಲ್ಲುತ್ತಿಲ್ಲ. ಅಪರಿಚಿತ ಭಾವಗಳ ಕುರಿತು ರಾಶಿ ರಾಶಿ ಗೀಚುವ ಕೈ ಬೆರಳುಗಳು ಇಂದು ಪ್ರತಿ ಹೆಜ್ಜೆಗೂ ತಡುಕುತ್ತಿವೆ.ನನ್ನುಸಿರಿಗೆ ನಿನ್ನದೇ ಹೆಸರು
ಕನಸುಗಳಿಗೆಲ್ಲ ನಿನ್ನದೇ ಉಸಿರು

ಅದೊಂದು ಕಾಲವಿತ್ತು.‌ ಯಾರ ಭಯವೂ ಇಲ್ಲದೆ, ಯಾರ ನಂಟು ಇಲ್ಲದೆ ಬೆಳೆದ ದಿನಗಳು. ನಿ ಬಂದೆಯಷ್ಟೆ, ಬದಲಾಯಿಸಿ ಬಿಟ್ಟೆಯಲ್ಲ. ಮಾನಸಿಕವಾಗಿ ಇಷ್ಟು ಖುಷಿ, ಕನಸು, ಸ್ಥೈರ್ಯ ಎಲ್ಲ ಎಲ್ಲಾ ನಿ ಬಂದಮೇಲೆ ಅಚ್ಚರಿ ತರುವಷ್ಟು ಬದಲಾಗಿ ಹೋಯಿತು.

ಪಾರಿಜಾತದ ಗಂಧ
ನೀಲಾಗಸದ ಅಂದ
ಕೃಷ್ಣ ರಾಧೆಯ ಬಂಧ
ನೀನಿರಲು ಬದುಕೇ ಚಂದ

ಗಂಟೆಗೆ ಒಮ್ಮೆಯಾದರೂ ನಿನ್ನ ಗೋಳು ಹೋಯ್ದುಕೊಳ್ಳದೇ ಹೋದರೆ ಏನೋ ಕಳೆದುಕೊಂಡ ಭಾವ. ಈ ಬಂಧಕ್ಕೆ ಹೆಸರೂ ಇಡದೆ ಎಷ್ಟೋ ವರ್ಷಗಳು ಆಗಿದ್ದವು. ಆಗಲೂ ಹೀಗೆಯೇ ಇದ್ದೆವು. ಒಮ್ಮೊಮ್ಮೆ ವಿಶೇಷ ಅನ್ನಿಸಿಬಿಡುತ್ತದೆ ಎಷ್ಟು ಬೇಗ ಇಷ್ಟು ವರ್ಷಗಳು ಕಳೆದವು ಎಂದು.ನನ್ನ ನೆನಪಿನೂರಲ್ಲಿ ನಿನದೇ ಕನಸುಗಳ ಸಂತೆ,
ಮಾರಿ ಕೊಳ್ಳುತಿರುವೆ, ಕೊಂಡು ಮಾರುತಿರುವೆ ಮರುಳನಂತೆ,
ತೀರದ ಬಯಕೆಯೊಂದಿಗೆ ತೀರಕೆ ಬರುವ ಅಲೆಯಂತೆ,
ಕೇಳದಲೇ ಗಾಳಿ ಹೊತ್ತೊಯ್ಯುವ ಹೂಗಳ ಗಂಧದಂತೆ,
ಚೆಲ್ಲಿ ಹರಡಿ ಕೂತಿರುವೆ ಬಯಕೆಗಳ ಸಾಲ,
ಬಂದು ಹೋಗು ಒಮ್ಮೆ,
ತಣಿದು ತಣಿದು ದಣಿಯಲಿ ಮನ ಕೊಂಚ ಕಾಲ,
ಯಾಕೋ ಕಾಣೆ ನನ್ನ ಆಸೆಯೇ ಬಹು ಸರಳ,
ಕೊಂಡು ಬಿಡು ಒಮ್ಮೆ ಮರಳಿಸದೆಯೇ ಈ ಜೀವವ…


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Kannada News WebsiteLatest News KannadaLocal NewsLoveLove ArticleLove LetterSachin Parshwanathಕನಸುಪಾರಿಜಾತಪ್ರೀತಿಬಂಧಸಚಿನ್ ಪಾರ್ಶ್ವನಾಥ್
Share230Tweet123Send
Previous Post

ಎಪ್ರಿಲ್ 4ರಂದು ಡಾಕ್ಟರ್ಸ್‌ ಕಪ್-6 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್

Next Post

ಕಲಾಲ್ ಖಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಿಎಂಗೆ ಮನವಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕಲಾಲ್ ಖಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಿಎಂಗೆ ಮನವಿ

ಕಲಾಲ್ ಖಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಿಎಂಗೆ ಮನವಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಕುಡಿಯುವ ನೀರಿನ ಬಾವಿಗೆ ವಿಷ | ಪ್ರಕರಣ ದಾಖಲು

ಕುಡಿಯುವ ನೀರಿನ ಬಾವಿಗೆ ವಿಷ | ಪ್ರಕರಣ ದಾಖಲು

April 18, 2026
ಶಿಕಾರಿಪುರ | ಸಕಾರಾತ್ಮಕ ಸಿದ್ಧತೆಯಿಂದ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ | ತಹಶೀಲ್ದಾರ್ ವಾಣಿ

ಶಿಕಾರಿಪುರ | ಸಕಾರಾತ್ಮಕ ಸಿದ್ಧತೆಯಿಂದ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ | ತಹಶೀಲ್ದಾರ್ ವಾಣಿ

April 18, 2026
ಶಿವಮೊಗ್ಗದಲ್ಲಿ ಮೊಳಗಿದ ವಂದೇ ಮಾತರಂ ನಾದ: ‘ಅದಮ್ಯ ಭಾರತ’ ಪ್ರದರ್ಶನ

ಶಿವಮೊಗ್ಗದಲ್ಲಿ ಮೊಳಗಿದ ವಂದೇ ಮಾತರಂ ನಾದ: ‘ಅದಮ್ಯ ಭಾರತ’ ಪ್ರದರ್ಶನ

April 18, 2026
ಯೋಗೀಶ್ ಹತ್ಯೆ ಪ್ರಕರಣ | ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಪರಪ್ಪನ ಅಗ್ರಹಾರದ ಕ್ವಾರಂಟೈನ್‌ ಸೆಲ್‌’ಗೆ ಶಾಸಕ ವಿನಯ್ ಕುಲಕರ್ಣಿ

April 18, 2026
ಜೆಎನ್’ಎನ್’ಸಿಇ ಪಿಜಿ ಗ್ರಾಜುಯೇಷನ್ ಡೇ | ಎನ್ಇಎಸ್ ಚಿನ್ನದ ಪದಕ ಪ್ರದಾನ

ಜೆಎನ್’ಎನ್’ಸಿಇ ಪಿಜಿ ಗ್ರಾಜುಯೇಷನ್ ಡೇ | ಎನ್ಇಎಸ್ ಚಿನ್ನದ ಪದಕ ಪ್ರದಾನ

April 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL