ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾ 2ನೆಯ ಅಲೆ ಅತೀ ಭಯಂಕರ ಸ್ವರೂಪ ಪಡೆದಿದ್ದು, ಲಾಕ್‌ಡೌನ್ ಅನ್ನು ಬೆಂಬಲಿಸುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಲು ಸರಕಾರದೊಂದಿಗೆ ಕೈಜೋಡಿಸಬೇಕಿದೆ.
ಈ ರೀತಿಯ ಸಂಕಷ್ಟದ ಸಂದರ್ಭದಲ್ಲಿ ಹೋಟೆಲ್ ಶುಭಂ ವತಿಯಿಂದ ಸಾಮಾಜಿಕ ಕಾರ್ಯವನ್ನು ಮಾಡಲಾಗುತ್ತಿದ್ದು, ಊಟ ಇಲ್ಲದೆ ಕಟ್ಟಡಗಳಲ್ಲಿ ಸಿಕ್ಕಿ ಹಾಕಿ ಕೊಂಡವರು, ಅನಾಥರು, ಭಿಕ್ಷುಕರು ಮತ್ತು ಆಹಾರ ಸಿಗದೆ ಉಪವಾಸವಿದ್ದು ಸಂಕಷ್ಟದಲ್ಲಿರುವವರಿಗೆ ಉಚಿತವಾಗಿ ಊಟ ನೀಡಲು ಮುಂದಾಗಿದ್ದಾರೆ.

ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಯಾರಾದರೂ ಊಟಕ್ಕಾಗಿ ಪರದಾಡುವವರಿದ್ದರೆ ಮಾನವೀಯ ಕಳಕಳಿ ಇರುವ ಯಾವುದೇ ಸಂಘ ಸಂಸ್ಥೆಯವರು ಮತ್ತು ನಾಗರಿಕರು ಮಧ್ಯಾಹ್ನ 12:30 ರಿಂದ 2:30 ಹಾಗೂ ರಾತ್ರಿ 7ರಿಂದ 8:30ರವರೆಗೆ ಮೊ: 8884411009, 8884411002, 08182-404404, 08182-403403ಗೆ ಸಂಪರ್ಕಿಸಬಹುದು. ನೆರವಿಗಾಗಿ ಮುಂಚಿತವಾಗಿ ತಿಳಿಸಿ. ಈ ಸೇವೆ ಶಿವಮೊಗ್ಗ ನಗರದಲ್ಲಿ ಮಾತ್ರ.
ಹೋಟೆಲ್ ಉದ್ಯಮಕ್ಷೇತ್ರದಲ್ಲೇ ಮಾದರಿ ಎನಿಸುವ ಸಾಮಾಜಿಕ ಹೊಣೆಗಾರಿಕೆಯ ನಿರ್ವಹಣೆಯಲ್ಲಿ ಶುಭಂ ಒಂದು ಸುಂದರ ಶೋಭಾಯಮಾನವಾದ ಹೆಜ್ಜೆ ಇಟ್ಟಿದೆ. ಶುಭಂ… ನಿಮ್ಮ ಪವಿತ್ರ ಕಾರ್ಯಕ್ಕೆ ಕಲ್ಪ ಬೆಂಬಲಿಸುತ್ತದೆ. ಹೋಟೆಲ್ ಶುಭಂ ಬಳಗಕ್ಕೆ ಕಲ್ಪ ಮೀಡಿಯಾ ಹೌಸ್ ಅಭಿನಂದನೆಗಳು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















