ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರ ಉಪವಿಭಾಗ-2 ರ ಘಟಕ-4 ರ ವ್ಯಾಪ್ತಿಯಲ್ಲಿನ ಎಂ.ಆರ್.ಎಸ್. 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾಮಗಾರಿ ಇರುವ ಕಾರಣ ಜೂನ್ 25 ರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಬೆಕ್ಕಿನಕಲ್ಮಠ, ಕೋಟೆ ರಸ್ತೆ, ಮಾರಿಗದ್ದುಗೆ, ಎಸ್‌ಪಿಎಂ ರಸ್ತೆ, ಒ.ಬಿ.ಎಲ್ ರಸ್ತೆ, ಪೆನ್ಷನ್ ಮೊಹಲ್ಲಾ, ಸಿ.ಎಲ್. ರಾಮಣ್ಣ ರಸ್ತೆ, ಹಳೇ ಪೋಸ್ಟ್‌ಆಫೀಸ್ ರಸ್ತೆ, ಲಷ್ಕರ್ ಮೊಹಲ್ಲಾ, ಎಲಕಪ್ಪನ ಕೇರಿ, ನಾಗಪ್ಪನ ಕೇರಿ, ಗಾಂಧಿ ಬಜಾರ್, ಬಿ.ಎಚ್. ರಸ್ತೆ ಎಡಭಾಗ, ಅಮೀರ್ ಅಹಮದ್ ಸರ್ಕಲ್, ಶಿವಾಜಿ ರಸ್ತೆ, ತಿರುಪಳಯ್ಯನ ಕೇರಿ, ಬಿ.ಎಚ್. ರಸ್ತೆ, ಸಾವರ್ಕರ್ ನಗರ, ಅಶೋಕ ರಸ್ತೆ, ಕುಚಲಕ್ಕಿ ಕೇರಿ, ಎಂ.ಕೆ.ಕೆ ರಸ್ತೆ, ಆನವೇರಪ್ಪನ ಕೇರಿ, ಎಲೆ ರೇವಣ್ಣನ ಕೇರಿ, ಗಂಗಾ ಪರಮೇಶ್ವರಿ ದೇವಸ್ಥಾನ ಹತ್ತಿರ, ಗಾಂಧಿ ಬಜಾರ್, ಧರ್ಮರಾಯನ ಕೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ನ.ಉ.ವಿ-2 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















