ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ವಾಹನ ಚಾಲಕರಾಗಿ ಕೆಲಸ ನಿರ್ವಹಿಸುತ್ತಿರುವವರಿಗೆ ಮತ್ತು ಖಾಸಗಿ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ 20 ಕುಟುಂಬಗಳಿಗೆ ಈ ದಿನ ರೋಟರಿ ಕ್ಲಬ್ ಜ್ಯುಬಿಲಿ ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು.
ಶಿವಮೊಗ್ಗ ಹಾಗೂ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜ್ಯೋತಿ ಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಹಾರ ಸಾಮಗ್ರಿ ವಿತರಿಸಿ ರೋಟರಿ ಸಮಾಜಸೇವೆ ಬಗ್ಗೆ ಪ್ರಶಂಸಿದರು.

ಇದೇ ಸಂದರ್ಭದಲ್ಲಿ ವಾಜಪೇಯಿ ಬಡಾವಣೆಯಲ್ಲಿ ದೊಡ್ಡ ವಿಸ್ತೀರ್ಣದ ಕೆರೆ ಪುನರ್ ಜೀವದ ಕಾರ್ಯಕ್ರಮಕ್ಕೆ ಪರಿಸರ ಸ್ವಯಂ ಸೇವಾ ಸಂಸ್ಥೆ ಸಹಕಾರದೊಂದಿಗೆ ಕೈಗೆತ್ತಿಕೊಂಡಿರುವ ಬಗ್ಗೆ ಜ್ಯೋತಿಪ್ರಕಾಶ್ ಅವರನ್ನು ಪ್ರಶಂಸಿಸಲಾಯಿತು.
ರೋ. ಅಶ್ವಥ್ ಮಾತನಾಡಿ, ಕೋವಿಡ್ ಸಮಯದಲ್ಲಿ ಸಂಸ್ಥೆ ನಿರ್ವಹಿಸಿದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ರೋ. ರೇವಣ ಸಿದ್ದಪ್ಪ ವಂದಿಸಿದರು. ನಿಯೋಜಿತ ಅಧ್ಯಕ್ಷ ರೋ. ಎಸ್. ಆರ್. ಲಕ್ಷ್ಮೀನಾರಾಯಣ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸಿಸ್ಟಂಟ್ ಗವರ್ನರ್ ರೋ. ಶ್ರೀಧರ್, ನಿಯೋಜಿತ ಅಸಿಸ್ಟಂಟ್ ಗವರ್ನರ್ ರೋ ಆನಂದ ಮೂರ್ತಿ. ಸದಸ್ಯರುಗಳಾದ ವಾಗೀಶ, ಭಾರದ್ವಾಜ್, ರಾಜಶೇಖರ್, ವಿ.ಜಿ. ಲಕ್ಷ್ಮೀನಾರಾಯಣ್, ಎನ್.ಜೆ. ಸುರೇಶ್, ವಿ. ಜಿ. ಲಕ್ಷ್ಮೀನಾರಾಯಣ, ನಾಗರಾಜ್, ವೆಂಕಟೇಶ್ ನಾಯಕ್, ಉಮಾದೇವಿ ಸಿ.ವಿಜಯಕುಮಾರ್, ಕೆ. ಪಿ. ಶೆಟ್ಟಿ, ರೂಪ, ಸುರೇಂದ್ರ ಕುಮಾರಸ್ವಾಮಿ ಭಾಗವಹಿಸಿದ್ದರು. ಕಾರ್ಯದರ್ಶಿ
ರೇಣುಕಾ ಆರಾಧ್ಯ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















