ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆ ಇದ್ದು, ಇಂದಿನಿಂದ ಜುಲೈ 13 ರವರೆಗೆ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯಾದ್ಯಂತ ಜುಲೈ 10ರಿಂದ 13ರವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ದಕ್ಷಿಣ ಕನ್ನಡ, ಕೋಲಾರ, ಕೊಪ್ಪಳದಲ್ಲಿ ಇಂದು ಸಹ ಮಳೆಯಾಗಿದ್ದು, ಕರಾವಳಿ, ದಕ್ಷಿಣ, ಉತ್ತರ ಒಳನಾಡಿನಲ್ಲಿ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 24 ಡಿಗ್ರಿ ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ 31 ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್, ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ 31 ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ ಎನ್ನಲಾಗಿದೆ.
ರಾಜ್ಯದ ವಿವಿಧ ನಗರಗಳ ಇಂದಿನ ಹವಾಮಾನ ವರದಿ ಹೀಗಿದೆ:
ಬೆಂಗಳೂರು: 24-20
ಮಂಗಳೂರು: 27-24
ಶಿವಮೊಗ್ಗ: 26-21
ಬೆಳಗಾವಿ: 25-21
ಮೈಸೂರು: 24-20
ಮಂಡ್ಯ: 26-21
ರಾಮನಗರ: 31-26
ಮಡಿಕೇರಿ: 20-17
ಹಾಸನ: 23-19
ಚಾಮರಾಜನಗರ: 26-21
ಚಿಕ್ಕಬಳ್ಳಾಪುರ: 26-20
ಕೋಲಾರ: 27-21
ತುಮಕೂರು: 26-21
ಉಡುಪಿ: 27-24
ಕಾರವಾರ: 28-25
ಚಿಕ್ಕಮಗಳೂರು:22-18
ದಾವಣಗೆರೆ: 27-22
ಚಿತ್ರದುರ್ಗ: 27-21
ಹಾವೇರಿ: 27-22
ಗದಗ: 27-21
ಕೊಪ್ಪಳ: 29-22
ರಾಯಚೂರು: 31-23
ಯಾದಗಿರಿ: 31-23
ವಿಜಯಪುರ: 29-22
ಬೀದರ್: 28-22
ಕಲಬುರಗಿ: 31-22
ಬಾಗಲಕೋಟೆ: 30-23
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post