ಕಲ್ಪ ಮೀಡಿಯಾ ಹೌಸ್
ಕಾಲೇಜು ಶಿವಮೊಗ್ಗದ ಗುರುಪುರದಲ್ಲಿರುವ ಬಿಜಿಎಸ್ ಗುರುಕುಲ ಕಾಲೇಜಿನ ವಿದ್ಯಾರ್ಥಿಗಳು ಮೊದಲ ಬ್ಯಾಚ್(2019-20)ನಲ್ಲಿಯೇ ಶೇ.97.5ರಷ್ಟು ಫಲಿತಾಂಶ ಗಳಿಸಿದ್ದು, ಅವಳಿ ಸಹೋದರರಾದ ಎಸ್. ರೋಹನ್, ಶೇ. 95.5 ಹಾಗೂ ಎಸ್. ರೋಹಿತ್ ಶೇ. 94.5ರಷ್ಟು ಅಂಕ ಗಳಿಸಿ ಕಾಲೇಜಿನ ಟಾಪರ್‌ಗಳಾಗಿ ಕೀರ್ತಿ ತಂದಿದ್ದಾರೆ.
ಜಗತ್ತನ್ನು ಬದಲಾಯಿಸಲು ಇರುವ ಶಕ್ತಿಶಾಲಿ ಆಯುಧವೆಂದರೆ ಅದು ಶಿಕ್ಷಣ ಎಂದು ದಕ್ಷಿಣ ಆಫ್ರಿಕಾದ ಮಾಜಿ ರಾಷ್ಟ್ರಾಧ್ಯಕ್ಷ ನೆಲ್ಸನ್ ಮಂಡೇಲಾ ಹೇಳಿದ್ದಾರೆ. ಶಿಕ್ಷಣವೇ ಶಕ್ತಿ ಎಂಬ ದಿವ್ಯವಾದ ಮಂತ್ರದೊಂದಿಗೆ ಮುನ್ನಡೆಯುತ್ತಿರುವ ಶಿಕ್ಷಣ ಸಂಸ್ಥೆ ಶಿವಮೊಗ್ಗದ ಗುರುಪುರದಲ್ಲಿರುವ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿಪೂರ್ವ ಕಾಲೇಜು.
ಶಿವಮೊಗ್ಗದ ಆದಿಚುಂಚನಗಿರಿ ಶಾಖಾ ಮಠ ಟ್ರಸ್ಟ್ ಇದನ್ನು ಮುನ್ನಡೆಸುತ್ತಿದೆ. ಈ ಬಾರಿಯ (2021) ಫಲಿತಾಂಶ ಶೇ.100 ರಷ್ಟು ಬಂದಿದ್ದು, ನಂದನ್ ರಾಜ್ ಶೇ.98.8 ಹಾಗೂ ರಾಮ್ ವಿಕಾಸ್ ಶೇ.97.3 ಉತ್ತೀರ್ಣತೆಯೊಂದಿಗೆ ಕಾಲೇಜಿನ ಟಾಪರ್‌ಗಳಾಗಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ಸಂಸ್ಥೆಯೊಂದು ಆರಂಭವಾದ ಎರಡನೆಯ ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ತನ್ನ ಏರಿಕೆಯನ್ನು ಪ್ರದರ್ಶಿಸಿದೆ. ಇದು ಇಲ್ಲಿರುವ ದಕ್ಷ ಹಾಗೂ ಮೌಲ್ಯಯುತ ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗದವರ ಅಪರಿಮಿತ ಪರಿಶ್ರಮ ಎಂದರೆ ಅತಿಶಯೋಕ್ತಿಯಲ್ಲ.
ಕ್ರೀಡೆ ಹಾಗೂ ಶಿಕ್ಷಣಕ್ಕೆ ಇರುವ ಅವಿನಾಭಾವ ಸಂಬಂಧವನ್ನು ಅರಿತಿರುವ ಕಾಲೇಜು ಶಿಕ್ಷಣ ಮಂಡಳಿ ಅದಕ್ಕೆ ತಕ್ಕಂತೆ ತನ್ನ ಬೋಧನಾ ವ್ಯವಸ್ಥೆ ರೂಪಿಸಿದೆ. ಪ್ರತಿ ವಿದ್ಯಾರ್ಥಿಯ ಅಗತ್ಯ ಹಾಗೂ ಸಾಧ್ಯತೆಗಳನ್ನು ಆರಂಭದಲ್ಲಿಯೇ ಮನಗಂಡು ಪೂರಕವಾದ ಶಿಕ್ಷಣವನ್ನು ನೀಡುತ್ತಿರುವುದು ಈ ಸಾಧನೆಯ ಹಿಂದಿನ ಉಪನ್ಯಾಸಕರ ಶ್ರಮವಾಗಿದೆ.
ಆದಿಚುಂಚನಗಿರಿ ಮಹಾಸಂಸ್ಥಾನವು ಶಿಕ್ಷಣಕ್ಕೆ ಬಹಳ ಮಹತ್ವವನ್ನು ನೀಡುತ್ತಾ ಬಂದಿದೆ. ಇದಕ್ಕೆ ಸಾಕ್ಷಿಯಾಗಿ ಹಿಂದಿನ ಗುರುಗಳಾದ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ದೂರದೃಷ್ಟಿಯಿಂದ ಶಿವಮೊಗ್ಗದಲ್ಲಿ ಆದಿಚುಂಚನಗಿರಿ ಶಾಖಾ ಮಠ ನಡೆಸುತ್ತಿರುವ ಶಿಕ್ಷಣ ಹಾಗೂ ವಿದ್ಯಾರ್ಥಿ ಮನೋವಿಕಾಸ ಚಟುವಟಿಕೆಗಳು ಕಾಣುತ್ತವೆ. ಇದಕ್ಕೆ ಇಂದಿನ ಪೀಠಾಧಿಪತಿಗಳಾದ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿ ನೀರೆರದು ಪೋಷಿಸುತ್ತಾ ತಾಯಿ ಶಾರದೆಯ ಸೇವೆಯನ್ನು ಭಂಗ ಬರದಂತೆ ಸದ್ದಿಲ್ಲದಂತೆ ನಡೆಸುತ್ತಿದ್ದಾರೆ.
ಸಾಧಕ ವಿದ್ಯಾರ್ಥಿಗಳೆಲ್ಲರನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿ, ಕಾಲೇಜಿನ ಪ್ರಾಚಾರ್ಯೆ ಎನ್.ಎ. ಜ್ಯೋತಿ, ಕಾಲೇಜು ಆಡಳಿತ ಮಂಡಳಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದೆ.
ಗುರುಪುರ ಬಿಜಿಎಸ್ ಗುರುಕುಲ ಪಿಯು ಕಾಲೇಜಿನ ವಿಶೇಷ:
- ವಿದ್ಯಾರ್ಥಿ ಕೇಂದ್ರಿತ ನುರಿತ ಹಾಗೂ ಸೇವಾ ಮನೋಭಾವದ ಉಪನ್ಯಾಸಕ ವೃಂದ
- ಉತ್ತಮವಾದ, ಅಗತ್ಯ ಹಾಗೂ ಮೌಲ್ಯಯುತ ಪುಸ್ತಕಗಳುಳ್ಳ ಗ್ರಂಥಾಲಯ ಆಧುನಿಕ
- ವಿಶಾಲವಾದ ಬೋಧನಾ ಕೊಠಡಿಗಳು ಸುಸಜ್ಜಿತ
- ವಿಶಾಲವಾದ ರಸಾಯನ ಶಾಸ್ತ್ರ, ಭೌತಶಾಸ್ತ್ರ ಗಣಕಶಾಸ್ತ್ರ(ಕಂಪ್ಯೂಟರ್) ಪ್ರಯೋಗಾಲಯ
- ಅತ್ಯಾಧುನಿಕ ಹಾಗೂ ಉತ್ತಮ ಅಂತರ್ಜಾಲ ಸಂಪರ್ಕವುಳ್ಳ ಕಂಪ್ಯೂಟರ್ ಲ್ಯಾಬ್
- ವಿದ್ಯಾರ್ಥಿ ಸ್ನೇಹಿ ಹಾಸ್ಟೆಲ್ ವ್ಯವಸ್ಥೆ, ಶುಚಿ ರುಚಿಯಾದ ಭೋಜನಾಲಯ
- ಪ್ರತಿ ವಾರ ವಿಷಯವಾರು ಪರೀಕ್ಷೆಗಳು
- ವಿದ್ಯಾರ್ಥಿಗಳಿಗೆ ಟ್ಯಾಬ್ ಸೌಲಭ್ಯ
- vsat ಪ್ಲಾಟ್‌ಫಾರ್ಮ್ ಮುಖಾಂತರ real time interactive classe
ಕ್ರೀಡೆಗೆ ಪ್ರಾಮುಖ್ಯತೆ:
ಅವಳಿ ಸಹೋದರರಾದ ರೋಹನ್ ಹಾಗೂ ರೋಹಿತ್ ಅವರು ರಾಜ್ಯ ಮಟ್ಟದಲ್ಲಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾಲೇಜನ್ನು ಪ್ರತಿನಿಧಿಸಿದ್ದಾರೆ.
ಲಭ್ಯವಿರುವ ಕಾಂಬಿನೇಷನ್‌ಗಳು:
- ವಾಣಿಜ್ಯ ವಿಭಾಗದಲ್ಲಿ:
ಅಕೌಂಟೆನ್ಸಿ, ಬ್ಯುಸಿನೆಸ್ ಸ್ಟಡೀಸ್, ಇಕಾನಾಮಿಕ್ಸ್, ಸ್ಟ್ಯಾಟಸ್ಟಿಕ್ಸ್, ಕಂಪ್ಯೂಟರ್ ಸೈನ್ಸ್ - ವಿಜ್ಞಾನ ವಿಭಾಗದಲ್ಲಿ:
ಜೀವಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ, ಭೌತಶಾಸ್ತ್ರ , ಕಂಪ್ಯೂಟರ್ ಸೈನ್ಸ್
ಭಾಷೆಗಳು: ಕನ್ನಡ, ಇಂಗ್ಲೀಷ್, ಹಿಂದಿ
ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, ನೀಟ್, ಮತ್ತು ಜೆಇಇಗಳಿಗೆ ಇಲ್ಲಿ ಉತ್ತಮವಾದ ಬೋಧನಾ ಸೌಲಭ್ಯವಿದೆ.
ಮೊದಲ ಬ್ಯಾಚ್ (2019-20)ಗಳಲ್ಲಿಯೇ ಏಳು ವಿದ್ಯಾರ್ಥಿಗಳು ಜೆಇಇ ಮೈನ್ ಮತ್ತು 6 ವಿದ್ಯಾರ್ಥಿಗಳು ನೀಟ್ ಕ್ವಾಲಿಫೈಯರ್ ಆಗಿದ್ದಾರೆ.
ಈಗಾಗಲೇ ಇಲ್ಲಿ ಪ್ರಥಮ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ತರಗತಿಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಬೆಳಗ್ಗೆ 10ರಿಂದ ಸಂಜೆ 6 ಗಂಟೆಯೊಳಗೆ ಪೋಷಕರು ಮಕ್ಕಳನ್ನು ದಾಖಲಿಸಲು ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗೆ ಪ್ರಾಚಾರ್ಯೆ ಜ್ಯೋತಿ (ಮೊ: 9449921971) ಅವರನ್ನು ಸಂಪರ್ಕಿಸಬಹುದು.
Website Link:
http://www.bgspugurupurashimoga.org/
Facebook Link:
https://www.facebook.com/BGS-Gurupura-107526828051346/
Youtube Link:
https://www.youtube.com/channel/UCfqNALJTYYuc-UY1ZkcUVlQ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post