ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕೊಂಡೊಯ್ಯುತ್ತಿದ್ದ ಕ್ಯಾಂಟರ್ ಆಯನೂರು ಮತ್ತು ಕುಂಸಿ ಮಾರ್ಗ ಮಧ್ಯೆ ಅಪಘಾತಕ್ಕೀಡಾಗಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಕ್ಯಾಂಟರ್ ಚಾಲಕ ನಿದ್ದೆ ಮಂಪರಿನಲ್ಲಿ ನೀಲಗರಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ರಭಸಕ್ಕೆ ವಾಹನದ ಮುಂಭಾಗದ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಷಾತ್ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಾಹನ ಚಾಲಕ ಮಧುಸೂದನ್ ಮತ್ತು ಕ್ಲೀನರ್ ಸಂತೋಷ್ ಕ್ಯಾಂಟರಿನಲ್ಲಿದ್ದರು ಎನ್ನಲಾಗಿದೆ. ಚಾಲಕ ವಾಹನದಿಂದ ಹೊರಬಂದಿದ್ದು, ಕ್ಲೀನರ್ ಸಂತೋಷ್ ವಾಹನದ ಕ್ಯಾಬಿನ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಸೊಂಟದ ಕೆಳಭಾಗ ಎರಡು ಕಾಲು ಮುರಿದುಕೊಂಡು ಹೊರಬರಲಾರದೆ ಒದ್ದಾಡುತಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ, ಕ್ಲೀನರ್ ಸಂತೋಷ್ ಅವರನ್ನು ವಾಹನದಿಂದ ಹೊರತೆಗೆದು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದರು.
ದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್. ಅಶೋಕ್ ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಕೆ.ಎನ್. ಪ್ರವೀಣ್, ಸಿಬ್ಬಂದಿ ಎಚ್. ಸುನೀಲ್, ವಿಜಯ್ ಖುರೇಶಿ, ಮನುನಾಥ್, ವಿಷ್ಣು ನಾಯ್ಕ್, ದೇವರಾಜ್, ಮೂಡಬಸಪ್ಪ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post