No Result
View All Result
yoga | Participate online
English Articles

India Launches Worldwide Campaign for International Day of Yoga 2026

by ಕಲ್ಪ ನ್ಯೂಸ್
June 13, 2026
0

Kalpa Media House  |  New Delhi | The Ministry of AYUSH, in collaboration with its partners, has announced a global...

Read moreDetails
Elderly Woman Found Dead

Elderly Woman Found Dead in Decomposed State in Shivamogga

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
  • Advertise With Us
  • Grievances
  • About Us
  • Contact Us
Saturday, June 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅಗಣಿತ ತಾರಾ ಬಳಗದ ನಡುವೆ ಸದಾ ಮಿನುಗುತಿರುವ ‘ಸರ್‌ಎಂವಿ’ ಎಂಬ ಧೃವತಾರೆ

ಸರ್.ಎಂ. ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 15, 2021
in Special Articles
0
ಅಗಣಿತ ತಾರಾ ಬಳಗದ ನಡುವೆ ಸದಾ ಮಿನುಗುತಿರುವ ‘ಸರ್‌ಎಂವಿ’ ಎಂಬ ಧೃವತಾರೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಸರ್.ಎಂ. ವಿಶ್ವೇಶ್ವರಯ್ಯ ಎಂದೇ ಪ್ರಖ್ಯಾತರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು, ದೇಶ ಕಂಡ ಇಂಜಿನಿಯರುಗಳಲ್ಲಿ ಎಂದಿಗೂ ಧುೃವತಾರೆಯಾಗಿ ಅಗಣಿತ ತಾರೆಗಳ ನಡುವೆ ಎಂದೆಂದೂ ಮಿನುಗುವ ಚಂದಿರರಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1860ರ ಸೆಪ್ಟೆಂಬರ್ 15ರಂದು ವಿಶ್ವೇಶ್ವರಯ್ಯ ಜನಿಸಿದರು. ಇವರ ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಟಲಕ್ಷ್ಮಮ್ಮ. ಇವರ ತಂದೆ ಸಂಸ್ಕೃತ ವಿದ್ವಾಂಸರೂ, ಧರ್ಮಶಾಸ್ತ್ರ ಪಾರಂಗತರೂ ಹಾಗೂ ಆಯುರ್ವೇದ ತಜ್ಞರೂ ಆಗಿದ್ದರು.ತಮ್ಮ ಅಸಾಧಾರಣ ಬುದ್ಧಿಮತ್ತೆಯಿಂದಲೇ ಜಗದ್ವಿಖ್ಯಾತರಾಗಿದ್ದ ವಿಶ್ವೇಶ್ವರಯ್ಯನವರು ಅತ್ಯಾಧುನಿಕ ತಂತ್ರಜ್ಞಾನ ಭಾರತಕ್ಕೆ ಬರುವ ಮೊದಲೇ ಜಗತ್ತು ಇತ್ತ ತಿರುಗಿ ನೋಡುವಂತೆ ಮಾಡಿದ್ದ ಮಹಾನ್ ವ್ಯಕ್ತಿಯಾಗಿದ್ದವರು. ಸಾಧಾರಣ ಕುಟುಂಬದಲ್ಲಿ ಜನಿಸಿ ಅಸಾಧಾರಣ ಸಾಧನೆ ಮಾಡಿದ್ದ ಸರ್‌ಎಂವಿ ಅವರ ವ್ಯಕ್ತಿತ್ವ ಇಡೀ ಪ್ರಪಂಚಕ್ಕೇ ಅನುಕರಣೀಯ ಎಂದರೆ ಅತಿಶಯೋಕ್ತಿಯಲ್ಲ. ಅತೀವ ಬುದ್ಧಿಶಕ್ತಿಯನ್ನು ಹೊಂದಿದ್ದ ಇವರ ಜ್ಞಾನಚಕ್ಷುವಿಗೆ ಇಡೀ ದೇಶದ ಸಮಸ್ತ ಸಮಸ್ಯೆಗಳೂ ಘೋಚರಿಸುತ್ತಿದ್ದವು. ಇದರಿಂದಾಗಿಯೇ ದೇಶದ ಸಮಗ್ರ ಅಭಿವೃದ್ಧಿಗಾಗಿ ಚಿಂತಿಸುತ್ತಾ, ವಿವಿಧ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಲೇ ಇದ್ದರು.

ಕಾರ್ಯಕ್ಷಮತೆ, ಕರ್ತವ್ಯ ಬದ್ಧತೆ ಮತ್ತು ಜೀವನಮಟ್ಟ ಮುಂತಾದ ವಿಚಾರಗಳಲ್ಲಿ ಪ್ರಸ್ತುತ ಭಾರತ ದೇಶದಲ್ಲಿ ಅನುಸರಿಸಲಾಗುತ್ತಿರುವ ಆಚರಣೆಗಳಿಗೂ ಇತರ ಪ್ರಗತಿಪರ ದೇಶಗಳಿಗೂ ನಡುವೆ ಎದ್ದುಕಾಣುವ ಅಸಮತೋಲನವಿದೆ ಎಂದು ನೂರು ವರ್ಷದ ಹಿಂದೆಯೇ ಹೇಳಿದ್ದ ವಿಶ್ವೇಶ್ವರಯ್ಯ, ದೇಶದ ಸಮಗ್ರ ಅಭಿವೃದ್ಧಿ ಶ್ರಮದಿಂದ ಮಾತ್ರ ಸಾಧ್ಯ ಎಂದಿದ್ದವರು.ಇವರು ಸ್ವತಃ ಬರೆದಿರುವ ಮೆಮೊರೀಸ್ ಆಫ್ ಮೈ ವರ್ಕಿಂಗ್ ಲೈಫ್ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ ಯೋಜನಾ ರಹಿತ ಜಡ ದೇಶವಾಗಿ ಭಾರತವು ಬಹುಕಾಲ ಮುಂದುವರೆಯುವುದು ಅಸಾಧ್ಯ. ಅದರ ಬಹುತೇಕ ಜನ ಸಮುದಾಯವು ಆಧುನಿಕ ಜಗತ್ತಿನ ಆಗುಹೋಗುಳ ಅರಿವು, ಪ್ರಗತಿಪರ ವ್ಯವಹಾರ, ಜಗತ್ತಿನ ಆದರ್ಶ, ರಚನಾತ್ಮಕ ದೃಷ್ಟಿಕೋನ ಮತ್ತು ಸೃಜನಶೀಲತೆಗಳಿಂದ ಪ್ರೇರಣ ಪಡೆದು ಆಚರಣೆಗಿಳಸದೇ ಇದ್ದರೆ, ಭವಿಷ್ಯದಲ್ಲಿ ದೇಶದ ಭದ್ರತೆಯೇ ಗಂಡಾಂತರಕ್ಕೀಡಾಗಲಿದೆ ಎಂಬ ಮಾತನ್ನು ಅಂದೇ ಹೇಳಿದ್ದ ವ್ಯಕ್ತಿಯಾಗಿದ್ದಾರೆ.

ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದರೂ ದೇಶದ ಎಲ್ಲ ಜನರಿಗೆ ಅನ್ನ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದ ಇವರ ಮಾತು ಇಂದಿಗೂ ಪ್ರಸ್ತುತವಾಗಿರುವುದು ಒಂದು ರೀತಿಯಲ್ಲಿ ದುರಂತವೇ ಸರಿ. ಇದನ್ನು ಸರಿಪಡಿಸಿ ದೇಶ ಸ್ವಾವಲಂಭಿಯಾಗಬೇಕಾದಲ್ಲಿ ರೂಢಿಗತ ವಾಡಿಕೆಯಲ್ಲಿ, ವಿದ್ಯಾಭ್ಯಾಸದಲ್ಲಿ, ಜಗತ್ತಿನ ಸಂಗತಿಗಳ ಜ್ಞಾನ ಸಂಪಾದನೆಯಲ್ಲಿ ಹಾಗೂ ದುಡಿಮೆಯ ಸಾಮರ್ಥ್ಯದಲ್ಲಿ ಪರಿವರ್ತನೆಯಾಗಬೇಕು ಎಂದು ಹೇಳಿದ್ದ ಇವರು, ಸ್ವತಃ ದೇಶದ ಉದ್ಧಗಲಕ್ಕೂ ತಮ್ಮ ಜ್ಞಾನದ ಮೂಲಕ ಪರಿವರ್ತನಾ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ದುೃವತಾರೆಯಾಗಿದ್ದಾರೆ.

ಸರ್‌ಎಂವಿ ಜೀವನದ ಪ್ರಮುಖ ಕಾಲಘಟ್ಟಗಳು:

  • ಸೆ.15, 1860ರಂದು ಜನನ
  • ಮೈಸೂರು ರಾಜ್ಯದ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಪದವಿ(1881). ಮುಂಬೈ ವಿವಿ ಇಂಜಿನಿಯರಿಂಗ್ ಡಿಗ್ರಿ(1883), ಎಲ್‌ಸಿಇ ಹಾಗೂ ಎಫ್‌ಸಿಇ ಪರೀಕ್ಷೆಗಳಲ್ಲಿ ರ್ಯಾಂಕ್
  • 1884ರ ಫೆಬ್ರವರಿಯಲ್ಲಿ ಮುಂಬೈ ಸರ್ಕಾರದಲ್ಲ ಅಸಿಸ್ಟೆಂಟ್ ಇಂಜಿನಿಯರ್ ಆಗಿ ನೇಮಕ
  • 1898 ಜಪಾನ್ ಪ್ರವಾಸ
  • ಪ್ರವಾಹ ತಡೆಗಾಗಿ ಹೈದರಾಬಾದ್ ಬಳಿ ಮೋಸಿ, ಇಯಾಸಿ ನದಿಗಳಿಗೆ ಅಣೆಕಟ್ಟೆ ನಿರ್ಮಾಣ
  • 1899ರಲ್ಲಿ ನೀರನ್ನು ಪೋಲು ಮಾಡದೇ ಬಳಸುವ ವ್ಯವಸಾಯ ಕ್ರಮದ ವಿಶಿಷ್ಟ ಯೋಜನೆ ನಿರ್ಮಾಣ ನಂತರ ಬ್ಲಾಕ್ ಸಿಸ್ಟಂ ಹೆಸರಿನಿಂದ ಪ್ರಖ್ಯಾತವಾಯಿತು
  • ಆಟೋಮ್ಯಾಟಿಕ್ ಸ್ಲೂಸ್ ಗೇಟ್ಸ್ ನಿರ್ಮಾಣ ಮಾಡಿ ನಂತರ ಇದಕ್ಕೆ ಪೇಟೆಂಟ್
  • 1906ರಲ್ಲಿ ಏಡನ್ ಪಟ್ಟಣದ ಜಲನಿರ್ಗಮನ ಯೋಜನೆ, ಕುಡಿಯುವ ನೀರಿನ ಯೋಜನೆಗಳನ್ನು ಮಾಡಿಕೊಡಲು ನೇಮಕ
  • 1907: ಧಾರವಾಡ ಹಾಗೂ ಬಿಜಾಪುರಗಳಿಗೆ ಕುಡಿಯುವ ನೀರಿನ ಯೋಜನೆಗಳ ಜಾರಿ. ಮುಂಬೈ ನಗರದ ಆರೋಗ್ಯ ಸಮಿತಿಯ ಸದಸ್ಯತ್ವ, ಕಾಲೇಜ್ ಆಫ್ ಸೈನ್ಸ್ ಸುಧಾರಣಾ ಸಮಿತಿಯ ಸದಸ್ಯತ್ವ, ಮುಂಬೈ ಸರ್ಕಾರದ ಸೇವೆಯಿಂದ ಸ್ವಯಂ ನಿವೃತ್ತಿ. ಇಟಲಿ, ಇಂಗ್ಲೆಂಡ್ ಅಮೆರಿಕಾ, ಕೆನಡಾ, ಸ್ವೀಡನ್, ರಷ್ಯಾ ದೇಶಗಳ ಪ್ರವಾಸ
  • 1909: ಮೈಸೂರು ಸಂಸ್ಥಾನದ ಚೀಫ್ ಇಂಜಿನಿಯರ್ ಆಗಿ ನೇಮಕ
  • 1923: ಭಾರತೀಯ ಸೈನ್ಸ್ ಕಾಂಗ್ರೆಸ್‌ನ ಅಧ್ಯಕ್ಷರು
  • ಭಾರತೀಯ ಆರ್ಥಿಕ ಸಮ್ಮೇಳನದ ಅಧ್ಯಕ್ಷ ಸ್ಥಾನ, ಕರಾಚಿ ಮತ್ತು ಮುಂಬೈಗಳಲ್ಲಿ ಪೌರವೆಚ್ಚ ಕಡಿಮೆ ಮಾಡುವ ಸಮಿತಿಗಳ ಕಾರ್ಯ
  • 1935: ಭಾರತದಲ್ಲಿ ಮೋಟಾರು ಕಾರುಗಳನ್ನು ನಿರ್ಮಿಸುವ ಯೋಜನೆ
  • 1939: ವಿಮಾನ ನಿರ್ಮಾಣದ ಕಾರ್ಖಾನೆಗೆ ಯೋಜನೆ
  • 1948: ಮೈಸೂರು ವಿವಿಯಲ್ಲಿ ಗೌರವ ಪಟ್ಟ
  • 1955 ಭಾರತರತ್ನ ಪ್ರಶಸ್ತಿ ಪ್ರದಾನ
  • 1961 ಸೆ.15ರಂದ 100ನೇ ವರ್ಧಂತಿ
  • 1962ರ ಏಪ್ರಿಲ್ 14ರಂದು ನಿಧನ

ಮೈಸೂರು ರಾಜ್ಯದಲ್ಲಿ ಸರ್‌ಎಂವಿ ಮೆರುಗು

  • 1912ರಲ್ಲಿ ಮೈಸೂರಿನ ದಿವಾನರಾಗಿ ನೇಮಕ
  • 1911-31: ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣ
  • 1913: ಸ್ಟೇಟ್ ಬ್ಯಾಂಕ್ ಸ್ಥಾಪನೆ
  • 1915: ಮೈಸೂರು ವಿವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ
  • 1916: ಛೇಂಬರ್ ಆಫ್ ಕಾಮರ್ಸ್, ಸೆಂಚುರಿ ಕ್ಲಬ್, ರೇಷ್ಮೆ, ಸೋಪ್, ಗಂಧದ ಎಣ್ಣೆ, ಲೋಹ, ಚರ್ಮದ ಹದ ಉದ್ಯೋಗಳಿಗೆ ಚಾಲನೆ
  • ಬೆಂಗಳೂರು-ಮೈಸೂರು ರೈಲುಮಾರ್ಗ
  • 1917: ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ
  • 1923: ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆ
  • ಭಟ್ಕಳ ಬಂದರು ಸ್ಥಾಪನೆ
  • ಆಟೋಮೆಟೆಡ್ ಕ್ಟಸ್ಟ್ ಗೇಟ್‌ಗಳ ಸ್ಥಾಪನೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BENGALURUBhadravathiBharat RatnaEngineerIndian Science CongressKannada News WebsiteLatest News KannadamysoreShivamoggaSir M VishweshwaraiahSir MVState bank of Indiaಇಂಜಿನಿಯರ್ಚಿಕ್ಕಬಳ್ಳಾಪುರಬೆಂಗಳೂರುಭದ್ರಾವತಿಭಾರತರತ್ನಭಾರತೀಯ ಸೈನ್ಸ್ ಕಾಂಗ್ರೆಸ್‌ಮೈಸೂರುಮೋಕ್ಷಗುಂಡಂ ವಿಶ್ವೇಶ್ವರಯ್ಯಸರ್.ಎಂ. ವಿಶ್ವೇಶ್ವರಯ್ಯಸರ್‌ಎಂವಿ
Share213Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಇನ್ನು ಮುಂದೆ ಸೆ.15ನ್ನು ಭದ್ರಾವತಿ ಹಬ್ಬವಾಗಿ ಆಚರಣೆ: ಸ್ನೇಹಜೀವಿ ಉಮೇಶ್

Next Post

ಆಹಾರೋದ್ಯಮಿಗಳು ಗ್ರಾಹಕರ ಹಿತ ಕಾಪಾಡುವುದು ಬಹು ಮುಖ್ಯ: ಜಿಲ್ಲಾಧಿಕಾರಿ ಶಿವಕುಮಾರ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಆಹಾರೋದ್ಯಮಿಗಳು ಗ್ರಾಹಕರ ಹಿತ ಕಾಪಾಡುವುದು ಬಹು ಮುಖ್ಯ: ಜಿಲ್ಲಾಧಿಕಾರಿ ಶಿವಕುಮಾರ್

ಆಹಾರೋದ್ಯಮಿಗಳು ಗ್ರಾಹಕರ ಹಿತ ಕಾಪಾಡುವುದು ಬಹು ಮುಖ್ಯ: ಜಿಲ್ಲಾಧಿಕಾರಿ ಶಿವಕುಮಾರ್

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
IND vs AFG India Fight Back After Gurbaz’s Blazing Century

ಭಾರತ–ಅಫ್ಘಾನಿಸ್ತಾನ 1ನೇ ಏಕದಿನ: ಗುರ್ಬಾಜ್ ಸಿಡಿಲಾಟದ ಶತಕಕ್ಕೂ ನಡುವೆ ಭಾರತಕ್ಕೆ ಮೇಲುಗೈ

June 13, 2026
poverty-should-not-be-a-barrier-to-further-education

ಸೊರಬ | ಬಡತನ ಮುಂದಿನ ಶಿಕ್ಷಣಕ್ಕೆ ಅಡ್ಡಿಯಾಗಬಾರದು | ಡಾ. ಪ್ರಭು ಸಾಹುಕಾರ್ ಅಭಿಮತ

June 13, 2026
ಭದ್ರಾವತಿ ಸುಣ್ಣದಹಳ್ಳಿ ಶಾಲೆಯಲ್ಲಿ ಹಸಿರು ಹೆಜ್ಜೆ – ಪರಿಸರ ದಿನ ಆಚರಣೆ

ಭದ್ರಾವತಿ ಸುಣ್ಣದಹಳ್ಳಿ ಶಾಲೆಯಲ್ಲಿ ಹಸಿರು ಹೆಜ್ಜೆ – ಪರಿಸರ ದಿನ ಆಚರಣೆ

June 13, 2026
SWR Bengaluru Division Donates to Old-Age Home

ಬೆಂಗಳೂರು: ವೃದ್ಧಾಶ್ರಮಕ್ಕೆ ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯಿಂದ ನೆರವು

June 13, 2026
yoga | Participate online

India Launches Worldwide Campaign for International Day of Yoga 2026

June 13, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL