ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಾಮಾನ್ಯವಾಗಿ ನೀವು ಬಟ್ಟೆ ಅಂಗಡಿಗೆ ಹೋದರೆ ತರಹೇವಾರಿ ಬಣ್ಣಬಣ್ಣದ ವಸ್ತ್ರಗಳು ನಿಮ್ಮನ್ನು ಸೆಳೆಯುತ್ತವೆ. ಆದರೆ, ನಗರದ ಈ ಅಂಗಡಿಗೆ ಹೋದರೆ ನಿಮಗೆ ಬಟ್ಟೆಗಿಂತಲೂ ಮೊದಲು ಸೆಳೆಯುವುದು ಒಂದು ಅಪರೂಪದ ವಿಗ್ರಹ.
ಹೌದು… ನಗರದ ಕುಚಲಕ್ಕೆ ಕೇರಿಯಲ್ಲಿರುವ ಪಿಜಿಆರ್ ಸಿಲ್ಕ್ಸ್ ಅಂಗಡಿ ಕರುವಿಗೆ ಹಸುವೊಂದು ಹಾಲುಣಿಸುತ್ತಿರುವ ಅಪರೂಪದ ಭಂಗಿಯ ಬೃಹತ್ ವಿಗ್ರಹ ನಿಮ್ಮನ್ನು ಸೆಳೆಯುತ್ತದೆ. ಸದಾ ಗ್ರಾಹಕರಿಂದ ಗಿಜಿಗುಡುವ ಈ ಅಂಗಡಿಯಲ್ಲಿ ಹಸು ತನ್ನ ಕರುವಿಗೆ ಹಾಲೂಡುವ ಭಂಗಿಯ ಸುಂದರ ಪ್ರತಿಮೆ ಇಲ್ಲಿಗೆ ಭೇಟಿ ನೀಡುವವರ ಕಣ್ಸೆಳೆಯುತ್ತದೆ.

ಸಾಮಾನ್ಯವಾಗಿ ದೇವತಾ ವಿಗ್ರಹ, ಭಾವಚಿತ್ರಗಳು ಕಾಣಸಿಗುತ್ತವೆ. ಆದರೆ ಇಲ್ಲಿ ಗೋಮಾತೆಯನ್ನು ನೋಡುವಿರಿ. ಸುಮಾರು ಎರಡೂವರೆ ಅಡಿ ಎತ್ತರದ ಹಿತ್ತಾಳೆ ವಿಗ್ರಹ ಲವಲವಿಕೆಯುಳ್ಳ, ಜೀವಂತ ಭಂಗಿಯಲ್ಲಿರುವಂತೆ ಮನಸ್ಸಿಗೆ ಭಾಸವಾಗುತ್ತದೆ.

ಈ ಕುರಿತು ಮಾತನಾಡಿದ ಅಂಗಡಿ ಮಾಲೀಕ ರವಿಕುಮಾರ್, ನಮ್ಮ ಮನೆಯಲ್ಲಿ ಚಿಕ್ಕಂದಿನಿಂದಲೇ ಹಸು ಸಾಕುವ ಅಭ್ಯಾಸವಿದ್ದು, ಹಸುವಿನ ಸಂಗಡವೇ ತಮ್ಮ ಬಾಲ್ಯ ಕಳೆದಿದ್ದೇನೆ. ತಾವು ವ್ಯಾಪಾರ ಪ್ರಾರಂಭ ಮಾಡಲು ನಿರ್ಧರಿಸಿದ ವೇಳೆ ಶೃಂಗೇರಿಗೆ ಭೇಟಿ ನೀಡಿ ಅಲ್ಲಿನ ಮಳಿಗೆಯೊಂದರಲ್ಲಿ ಈ ಪ್ರತಿಮೆಯನ್ನು ನೋಡಿ ಆಕರ್ಷಿತನಾದೆ. ಅದನ್ನು ಕಂಡ ಕೂಡಲೇ ಮನದಲ್ಲಿ ದೈವೀಕ ಭಾವನೆ ಮೂಡಿತು. ತತಕ್ಷಣವೇ ಇದನ್ನು ಖರೀದಿಸಿ ತಂದಿರುವುದಾಗಿ ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















